»   » ರವಿಚಂದ್ರನ್ ಮಗನ ಸಿನಿಮಾ ನಿಂತುಹೋಯ್ತಂತೆ.! ಹೌದಾ.?

ರವಿಚಂದ್ರನ್ ಮಗನ ಸಿನಿಮಾ ನಿಂತುಹೋಯ್ತಂತೆ.! ಹೌದಾ.?

Posted By: Pavithra
Subscribe to Filmibeat Kannada

'ನವೆಂಬರ್ ನಲ್ಲಿ ನಾನು ಅವಳು'...ಟೈಟಲ್ ನಿಂದಲೇ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದ ಸಿನಿಮಾ. ಈ ಸಿನಿಮಾ ಜನರಲ್ಲಿ ಕ್ಯೂರಿಯಾಸಿಟಿ ಮೂಡಿಸುವುದಕ್ಕೆ ಎರಡು ಕಾರಣಗಳಿತ್ತು. ಒಂದು ಚಿತ್ರದ ನಿರ್ದೇಶಕ ಮತ್ತೊಂದು ಸಿನಿಮಾದ ನಾಯಕ.

ಹೌದು, ಈ ಸಿನಿಮಾದ ಮೂಲಕ ಕ್ರೇಜಿ ಸ್ಟಾರ್ ನ ಕಿರಿಯ ಪುತ್ರ ವಿಕ್ರಂ ರವಿಚಂದ್ರನ್ ಚಿತ್ರರಂಗಕ್ಕೆ ನಾಯಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಆದ್ರೆ ಈ ಸಿನಿಮಾದ ಟೀಸರ್ ರಿಲೀಸ್ ಆದ ನಂತ್ರ ಸೌಂಡ್ ಇಲ್ಲದಂತೆ ಸೈಲೆಂಟ್ ಆಗೋಗಿದೆ.

Ravichandran second son Vikram debut movie shelved.?

ಪ್ರಾರಂಭದಲ್ಲೇ ಸಿನಿಮಾ ನಿಂತೋಯ್ತಾ ? ಅನ್ನೋ ಸುದ್ದಿ ಸದ್ಯ ಗಾಂಧಿನಗರದಲ್ಲಿ ಹರಿದಾಡ್ತಿದೆ. ಆದ್ರೆ ಸಿನಿಮಾ ತಂಡ ಮಾತ್ರ, ''ಇಲ್ಲ ಚಿತ್ರೀಕರಣ ಇನ್ನೂ ಆರು ತಿಂಗಳು ಲೇಟ್ ಆಗುತ್ತೆ ಅಷ್ಟೇ'' ಅನ್ನೋ ಕಾರಣ ನೀಡುತ್ತಿದೆ. ಇತ್ತ ನಿರ್ದೇಶಕರಿಗೆ ಫೋನ್ ಮಾಡಿದ್ರೆ ಆ ಕಡೆಯಿಂದ ಅವ್ರ ಸದ್ದೇ ಇಲ್ಲಾ.!

ಸದ್ಯ ಗಾಸಿಪ್ ಹಬ್ಬಿರುವ ಪ್ರಕಾರ ನವೆಂಬರ್ ನಲ್ಲಿ ನಾನು ಅವಳು ಚಿತ್ರದ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಬಳಿ ಹಣ ಇಲ್ಲ.

Ravichandran second son Vikram debut movie shelved.?

ಆದ್ದರಿಂದ, ಸಿನಿಮಾ ಚಿತ್ರೀಕರಣ ಸ್ಟಾಪ್ ಆಗಿದ್ಯಂತೆ. ಇನ್ನು ವಿಕ್ಕಿ ಮಾತ್ರ ಶೂಟಿಂಗ್ ಗಾಗಿ ಪರ್ಫೆಕ್ಟ್ ಆಗಿ ನಾನು ಆಲ್ ಟೈಂ ರೆಡಿ ಅಂತಿದ್ದಾರೆ. ಇನ್ನು ನಿರ್ದೇಶಕ ನಾಗಶೇಖರ್ ನಿರ್ಮಾಪಕರಿಗೆ ''ನೀವ್ ಸಿನಿಮಾ ಮಾಡೋದಾದ್ರೆ ಹೇಳಿ, ಇಲ್ಲಾ ನಾನು ಬೇರೆ ಸಿನಿಮಾ ನೋಡ್ಕೋತೀನಿ'' ಅಂತಿದ್ದಾರೆ.

ಒಟ್ಟಾರೆ ಈ ನಿರ್ಮಾಪಕರ ಕೈಗೆ ಹೋದ ಯಾವ ಹೀರೋಗಳ ಸಿನಿಮಾ ಎರಡು ವರ್ಷಕ್ಕೆ ಮುಂಚೆ ತೆರೆ ಕಾಣೋದಂತೂ ಡೌಟು ಅಂತಿದ್ದಾರೆ ಚಿತ್ರರಂಗದ ಮಂದಿ.

English summary
Ravichandran's second son Vikram debut movie shelved. ರವಿಚಂದ್ರನ್ ಮಗನ ಸಿನಿಮಾ ನಿಂತುಹೋಯ್ತಂತೆ.! ಹೌದಾ.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X