»   » ಸದ್ದಿಲ್ಲದೇ ಮದುವೆ ದಿನಾಂಕ ನಿಗದಿ ಮಾಡಿದ ದೀಪಿಕಾ-ರಣ್ವೀರ್ ಕುಟುಂಬ.!

ಸದ್ದಿಲ್ಲದೇ ಮದುವೆ ದಿನಾಂಕ ನಿಗದಿ ಮಾಡಿದ ದೀಪಿಕಾ-ರಣ್ವೀರ್ ಕುಟುಂಬ.!

Posted By:
Subscribe to Filmibeat Kannada

ಶ್ರೀದೇವಿಯ ಅವರ ಅಕಾಲಿಕ ಮರಣದ ನಡುವೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಜೋಡಿಯ ಮದುವೆ ಸುದ್ದಿ ಮರೆತುಬಿಟ್ಟಿದ್ದಾರೆ. ಹೌದು, ಸದ್ದಿಲ್ಲದೇ ಎರಡು ಕುಟುಂಬದವರು ಮದುವೆ ಬಗ್ಗೆ ಮಾತಕತೆ ನಡೆಸಿ ಮದುವೆ ದಿನಾಂಕವನ್ನ ನಿಗದಿ ಮಾಡಿದ್ದಾರಂತೆ.

ಇತ್ತೀಚಿಗಷ್ಟೆ ದೀಪಿಕಾ ಅವರ ತಂದೆ ಪ್ರಕಾಶ್ ಪಡುಕೋಣೆ ದಂಪತಿ ಬೆಂಗಳೂರಿನಿಂದ ಮುಂಬೈನಲ್ಲಿರುವ ದೀಪಿಕಾ ನಿವಾಸಕ್ಕೆ ಆಗಮಿಸಿ, ರಣ್ವೀರ್ ಸಿಂಗ್ ಕುಟುಂಬದ ಜೊತೆ ವಿವಾಹದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ದೀಪಿಕಾಗೆ ಕಾಡುತ್ತಿದ್ದ ದೀರ್ಘಕಾಲದ ನೋವು: ನಾಲ್ಕೈದು ತಿಂಗಳು ವಿಶ್ರಾಂತಿ.!

ಸದ್ಯ ಈ ಎರಡು ಕುಟುಂಬದವರ ಭೇಟಿಯ ನಂತರ ಹೊರಬಿದ್ದಿರುವ ಮಾಹಿತಿ ಪ್ರಕಾರ ಇನ್ನು ಮೂರ್ನಾಲ್ಕು ತಿಂಗಳಲ್ಲಿ ಸ್ಟಾರ್ ಜೋಡಿ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ.

Ranveer Singh and Deepika Padukone's wedding date

ಇವರಿಬ್ಬರ ಮದುವೆ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಸಲು ನಿಶ್ಚಯಿಸಿದ್ದಾರೆ. ದಕ್ಷಿಣ ಭಾರತದ ಸಂಪ್ರದಾಯದಂತೆ ವಿವಾಹ ನಡೆಯಲಿದ್ದು, ಆರತಕ್ಷತೆಯನ್ನ ವಿಜೃಂಭಣೆಯಿಂದ ಆಯೋಜಿಸಲು ನಿರ್ಧರಿಸಲಾದೆ.

ಸೋನಂ ಕಪೂರ್ ವಿರುದ್ಧ ಗರಂ ಆದ ದೀಪಿಕಾ ಪಡುಕೋಣೆ ಅಭಿಮಾನಿಗಳು.!

ಸದ್ಯ, ದೀಪಿಕಾ ಪಡುಕೋಣೆ ರಣ್ವೀರ್ ಸಿಂಗ್ ಫ್ಯಾಮಿಲಿ ಜೊತೆ ಮದುವೆಗಾಗಿ ಶಾಪಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಕಳೆದ ಕೆಲ ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದು, ಹಸೆಮಣೆ ಏರಲು ಸಿದ್ದವಾಗಿದ್ದಾರೆ.

English summary
According to well-placed insiders, Ranveer and Deepika's parents have already met to finalise the wedding date. Apparently, Prakash and Ujjala Padukone flew down from Bengaluru to Mumbai last week for the same.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada