»   » ಕತ್ರಿನಾ ನೀ ಮಾಡಿದ್ದು ಸರೀನಾ, ಸಲ್ಲು ಸಂಕಟ ಕೇಳೋರು ಯಾರು?

ಕತ್ರಿನಾ ನೀ ಮಾಡಿದ್ದು ಸರೀನಾ, ಸಲ್ಲು ಸಂಕಟ ಕೇಳೋರು ಯಾರು?

Posted By:
Subscribe to Filmibeat Kannada

ಭಜರಂಗಿ ಭಾಯ್ ಜಾನ್ ಚಿತ್ರ ಸಿಕ್ಕಾಪಟ್ಟೆ ಸಕ್ಸಸ್ ಪಡೀತಾ ಇದ್ರೂ, ಸಲ್ಲುಮಿಯಾಗೆ ಶಾಕಿಂಗ್ ಆಗೋ ಸುದ್ದಿಯೊಂದು ಹೊರಬಿದ್ದಿದೆ.

ಈ ಸುದ್ದಿ ಹೊರಬಿದ್ದ ನಂತರ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಒಬ್ಬ ಭಗ್ನಪ್ರೇಮಿ ಅನ್ನೋದು ಅವರ ಹಣೆಯಲ್ಲಿ ಬರೆದಿದ್ರೆ ಯಾರು ಏನು ಮಾಡೋಕಾಗುತ್ತೆ ಅನ್ನುತ್ತಿದೆ ಬಾಲಿವುಡ್ ಜಗಲಿ. (ಭಜರಂಗಿ ಭಾಯ್ ಜಾನ್ ಚಿತ್ರವಿಮರ್ಶೆ)

ವಿಷಯ ಏನೆಂದರೆ, ಸಲ್ಮಾನ್ ಖಾನ್ ಅವರ ಒಂದು ಕಾಲದ ಡೈಹರ್ಡ್ ಪ್ರೇಯಸಿ ಕತ್ರಿನಾ ಕೈಫ್ ಮತ್ತು ಕಪೂರ್ ವಂಶದ ಕುಡಿ ರಣಬೀರ್ ಕಪೂರ್ ನಡುವೆ ನಿಶ್ಚಿತಾರ್ಥ ನಡೆದು ಹೋಗಿದೆ ಎನ್ನುವ ಸುದ್ದಿ ಒಂದೆರಡು ದಿನಗಳ ಹಿಂದೆ ಬುಗುರಿಯಾಡುತ್ತಿತ್ತು.

ಈಗ ಸುದ್ದಿಗೆ ಪೂರಕ ಎನ್ನುವಂತೆ ಬಾಲಿವುಡ್ ಪ್ರಣಯ ಪಕ್ಷಿಗಳಾದ ಕತ್ರಿನಾ ಮತ್ತು ರಣಬೀರ್ ಮದುವೆಗೆ ಹಿರಿಯರ ಅನುಮತಿ ಪಡೆಯಲು ವಿದೇಶಕ್ಕೆ ಹಾರಿದ್ದಾರೆ. ಲಂಡನ್ ನಲ್ಲಿರುವ ಕತ್ರಿನಾಳ ಹಿರಿಯರ ಅನುಮತಿ ಪಡೆಯಲು ಇಬ್ಬರೂ ವಿದೇಶಕ್ಕೆ ಹೊಂಟ್ ಹೋಗವ್ರೆ.

ಸದ್ದಿಲ್ಲದೇ ಉಂಗುರ ಬದಲಿಸಿಕೊಂಡಿದ್ದರು

ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಸದ್ದಿಲ್ಲದೆ ವಿದೇಶದಲ್ಲಿ ಉಂಗುರ ಬದಲಿಸಿಕೊಂಡಿದ್ದರು. ಕತ್ರಿನಾಳ ಹುಟ್ಟುಹಬ್ಬದ ದಿನ ಅಧಿಕೃತವಾಗಿ ಮದುವೆಗೆ ಪ್ರಪೋಸ್ ಮಾಡಿದ್ದ ರಣಬೀರ್ ಲಂಡನ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವುದು ಖಚಿತ ಮಾಹಿತಿ.

ದುಬಾರಿ ಗಿಫ್ಟ್ ನೀಡಿದ ರಣಬೀರ್

ಇದಾದ ನಂತರ ರಣಬೀರ್, ಕತ್ರಿನಾಳಿಗೆ ದುಬಾರಿ ಪ್ಲಾಟಿನಂ ಮತ್ತು ಡೈಮಂಡ್ ಒಡವೆ ನೀಡಿದ್ದರು. ಈ ಒಡವೆಗಳ ಮೇಲೆ ಕತ್ರಿನಾ ಸಹಿ ಹಾಕುವ ಮೂಲಕ ತನ್ನ ಪ್ರೀತಿಗೆ ಅಧಿಕೃತ ಮೊಹರು ಒತ್ತಿದ್ದಾರಂತೆ.

ಮದುವೆಯ ಬಗ್ಗೆ ರಣಬೀರ್

ಕತ್ರಿನಾ ಜೊತೆಗಿನ ತನ್ನ ಪ್ರೀತಿಯ ಬಗ್ಗೆ ಮುಂದುವರಿದು ಹೇಳಿಕೆ ನೀಡಿದ್ದ ರಣಬೀರ್, ಈ ವರ್ಷ ಇಬ್ಬರೂ ನಮ್ಮ ನಮ್ಮ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದೇವೆ. ಮುಂದಿನ ವರ್ಷ ನಾವಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದೇವೆಂದು ಎಂದು ಖುಷಿಖುಷಿಯಾಗಿ ಹೇಳಿದ್ದಾರೆ.

ಅಜಬ್ ಪ್ರೇಮ್

ಕತ್ರಿನಾ ಮತ್ತು ರಣಬೀರ್ ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಅನ್ನೋ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಆ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಲೇ ಇಬ್ಬರೂ ಡೇಟಿಂಗ್ಸ್ ನಡೆಸುತ್ತಿದ್ದರು. ನಂತರ ಈ ಜೋಡಿ ಸ್ಪೇನ್ ಮತ್ತು ಶ್ರೀಲಂಕಾ ಬೀಚ್ ನಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಈ ವರ್ಷ ಇಬ್ಬರೂ ಬ್ಯೂಸಿ

ಯಶ್ ಚೋಪ್ರಾ ಬ್ಯಾನರಿನ ಹೊಸ ಚಿತ್ರದಲ್ಲಿ ರಣಬೀರ್ ಮತ್ತು ಕತ್ರಿನಾ ಕೈಫ್ ಜೊತೆಯಾಗಿ ನಟಿಸಲಿದ್ದಾರೆ. ಇದಲ್ಲದೇ, ಇನ್ನೂ ಟೈಟಲ್ ಫೈನಲ್ ಆಗದ ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯಿದೆ. ಈ ಚಿತ್ರದಲ್ಲಿ ವರುಣ್ ದವನ್ ಕೂಡಾ ನಟಿಸುತ್ತಿದ್ದಾರೆ.

English summary
Ranbir Kapoor and Katrina Kaif leave for London to talk about their marriage with parents.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada