For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ದೂರಾಗಿ ವರ್ಷಗಳೇ ಕಳೆದಿವೆ!

  |

  ಸಿನಿಮಾ ರಂಗದಲ್ಲಿ ಹಲವು ಹೆಸರುಗಳ ಸುತ್ತಲೂ ಲವ್ ಗಾಸಿಪ್, ಡೇಟಿಂಗ್ ಗಾಸಿಪ್, ಸುತ್ತಿಕೊಳ್ಳುತ್ತಲೇ ಇರುತ್ತೆ. ಇದರ ಜೊತೆಗೆ ಸಿನಿಮಾ ತಾರೆಯರ ಡೇಟಿಂಗ್ ಸುದ್ದಿ, ಬ್ರೇಕಪ್ ಸುದ್ದಿ, ಮದುವೆ ಸುದ್ದಿ, ವಿಚ್ಛೇದನದ ಸುದ್ದಿ ಸದಾ ಒಂದಿಲ್ಲೊಂದು ರೂಪದಲ್ಲಿ ಸದ್ದು ಮಾಡುತ್ತಲೇ ಇರುತ್ತೆ. ಇದು ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡರನ್ನು ಬಿಟ್ಟಿಲ್ಲ.

  ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಇಲ್ಲೇ ಸಾಕಷ್ಟು ಅಭಿಮಾನಿ ಬಳಗವನ್ನು ಪಡೆದುಕೊಂಡ ಬಳಿಕ ತೆಲುಗಿಗೆ ಎಂಟ್ರಿಕೊಟ್ಟರು. ರಶ್ಮಿಕಾ ಮಂದಣ್ಣ ತೆಲುಗಿಗೆ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು ಆಕೆಯ ಸುತ್ತ ಹಲವು ಗಾಸಿಪ್ ಹರಿದಾಡಲು ಶುರುವಾಗಿತ್ತು.

  ರಶ್ಮಿಕಾ ಮಂದಣ್ಣ ನನ್ನ ಡಾರ್ಲಿಂಗ್, ಆದರೆ...! ವಿಜಯ್ ದೇವರಕೊಂಡ ಹೇಳಿದ್ದೇನು?ರಶ್ಮಿಕಾ ಮಂದಣ್ಣ ನನ್ನ ಡಾರ್ಲಿಂಗ್, ಆದರೆ...! ವಿಜಯ್ ದೇವರಕೊಂಡ ಹೇಳಿದ್ದೇನು?

  ಹೌದು, ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಸಿನಿಮಾದಲ್ಲಿ ನಟಿಸಿದ ಬಳಿಕ ವಿಜಯ್ ದೇವರಕೊಂಡ, ರಶ್ಮಿಕಾ ಹೆಸರು ಹೆಚ್ಚಾಗಿದೆ ಸದ್ದು ಮಾಡಿತು. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಕೂಡ ಪ್ರೀತಿಯಲ್ಲಿ ಇದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ, ಎನ್ನುವ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತೆ. ಆದರೆ ಇದೇ ಮೊದಲ ಬಾರಿಗೆ ಇವರ ಬ್ರೇಕಪ್ ಸುದ್ದಿ ಮುನ್ನೆಲೆಗೆ ಬಂದಿದೆ.

  ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ದೂರ,ದೂರ!

  ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ದೂರ,ದೂರ!

  ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬಗ್ಗೆ ನಾನಾ ಸುದ್ದಿಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಇಬ್ಬರೂ ಲವ್‌ನಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಒಂದು ಕಡೆಯಾದರೆ, ಇದೀಗ ಈ ಜೋಡಿ ಬ್ರೇಕಪ್ ಮಾಡಿಕೊಂಡು ದೂರಾಗಿದೆ ಎನ್ನುವ ಸುದ್ದಿ ಸಂಚಲನ ಮೂಡಿಸಿದೆ. ಈ ವರದಿಯ ಪ್ರಕಾರ ಎರಡು ವರ್ಷಗಳ ಹಿಂದೆಯೇ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಪರಸ್ಪರ ದೂರವಾಗಿದ್ದಾರೆ. ಹಾಗಾಗಿಯೇ ಇಬ್ಬರೂ ಕೆಲಕಾಲ ಅಂತರವನ್ನು ಕಾಯ್ದುಕೊಂಡಿದ್ದಾರೆ ಎನ್ನುವ ಸುದ್ದಿ ಕೂಡಾ ವರದಿಯಾಗಿದೆ.

  ಸ್ನೇಹಿತರಂತೆ ಗುರುತಿಸಿಕೊಂಡ ಜೋಡಿ!

  ಸ್ನೇಹಿತರಂತೆ ಗುರುತಿಸಿಕೊಂಡ ಜೋಡಿ!

  ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬಗ್ಗೆ ಹತ್ತಾರು ಸುದ್ದಿಗಳು ಹರಿದಾಡುತ್ತಿವೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮಾತ್ರ ಇಬ್ಬರು ಉತ್ತಮ ಸ್ನೇಹಿತರಂತೆ ಕಾಣಿಸುತ್ತಾರೆ. ಈ ಜೋಡಿ ಎಲ್ಲೂ ಕೂಡ ಅಧಿಕೃತವಾಗಿ ಪ್ರೀತಿಯ ಬಗ್ಗೆ ಹೇಳಿಕೊಂಡಿಲ್ಲ. ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವ ಬಗ್ಗೆಯೂ ಯಾವುದೇ ಸುಳಿವು ಕೊಟ್ಟಿಲ್ಲ. ಆದರೂ ಕೂಡ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದೆ ಎನ್ನುವ ಬಗ್ಗೆ ಕೆಲವು ವರ್ಷಗಳಿಂದಲೂ ಗಾಸಿಪ್ ಶುರುವಾಗಿಬಿಟ್ಟಿದೆ. ಆದರೆ ಇದಕ್ಕೆಲ್ಲ ಬ್ರೇಕ್ ಹಾಕುವಂತೆ ಇವರು ದೂರ ಆಗಿದ್ದಾರೆ ಎನ್ನುವ ಸುದ್ದಿ ಇದೀಗ ಹೊರ ಬಂದಿದೆ.

  ರಕ್ಷಿತ್- ರಶ್ಮಿಕಾ ಬ್ರೇಕಪ್!

  ರಕ್ಷಿತ್- ರಶ್ಮಿಕಾ ಬ್ರೇಕಪ್!

  ಇನ್ನು ನಟಿ ರಶ್ಮಿಕಾ ಮಂದಣ್ಣ ಕನ್ನಡದ ನಟ ರಕ್ಷಿತ್ ಶೆಟ್ಟಿ ಜೊತೆಗೆ ಮದುವೆಯಾಗಲು ಮುಂದಾಗಿದ್ದರು. ಈ ಜೋಡಿಯ ನಿಶ್ಚಿತಾರ್ಥ ಕೂಡ ನೆರವೇರಿತ್ತು. ಆದರೆ ಕಾರಣಾಂತರಗಳಿಂದ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಸಂಬಂಧ ಮುರಿದು ಬಿತ್ತು. ರಕ್ಷಿತ್ ಜೊತೆಗಿನ ಬ್ರೇಕಪ್ ಬಳಿಕ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಸಾಲು, ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬ್ರೇಕಪ್ ಆದ ಬಳಿಕವೇ ವಿಜಯ್ ದೇವರಕೊಂಡ ಜೊತೆಗೆ ಆಕೆಯ ಹೆಸರು ತಳುಕು ಹಾಕಿಕೊಂಡಿದೆ. ಆದರೆ ಇಂದಿಗೂ ಕೂಡ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಉತ್ತಮ ಸ್ನೇಹಿತರಂತೆ ಬಿಂಬಿತವಾಗಿದ್ದಾರೆ.

  Recommended Video

  ಸಿನಿಮಾ ನನ್ನ Identity ನಾನು ಒಳಗೆ ಹೋಗ್ತಾ ಇಲ್ಲ | Kiccha Sudeep | BigBoss OTT Kannada | Filmibeat Kannada
  ರಶ್ಮಿಕಾಳನ್ನು ಹೊಗಳಿದ ವಿಜಯ್!

  ರಶ್ಮಿಕಾಳನ್ನು ಹೊಗಳಿದ ವಿಜಯ್!

  ದೊಡ್ಡ ಗ್ಯಾಪ್ ಬಳಿಕ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದರು. ವಿಜಯ್ ದೇವರಕೊಂಡ ಹುಟ್ಟುಹಬ್ಬ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸುಮ್ಮನ್ನೇ ಇದ್ದ ನಟಿ ರಶ್ಮಿಕಾ ಮಂದಣ್ಣ, ಲೈಗರ್ ಟೀಸರ್ ಬಗ್ಗೆ ಹೊಗಳಿ ಟ್ವೀಟ್ ಮಾಡಿದ್ದರು. ಇನ್ನು ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಬಗ್ಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಒಂದಾಗಿದ್ದಾರೆ ಎನ್ನು ಸುದ್ದಿಗೂ ಮೊದಲೇ ದೂರಾದ ಸುದ್ದಿ ಬಂದಿದೆ ಇನ್ನು ಮುಂದೆ ಮತ್ತೇ ಈ ಜೋಡಿ ಒಟ್ಟಿಗೆ ಬರಲಿದ್ಯಾ ಎನ್ನುವುದನ್ನು ನೊಡಬೇಕಿದೆ.

  English summary
  Rashmika Mandanna Vijay Devarakonda Relationship Broke Two Years Back Only, Know More,
  Wednesday, August 3, 2022, 10:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X