»   » ಸಿಟ್ಟೆಗೆದ್ದು ಕ್ಯಾಮೆರಾ ಕಿತ್ತುಕೊಂಡ ರಣಬೀರ್

ಸಿಟ್ಟೆಗೆದ್ದು ಕ್ಯಾಮೆರಾ ಕಿತ್ತುಕೊಂಡ ರಣಬೀರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

'ಯೇ ಜವಾನಿ ಹೇ ದೀವಾನಿ' ಚಿತ್ರ ಹಿಟ್ ಆಗಿದ್ದೇ ತಡ ಮುರಿದು ಬಿದ್ದ ರಣಬೀರ್ ಹಾಗೂ ದೀಪಿಕಾ ಮತ್ತೊಮ್ಮೆ ಪ್ರೇಮ ಹಕ್ಕಿಗಳಾಗಿ ವಿಹರಿಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಗಲ್ಲಿ ಗಲ್ಲಿಗಳಲ್ಲಿ ಹಬ್ಬಿತ್ತು. ಆದರೆ, ಲವರ್ ಬಾಯ್ ರಣಬೀರ್ ಯಾರ ಅಂಕೆಗೂ ಸಿಗದ ದುಂಬಿಯಂತೆ ಹಾರುತ್ತಲೇ ಇದ್ದವನು ಈಗ ಆಮದು ಬೆಡಗಿ ಕತ್ರೀನಾ ಕೈಫ್ ಎಂಬ ನೀಳ ಕುಸುಮದ ಗಂಧಕ್ಕೆ ಮನಸೋತಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಿದ್ದರೂ ರಣ್ಬೀರ್ ಗೆ ಯಾಕೋ ಮಾಧ್ಯಮದವರ ಕಣ್ತಪ್ಪಿಸಿ ಓಡಾಡುವುದೇ ಇಷ್ಟ. ಅಕಸ್ಮಾತ್ ಕ್ಯಾಮೆರಾ ಹಿಡಿದವರು ಎದುರಿಗೆ ಸಿಕ್ಕಿದರೆ ಅಷ್ಟೇ ಕಥೆ!

ರಣಬೀರ್ ಹಾಗೂ ಕತ್ರೀನಾ ಕೈಫ್ ಮದುವೆಗೆ ರಣಬೀರ್ ಅಪ್ಪ-ಅಮ್ಮ ಓಕೆ ಎಂದಿದ್ದಾರಂತೆ ಎಂಬ ಸುದ್ದಿಗೆ ಪುಷ್ಟಿ ನೀಡುವಂತೆ ಕಸಿನ್ ಸಿಸ್ಟರ್ ಕರೀನಾ ಕಪೂರ್ ಕೂಡಾ ಇತ್ತೀಚೆಗೆ ಮಹತ್ವದ ಹೇಳಿಕೆ ನೀಡಿದ್ದಳು. ಕಾಫಿ ವಿಥ್ ಕರಣ್ ಎಪಿಸೋಡ್ ನಲ್ಲಿ ರಣಬೀರ್ ಹಾಗೂ ಕರೀನಾ ಒಟ್ಟಿಗೆ ಕಾಣಿಸಿಕೊಂಡಾಗ ಚರ್ಚೆ ನಡುವೆ ಕತ್ರೀನಾ ನಮ್ಮ ಅತ್ತಿಗೆ ಎಂದು ಘೋಷಿಸಿಬಿಟ್ಟಳು.ರಣಬೀರ್ ಕಣ್ಣು ಮಿಟುಕಿಸಿ ನಾಚಿ ನೀರಾಗಿಬಿಟ್ಟ.

