Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: ಕನಿಷ್ಠ 7 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕೆಜಿಎಫ್-2' ಚಿತ್ರಕ್ಕಾಗಿ ಈ ಬಾಲಿವುಡ್ ನಟಿ ಬರೋದು ಖಚಿತ.!
ಮುಂದಿನ ವಾರದಿಂದ ಕೆಜಿಎಫ್ ಚಿತ್ರೀಕರಣದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಲಿದ್ದಾರೆ. ಈಗಾಗಲೇ ಕೆಜಿಎಫ್ ಶೂಟಿಂಗ್ ಆರಂಭವಾಗಿದ್ದು, ಕೆಲಸ ನಡೆಯುತ್ತಿದೆ. ಜೂನ್ 6 ರಂದು ಯಶ್ ಕೆಜಿಎಫ್ ತಂಡವನ್ನ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದರ ಬೆನ್ನಲ್ಲೆ ಕೆಜಿಎಫ್ ಚಿತ್ರಕ್ಕಾಗಿ ಬಾಲಿವುಡ್ ನ ಈ ನಟಿ ಬರೋದು ಬಹುತೇಕ ಖಚಿತ ಎನ್ನಲಾಗಿದೆ. ಈ ಮೂಲಕ ಸುಮಾರು ಎರಡು ದಶಕಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ಬ್ಯೂಟಿ ಪ್ರವೇಶ ಮಾಡ್ತಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಕಥೆ ಬಗ್ಗೆ ಹೀಗೊಂದು ಚರ್ಚೆ, ಇದು ನಿಜ ಆದ್ರೆ.?
ಕೆಜಿಎಫ್ ಮೊದಲ ಭಾಗದಲ್ಲಿ ಸಣ್ಣ ಸುಳಿವು ನೀಡಿದ್ದ ಆ ಪಾತ್ರದಲ್ಲಿ ಯಾರು ನಟಿಸಬಹುದು ಎಂಬ ಕುತೂಹಲ ಕಾಡ್ತಿತ್ತು. ಅಂತಿಮವಾಗಿ ಅದಕ್ಕೆ ಉತ್ತರ ಸಿಕ್ಕಿದ್ದು, ಅಧಿಕೃತವಾಗಿ ಘೋಷಣೆಯೊಂದೆ ಬಾಕಿ. ಅಷ್ಟಕ್ಕೂ, ಯಾರದು?

ಕೆಜಿಎಫ್ ತಂಡದಲ್ಲಿ ರವೀನಾ ಟಂಡನ್.!
'ಕೆಜಿಎಫ್ ಚಾಪ್ಟರ್-2' ಕಥೆಯಲ್ಲಿ ಬರಲಿರುವ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಬರೋದು ಖಚಿತ ಎನ್ನಲಾಗಿದೆ. 1970-80 ಕಾಲಘಟ್ಟದ ಪ್ರಧಾನಮಂತ್ರಿ ಪಾತ್ರದಲ್ಲಿ ರವೀನಾ ನಟಿಸಲಿದ್ದಾರಂತೆ. ಭಾಗ 2ರಲ್ಲಿ ಈ ಪಾತ್ರ ಬರಲಿದ್ದು, ಮೊದಲ ಭಾಗದಲ್ಲಿ ಕೇವಲ ಝಲಕ್ ಮಾತ್ರ ತೋರಿಸಲಾಗಿತ್ತು.
'ಕೆಜಿಎಫ್ ಚಾಪ್ಟರ್-2' ಚಿತ್ರಕ್ಕೆ ಬರ್ತಾರಂತೆ ಬಾಲಿವುಡ್ ಖ್ಯಾತ ನಟಿ.?

ಉಪೇಂದ್ರ ನಂತರ ಕನ್ನಡಕ್ಕೆ.!
1999ರಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ಉಪೇಂದ್ರ ಚಿತ್ರದಲ್ಲಿ ರವೀನಾ ಟಂಡನ್ ಅಭಿನಯಿಸಿದ್ದರು. ಇದೇ ರವೀನಾ ಅವರ ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾವಾಗಿದೆ. ಅದಾದ ಬಳಿಕ ಈಗ ಕೆಜಿಎಫ್ ಚಿತ್ರಕ್ಕಾಗಿ ಮತ್ತೆ ಸ್ಯಾಂಡಲ್ ವುಡ್ ಕಡೆ ಬರುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ಕೆಜಿಎಫ್ 2 ಬಗ್ಗೆ ಕಾಡುತ್ತಿರುವ ಪ್ರಶ್ನೆಗಳು: ಅಚ್ಚರಿಯಾದ್ರೂ ನಂಬಲೇಬೇಕು.!

ಅನಿಲ್ ತಡಾನಿ ವಿತರಣೆ ಮಾಡಿದ್ದರು
ಕೆಜಿಎಫ್ ಚಾಪ್ಟರ್ 1 ಚಿತ್ರವನ್ನ ಬಾಲಿವುಡ್ ನಲ್ಲಿ ವಿತರಣೆ ಮಾಡಿದ್ದು, ರವೀನಾ ಪತಿ ಅನಿಲ್ ತಡಾನಿ. ಸ್ವತಃ ರವೀನಾ ಕೂಡ ಕೆಜಿಎಫ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಎರಡನೇ ಭಾಗವನ್ನ ತಮ್ಮದೇ ಪ್ರೊಡಕ್ಷನ್ ವಿತರಣೆ ಮಾಡ್ತಿದ್ದು, ಇದರ ಜೊತೆಯಲ್ಲಿ ನಟಿಸುವ ಮನಸ್ಸು ಕೂಡ ಮಾಡಿದ್ದಾರೆ.

ಇಂದಿರಾ ಗಾಂಧಿ ಪಾತ್ರ.!
ಕೆಜಿಎಫ್ ಚಿತ್ರದಲ್ಲಿ ಪ್ರಧಾನಮಂತ್ರಿ ಪಾತ್ರ ಬರಲಿದೆ. ಆ ಪಾತ್ರಕ್ಕಾಗಿ ರವೀನಾ ಬರ್ತಿದ್ದಾರೆ. ಈ ಮೊದಲು ರಮ್ಯಾಕೃಷ್ಣ ಅವರು ಈ ಪಾತ್ರಕ್ಕಾಗಿ ಬರಬಹುದು ಎನ್ನಲಾಗಿತ್ತು. ಆದರೆ ಬಾಲಿವುಡ್ ನಟಿಗೆ ಈ ಅವಕಾಶ ಹೋಗಿದೆ. 1970 ಅಂದ್ರೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರವನ್ನ ಹೋಲುವಂತ ಕ್ಯಾರೆಕ್ಟರ್ ಅದು ಎನ್ನಲಾಗಿದೆ. ರಿಮಿಕಾ ಸೇನ್ ಎಂಬ ಹೆಸರಿಟ್ಟು ಈ ಪಾತ್ರ ಮಾಡಲಾಗುತ್ತಿದೆ.

ಸಂಜಯ್ ದತ್ ಬರಬಹುದು.!
ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸುವುದು ಪಕ್ಕಾ ಎನ್ನಲಾಗಿದೆ. ಆದ್ರೆ, ಅಧಿಕೃತವಾಗಿ ಈ ಮಾಹಿತಿ ಹೊರಬಿದ್ದಿಲ್ಲ. ಪ್ರಮುಖ ವಿಲನ್ ಗಳ ಪೈಕಿ ದತ್ ಕೂಡ ಒಬ್ಬರಾಗಲಿದ್ದಾರಂತೆ.