»   » ರವಿಚಂದ್ರನ್ ಪುತ್ರ ಮನೋರಂಜನ್ 'ರಣಧೀರ' ಸಿನಿಮಾ ನಿಂತ್ಹೋಯ್ತಾ?

ರವಿಚಂದ್ರನ್ ಪುತ್ರ ಮನೋರಂಜನ್ 'ರಣಧೀರ' ಸಿನಿಮಾ ನಿಂತ್ಹೋಯ್ತಾ?

By: ಹರಾ
Subscribe to Filmibeat Kannada

ಸಿನಿಮಾ ಸೆಟ್ಟೇರೋಕ್ಕಿಂತ ಹೆಚ್ಚಾಗಿ, ಚಿತ್ರ ನಿಂತು ಹೋದ ಸುದ್ದಿಗಳೇ ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತಿದೆ.

ಮೊನ್ನೆಯಷ್ಟೇ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ರವರ ಎರಡನೇ ಸಿನಿಮಾ 'R The King' ಶೂಟಿಂಗ್ ಪೋಸ್ಟ್ ಪೋನ್ ಆದ ಸುದ್ದಿಯನ್ನ ನಾವೇ ನಿಮ್ಮ ಮುಂದೆ ಇಟ್ಟಿದ್ವಿ. ಇದೀಗ ರವಿಚಂದ್ರನ್ ಪುತ್ರ ಮನೋರಂಜನ್ ಚೊಚ್ಚಲ ಚಿತ್ರದ ಸರದಿ.

'ರಣಧೀರ....ಪ್ರೇಮಲೋಕದಲ್ಲಿ' ಚಿತ್ರದ ಮೂಲಕ ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್ ಬಣ್ಣದ ಲೋಕಕ್ಕೆ ಅಡಿ ಇಡಬೇಕಿತ್ತು. ಆದ್ರೆ, ಈಗ ಬಂದಿರುವ ಮಾಹಿತಿ ಪ್ರಕಾರ, 'ರಣಧೀರ....ಪ್ರೇಮಲೋಕದಲ್ಲಿ' ಸಿನಿಮಾ ಸದ್ಯಕ್ಕೆ ಸೆಟ್ಟೇರುವ ಸಾಧ್ಯತೆ ಇಲ್ಲ.! [ಸ್ಯಾಂಡಲ್ ವುಡ್ ನಲ್ಲಿ ಹೊಸ ರಣಧೀರನ ಉದಯ]

ಹಾಗಾದ್ರೆ, ಪ್ರಾಜೆಕ್ಟ್ ಡ್ರಾಪ್ ಆಯ್ತಾ? ಮನೋರಂಜನ್ ಮುಂದೇನ್ ಮಾಡ್ತಾರೆ? ಈ ಪ್ರಶ್ನೆಗಳಿಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಉತ್ತರ ಕಂಡುಕೊಂಡಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಗ್ರ್ಯಾಂಡ್ ಆಗಿ ಪುತ್ರನನ್ನ ಪರಿಚಯ ಮಾಡಿದ್ದ ರವಿಚಂದ್ರನ್.!

ಮೇ 30, 2014...ಈ ದಿನವನ್ನು ಮನೋರಂಜನ್ ಮರೆಯುವ ಹಾಗಿಲ್ಲ. ಯಾಕಂದ್ರೆ, ಮೊಟ್ಟ ಮೊದಲ ಬಾರಿಗೆ ಎಲ್ಲರ ಮುಂದೆ ರವಿಚಂದ್ರನ್ 'ನನ್ನ ಮಗ ಹೀರೋ' ಅಂತ ಮನೋರಂಜನ್ ನ ಗ್ರ್ಯಾಂಡ್ ಆಗಿ ಪರಿಚಯಿಸಿದ ದಿನ ಅದು. [ರಣಧೀರನಲ್ಲಿ ಒಂದಾಗಲಿರುವ ಪ್ರೇಮಲೋಕ ಜೋಡಿ]

ರಾಕ್ ಸ್ಟಾರ್ ಆಗಿ ಎಂಟ್ರಿ ಕೊಟ್ಟಿದ್ದ ಮನೋರಂಜನ್

'ನಾನು ಕೂಡ ಕ್ರೇಜಿ ಕಣೋ....ಕ್ರೇಜಿ ಸ್ಟಾರ್ ನ ಕೂಸು ಕಣೋ' ಅಂತ ಅಪ್ಪ ರವಿಚಂದ್ರನ್ ಸಂಯೋಜಿಸಿದ ಹಾಡಿಗೆ ಪುತ್ರ ಮನೋರಂಜನ್ ಭರ್ಜರಿ ಸ್ಟೆಪ್ ಹಾಕುವ ಮೂಲಕ ತಮ್ಮ ಡೆಬ್ಯು 'ರಣಧೀರ...ಪ್ರೇಮಲೋಕದಲ್ಲಿ' ಚಿತ್ರವನ್ನು ಅನೌನ್ಸ್ ಮಾಡಿದರು.

ಇಡೀ ಕನ್ನಡ ಚಿತ್ರರಂಗವೇ ಅಲ್ಲಿ ನೆರೆದಿತ್ತು.!

ಬಹುಶಃ ಯಾವ ಒಬ್ಬ ಸ್ಟಾರ್ ಗೂ ಸಿಕ್ಕಿರದ ರೆಡ್ ಕಾರ್ಪೆಟ್ ಎಂಟ್ರಿ, ಅಂದು ಮನೋರಂಜನ್ ಗೆ ಲಭಿಸಿತ್ತು. ಮನೋರಂಜನ್ ಚಿತ್ರ ಬದುಕಿನ ಪಯಣದ ನಾಂದಿಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಸಾಕ್ಷಿಯಾಗಿದ್ದರು. [ರಣಧೀರನಿಗೆ ದರ್ಶನ್, ಸುದೀಪ್, ಪುನೀತ್ ಸಾಥ್]

ಈಗ 'ರಣಧೀರ...ಪ್ರೇಮಲೋಕದಲ್ಲಿ' ಕಥೆ ಏನಾಯ್ತು.?

ಮಗನ ಸಿನಿಮಾ ಬಗ್ಗೆ ತುಂಬಾ ಕಾಳಜಿ ವಹಿಸಿದ್ದ ರವಿಚಂದ್ರನ್ ಅದ್ದೂರಿಯಾಗಿ ಫೋಟೋ ಶೂಟ್ ನಡೆಸಿದ್ದರು. ರವಿಚಂದ್ರನ್ ಅಂದು ಆಡಿದ್ದ ಮಾತಿನ ಪ್ರಕಾರ, ಇಷ್ಟೊತ್ತಿಗೆ 'ರಣಧೀರ...ಪ್ರೇಮಲೋಕದಲ್ಲಿ' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿರ್ಬೇಕಿತ್ತು. ಆದ್ರೆ, ಫೋಟೋಶೂಟ್ ನಂತರ 'ರಣಧೀರ...ಪ್ರೇಮಲೋಕದಲ್ಲಿ' ಸಿನಿಮಾ ನಿಂತಲ್ಲೇ ನಿಂತಿದೆ.

ಮಗನ ಸಿನಿಮಾ ತಡವೇಕೆ?

'ರಣಧೀರ...ಪ್ರೇಮಲೋಕದಲ್ಲಿ' ಶುರುಮಾಡುವ ಮುನ್ನ ರವಿಚಂದ್ರನ್ 'ಅಪೂರ್ವ' ಚಿತ್ರಕ್ಕೆ ಕೈಹಾಕಿದರು. 'ಅಪೂರ್ವ' ಚಿತ್ರೀಕರಣ ಮುಕ್ತಾಯವಾಗಿ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರೊಂದಿಗೆ ರವಿಚಂದ್ರನ್ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಬಿಜಿಯಿದ್ದರು. ಹೀಗಾಗಿ 'ರಣಧೀರ...ಪ್ರೇಮಲೋಕದಲ್ಲಿ' ಸಿನಿಮಾ ಟೇಕ್ ಆಫ್ ಆಗಿಲ್ಲ.

ಈಗ ಪ್ರಾಜೆಕ್ಟ್ ಡ್ರಾಪ್ ಆಯ್ತಾ?