ಈ ನಡುವೆ ನಿನ್ನೆ ಯಾಕೋ ರಣಬೀರ್ ಹಿಂದೆ ಬಿದ್ದಿದ್ದ ಪಪರಾಜ್ಜಿಗಳು ಸ್ವಲ್ಪ ಹೆಜ್ಜೆ ಮುಂದಿಟ್ಟು ರಣಬೀರ್ ನ ಅಂತಃಪುರದ ತನಕ ಕಾಲಿಡಲು ಹೋದರಂತೆ. ಅದು ಅವೇಳೆಯಲ್ಲಿ ಇದರಿಂದ ಸಿಟ್ಟಿಗೆದ್ದ ರಣಬೀರ್ ಕಪೂರ್ ಟಿವಿ ವಾಹಿನಿಯೊಂದರ ಕೆಮರಾ ಕಿತ್ತುಕೊಂಡು ವರದಿಗಾರರನ್ನು ಹೊರಗಟ್ಟಿದನಂತೆ. ಮುಂದೇನಾಯ್ತು ಓದಿ...

ನಡೆದಿದ್ದೇನು?

ಹೊರಗಡೆ ರಣಬೀರ್ ಸುತ್ತಲು ಕಾಲಿಡುವುದೇ ತಡ ನೆರಳಿನಂತೆ ಹಿಂಬಾಲಿಸುತ್ತಿದ ಕೆಮರಾಮ್ಯಾನ್ ಗೆ ರಣಬೀರ್ ಹಲ್ಲು ಕಚ್ಚಿಕೊಂಡು ಎಚ್ಚರಿಸಿದನಂತೆ. ಕಿತ್ತುಕೊಂಡ ಕೆಮರಾವನ್ನು ರಣಬೀರ್ ತನ್ನ ಕಾರಿನಲ್ಲಿ ಭದ್ರವಾಗಿ ಇಟ್ಟಿದ್ದಾನೆ ಎಂಬ ಸುದ್ದಿಯಿದೆ.

ಪಾಲಿ ಹಿಲ್ಸ್ ನ ಕೃಷ್ಣ ಬಂಗಲೆ ನಿವಾಸದ ಬಳಿ ಈ ಘಟನೆ ನಡೆದಿದೆ. ಕೆಮೆರಾ ಬೇಕಾದರೆ ನಿಮ್ಮ ಬಾಸ್ ಗೆ ಬಂದು ನನ್ನನ್ನು ನೋಡಲು ಹೇಳು ಎಂದು ರಣಬೀರ್ ಹೇಳಿದ್ದಾನೆ. ರಣಬೀರ್ ಬಾಯಲ್ಲಿ ಅವಾಚ್ಯ ಶಬ್ದಗಳ ಸುರಿಮಳೆಯಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳ ಅಂಬೋಣ.

ಯಾರಿದ್ದರು ಜತೆಗೆ?

ನಿರ್ದೇಶಕ ಮಿತ್ರ ಅಯಾನ್ ಮುಖರ್ಜಿ, ಚಿತ್ರ ನಿರ್ಮಾಪಕ ಮನಮೋಹನ್ ಶೆಟ್ಟಿ ಅವರ ಕಿರಿಯ ಪುತ್ರಿ ಆರತಿ ಶೆಟ್ಟಿ ಅವರೊಂದಿಗೆ ಖಾರ್ ನಲ್ಲಿರುವ ಆಲಿವ್ ರೆಸ್ಟೋರೆಂಟ್ ಗೆ ರಣಬೀರ್ ಹೋಗಿ ಬರುವಾಗ ಈ ಘಟನೆ ನಡೆದಿದೆ.

ಪಪ್ಪರಾಜ್ಜಿಗಳ ಇರುವಿಕೆ ಬಗ್ಗೆ ತಿಳಿದ ರಣಬೀರ್ ಕಾರು ಬಿಟ್ಟು ಆಟೋರಿಕ್ಷಾ ಹತ್ತಿ ಮನೆ ಕಡೆ ತೆರಳಿದ್ದಾನೆ. ರಣಬೀರ್ ಕಾರನ್ನು ಆಯಾನ್ ಮನೆ ತನಕ ತಂದಿದ್ದಾನೆ. ಅಲ್ಲಿ ಕಾಯುತ್ತಿದ್ದ ರಣಬೀರ್ ಜತೆಗೆ ಮತ್ತೊಬ್ಬಳು ಯುವತಿ ಇದ್ದಳು ಎನ್ನಲಾಗಿದೆ. ಆಕೆ ಕತ್ರೀನಾ ಆಗಿರಲಿಲ್ಲ ಎಂಬುದು ವಿಶೇಷ.

ಕೈಫ್ ಜತೆ ಸುತ್ತಾಟ

ದೀಪಿಕಾ ಜೊತೆ ಸುತ್ತಾಡಿದ್ದ ರಣಬೀರ್ ಈಗ ಕತ್ರೀನಾ ಜೊತೆ ಇತ್ತೀಚೆಗೆ ದುಬೈಗೆ ಹಾರಿದ್ದರು. ನಂತರ ಸ್ಪೇನಿನಲ್ಲಿ ವಿಹಾರ ಮಾಡಿದ್ದರು. ಬಿಕಿನಿಯಲ್ಲಿದ್ದ ಕತ್ರೀನಾ ಚಿತ್ರಗಳು ಲೀಕ್ ಆಗಿ ಭಾರಿ ಸುದ್ದಿಯಾಗಿತ್ತು.

ರಣಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಜೋಡಿಗೆ ಅಭಿಮಾನಿಗಳು ಕೂಡಾ ಓಕೆ ಎಂದಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಇಬ್ಬರ ಮದುವೆಗೆ ಶುಭ ಹಾರೈಕೆ ಈಗಲೇ ಆರಂಭವಾಗಿದೆ. ಕೆಲವರು ದೀಪಿಕಾನೇ ಸರಿ ಎಂದಿದ್ದಾರೆ ಕೂಡಾ

ಕೋಳಿ ಜಗಳ

ರಣಬೀರ್ ಕಪೂರ್ ಜೊತೆ ನಟಿಸಿ ಹಿಟ್ ಚಿತ್ರಗಳನ್ನು ನೀಡಿದ ಕತ್ರೀನಾ ಕೈಫ್ ಅವರು ರಣಬೀರ್ ಜೊತೆ ಇದ್ದಾಗ ಸಲ್ಮಾನ್ ಕೂಡಾ ಮುನಿಸಿಕೊಂಡಿದ್ದ. ದೀಪಿಕಾ ಜೊತೆ ನಟಿಸಿದ ರಣಬೀರ್ ಆಕೆ ಜೊತೆ ಹೆಚ್ಚು ಓಡಾಡಲು ಶುರು ಮಾಡಿದ್ದ.

ಕತ್ರೀನಾ ಹಾಗೂ ದೀಪಿಕಾ ಇಬ್ಬರು ರಣಬೀರ್ ಒಲಿಸಿಕೊಳ್ಳಲು ಇನ್ನಿಲ್ಲದ ಸಾಹಸ ಮಾಡಿದ್ದು, ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದು ಪರಸ್ಪರ ಕಿತ್ತಾಡಿದ್ದು ಗುಟ್ಟಿನ ವಿಷಯವೇನಲ್ಲ.

ರಣಬೀರ್ ಗೆ ಸಿಟ್ಟೇಕೆ?

ಇಷ್ಟಕ್ಕೂ ರಣಬೀರ್ ಗೆ ಸಿಟ್ಟೇಕೆ? ಕೈಫ್ ಬದಲು ಬೇರೆ ಯುವತಿ ಇದ್ದದ್ದು ಗೊತ್ತಾಯಿತು ಎಂದೇ? ಅಥವಾ ಕೈಫ್ ಜತೆಗಿನ ಸಂಬಂಧ ಜಗಜ್ಜಾಹೀರಾದರೂ ಒಪ್ಪಿಕೊಳ್ಳದೆ ನುಣುಚಿಕೊಳ್ಳುವುದೇಕೆ? ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸಲಾಗಿದೆ. ರಣಬೀರ್ ಮಾತ್ರ ಉತ್ತರಿಸಲು ತಯಾರಿಲ್ಲ

English summary
Ranbir Kapoor is in the news again but all for the wrong reasons. The actor apparently snatched a camera from a paparazzi's hand and was apparently reported to be yelling at the media person.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada