For Quick Alerts
ALLOW NOTIFICATIONS
For Daily Alerts

ರಮ್ಯಾರನ್ನು ಆಂಟಿ ಎಂದ ಛೇಡಿಸಿದ ನಿಧಿ ಸುಬ್ಬಯ್ಯ

By ಉದಯರವಿ

ಇಷ್ಟು ದಿನ ರಮ್ಯಾ ಹಾಗೂ ರಾಗಿಣಿ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ, ಶೀತಲ ಸಮರದ ದಿಕ್ಕು ಈಗ ಬದಲಾಗಿದೆ. ರಮ್ಯಾ ಮತ್ತು ನಿಧಿ ಸುಬ್ಬಯ್ಯ ನಡುವೆ ಹೊಸ ಸಮರ ಶುರುವಾಗಿದೆ. ಇವರಿಬ್ಬರ ನಡುವಿನ ವಾಕ್ ಸಮರ ಸ್ಯಾಂಡಲ್ ವುಡ್ ನಲ್ಲಿ ಹೊಸ ಬಿರುಗಾಳಿಯನ್ನೆ ಎಬ್ಬಿಸಿದೆ.

ಇದೆಲ್ಲಾ ಶುರುವಾದದ್ದು ನಿಧಿ ಸುಬ್ಬಯ್ಯ ಅವರ ಟ್ವೀಟ್ ಮೂಲಕ. ಅವರು ತಮ್ಮ ಖಾತೆಯಲ್ಲಿ ರಮ್ಯಾರ ಹೆಸರನ್ನು ಪ್ರಸ್ತಾಪಿಸದೇ ರಣಕಹಳೆ ಊದಿದ್ದಾರೆ. ಈಗ ಮಾತಿನ ಚಕಮಕಿ ಶುರುವಾಗಿದೆ. ಟೈಂಸ್ ಆಫ್ ಇಂಡಿಯಾ ಪತ್ರಿಕೆ ಸಮೀಕ್ಷೆಯಲ್ಲಿ ರಮ್ಯಾ ನಂಬರ್ ಒನ್ ಪಟ್ಟ, ನಿಧಿಗೆ ಆರನೇ ಸ್ಥಾನ ನೀಡಲಾಗಿತ್ತು. ರಮ್ಯಾ ಅವರನ್ನು "Bangalore Times Most desirable woman 2012" ಎಂದು ಆಯ್ಕೆ ಮಾಡಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ನಿಧಿ ಸುಬ್ಬಯ್ಯ, ಈ ರೀತಿಯ ವೈಯಕ್ತಿಕ ಸಮೀಕ್ಷೆಗಳು ತಮಾಷೆಯಾಗಿರುತ್ತವೆ. ನನಗೆ ಇಂತಹದ್ದರಲ್ಲೆಲ್ಲಾ ನಂಬಿಕೆ ಇಲ್ಲ. ನಾನೇನಿದ್ದರೂ ರಾಷ್ಟ್ರೀಯ ಸಮೀಕ್ಷೆಗಳನ್ನು ನಂಬುತ್ತೇನೆ. God bless small minded people! ಎಂದು ಟ್ವೀಟಿಸಿದ್ದರು.

ಇದಕ್ಕೆ ರಮ್ಯಾ ಉತ್ತರ ಹೀಗಿತ್ತು, "ಹೌದು ನಾವು ಸ್ಮಾಲ್ ಮೈಂಡೆಡ್ ಜನರೇ ಇರಬಹುದು. ಆದರೆ ನಮ್ಮ ಹೃದಯ ವಿಶಾಲವಾಗಿದೆ. ಬೇರೆಯವರ ಬಗ್ಗೆ ನಮಗೆ ಗೌರವವೂ ಇದೆ. ಬಂದ ಹಾದಿಯನ್ನು ನಾವು ಮರೆತಿಲ್ಲ" ಎಂದು ಚುಚ್ಚಿದ್ದಾರೆ.

ಇನ್ನೂ ಮುಂದುವರೆದು, ಹೌದು ನರಿ ಮತ್ತು ದ್ರಾಕ್ಷಿ ಕಥೆ ಗೊತ್ತಿರಬೇಕಲ್ಲಾ. ದ್ರಾಕ್ಷಿ ಹಣ್ಣು ಸಿಗದಿದ್ದರೆ ಅದು ಹುಳಿಯಾಗಿಯೇ ಇರುತ್ತದೆ ಎಂದಿದ್ದಾರೆ. ಅವರು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ಮರೆಯಬಾರದು ಎಂಬ ಹಿತವಚವನ್ನೂ ಹೇಳಿದರು.

ಇತ್ತ ರಮ್ಯಾ ಅಭಿಮಾನಿಗಳು ನಿಧಿ ಸುಬ್ಬಯ್ಯ ವಿರುದ್ಧ ತಿರುಗಿಬಿದ್ದರು. ತಮ್ಮ ಆರಾಧಿಸುವ ನಟಿಯ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಅವರು ನಿಧಿಗೆ ಬುದ್ಧಿ ಹೇಳಲು ಹೋದರು. ಇದಕ್ಕೆ ಪ್ರತಿಕ್ರಿಯಿಸಿರುವ ನಿಧಿ, "Don't get so agitated guys. Don't have a life? Haha! Hail aunt." ಎಂದಿದ್ದಾರೆ.

ನಿಧಿ ಅವರ ಮಾತಿಗೆ ರಮ್ಯಾ ಪ್ರತಿಕ್ರಿಯಿಸಿಲ್ಲ. ಏನೇ ಇಬ್ಬರ ನಡುವೆ ಸಣ್ಣ ಕಿಡಿ ಹೊತ್ತಿಕೊಂಡಿದೆ. ಅದು ಮುಂದೊಂದು ದಿನ ದೊಡ್ಡ ಬೆಂಕಿಯಾಗಿ ಬದಲಾಗಲೂ ಬಹುದು. ಆ ರೀತಿ ಆಗದಿರಲಿ ಎಂದು ಬಯಸೋಣ.

We may be small minded but we have a big heart :)we mean good to others & ofcourse we don't forget our roots as much as we branch out :)
— Divya Spandana/Ramya (@divyaspandana) May 20, 2013

@preethup61 @chaitanya_gowda aww.. Don't get so agitated guys.. Don't have a life? Haha! Hail aunt..
— nidhi subbaiah (@nidhisubbaiah) May 20, 2013

@being_rajath for a certain actress Karnataka is 'small' but this is where she started her career. Shame on her for making that comment.
— Divya Spandana/Ramya (@divyaspandana) May 22, 2013

English summary
Actress Nidhi Subbaiah commented on Golden Girl Ramya and she called her 'aunty', while her fans were attacking Nidhi on micro-blogging site Twitter.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X