ಮೂಲಗಳ ಪ್ರಕಾರ, 'ರಣಧೀರ...ಪ್ರೇಮಲೋಕದಲ್ಲಿ' ಸಿನಿಮಾ ಸದ್ಯಕ್ಕೆ ಸೆಟ್ಟೇರುವುದಿಲ್ಲ. ಆನ್ ಸ್ಕ್ರೀನ್ ಮೇಲೆ ಮನೋರಂಜನ್ ಎಂಟ್ರಿ ತಡವಾಗುವುದು ರವಿಚಂದ್ರನ್ ಗೆ ಇಷ್ಟವಿಲ್ಲ. ಬೆಳ್ಳಿತೆರೆ ಮೇಲೆ ಮಿಂಚುವುದಕ್ಕೆ ಮನೋರಂಜನ್ ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ 'ರಣಧೀರ...ಪ್ರೇಮಲೋಕದಲ್ಲಿ' ಬಿಟ್ಟು ಬೇರೆ ಸಿನಿಮಾ ಕಡೆ ಮನೋರಂಜನ್ ಮತ್ತು ರವಿಚಂದ್ರನ್ ಮುಖ ಮಾಡಿದ್ದಾರೆ ಎನ್ನಲಾಗಿದೆ.

ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರದಲ್ಲಿ ಮನೋರಂಜನ್?

ರವಿಚಂದ್ರನ್ ಆಪ್ತ ವಲಯದಿಂದ ಬಂದಿರುವ ಮಾಹಿತಿ ನಿಜವೇ ಆಗಿದ್ದರೆ, ಯಶ್ ರವರ ಫೇವರಿಟ್ ಪ್ರೊಡ್ಯೂಸರ್ಸ್ ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಚಿತ್ರದ ಮೂಲಕ ಮನೋರಂಜನ್ ಸ್ಯಾಂಡಲ್ ವುಡ್ ಗೆ ಕಾಲಿಡಲಿದ್ದಾರೆ.

ಹಾಗಾದ್ರೆ, 'ರಣಧೀರ...ಪ್ರೇಮಲೋಕದಲ್ಲಿ' ಗತಿ?

ರವಿಚಂದ್ರನ್ ಫ್ರೀ ಆಗ್ಬೇಕು, 'ರಣಧೀರ...ಪ್ರೇಮಲೋಕದಲ್ಲಿ' ಸಿನಿಮಾ ಸೆಟ್ಟೇರ್ಬೇಕು. ಸದ್ಯಕ್ಕೆ 'ಅಪೂರ್ವ' ರಿಲೀಸ್ ಆಗ್ಬೇಕು. ಅದಾಗುವವರೆಗೂ ರವಿಚಂದ್ರನ್ ಬೇರೆ ಸಿನಿಮಾಗೆ ಕೈಹಾಕಲ್ಲ. ಆಕ್ಟಿಂಗ್ ನಲ್ಲೂ ಅವರು ಬಿಜಿ. 'ಲಕ್ಷ್ಮಣ' ಸೇರಿದಂತೆ ಹಲವು ಚಿತ್ರಗಳಿಗೆ ರವಿಚಂದ್ರನ್ ಕಮಿಟ್ ಆಗಿದ್ದಾರೆ. ಅದು ಮುಗಿಯುವವರೆಗೂ 'ರಣಧೀರ'ನ ಬಗ್ಗೆ ಮಾತನಾಡುವ ಹಾಗಿಲ್ಲ.

ಅಭಿಮಾನಿಗಳಿಗೆ ನಿರಾಸೆ

ರವಿಚಂದ್ರನ್ ರವರ ಎರಡು ಸೂಪರ್ ಹಿಟ್ ಸಿನಿಮಾಗಳನ್ನ ('ರಣಧೀರ' ಮತ್ತು 'ಪ್ರೇಮಲೋಕ') ಶೀರ್ಷಿಕೆಯಲ್ಲಿಟ್ಟು, ಈ ಚಿತ್ರ ನನ್ನ ಎಲ್ಲಾ ಸಿನಿಮಾಗಳಿಂತ ಬೆಸ್ಟ್ ಆಗಿರಲಿದೆ ಅಂತ ರವಿಚಂದ್ರನ್ ಹೇಳಿದ್ದರು. ಹೀಗಾಗಿ ಮನೋರಂಜನ್ ಡೆಬ್ಯೂ ಚಿತ್ರದ ಬಗ್ಗೆ ಕುತೂಹಲ ಕೊಂಚ ಜಾಸ್ತಿ ಇತ್ತು. ಈಗ ರವಿಚಂದ್ರನ್ ಮಗನ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿಲ್ಲ ಅಂದ್ರೆ ಕ್ರೇಜಿ ಅಭಿಮಾನಿಗಳಿಗೆ ನಿರಾಸೆ ಆಗಲ್ವಾ?

English summary
According to the reports, 'Ranadheera...Premalokadalli', the project which was scheduled to launch Manoranjan, son of Kannada Actor, Director, Music Director V.Ravichandran has taken a back seat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada