Just In
Don't Miss!
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Sports
ಭಾರತಕ್ಕೆ ಸರಣಿ ಗೆಲುವು: ನನ್ನ ಜೀವನದ ಶ್ರೇಷ್ಠವಾದ ಕ್ಷಣ ಎಂದು ಬಣ್ಣಿಸಿದ ರಿಷಭ್ ಪಂತ್
- News
ಮೈಸೂರನ್ನು ಯೋಗ ನಗರಿಯಾಗಿಸಲು ಜಿಎಸ್ಎಸ್ ಪಣ!
- Lifestyle
ಕೋವಿಡ್ ವ್ಯಾಕ್ಸಿನೇಷನ್ ಗೆ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ
- Education
KPSC FDA Admit Card 2021: ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡುವುದು ಹೇಗೆ ?
- Finance
ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್: ಬೆಂಗಳೂರಲ್ಲಿ ಡೀಸೆಲ್ ರು. 79.94
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಟಾರ್ ನಟಿಯರೆಲ್ಲಾ ಮಾಲ್ಡೀವ್ಸ್‌ಗೆ ಹೋಗುತ್ತಿರುವುದರ ಹಿಂದಿನ ಕಾರಣ ಇಲ್ಲಿದೆ
ಲಾಕ್‌ಡೌನ್‌ನಿಂದ ಹೊರಬರುತ್ತಿದ್ದ ದಕ್ಷಿಣ ಭಾರತದ ಖ್ಯಾತ ನಟಿಯರು ಹಾಲಿಡೇ ಎಂಜಾಯ್ ಮಾಡಲು ತಮ್ಮ ನೆಚ್ಚಿನ ತಾಣಗಳಿಗೆ ಹೋಗುತ್ತಿದ್ದಾರೆ. ಅದರಲ್ಲಿ ಬಹುತೇಕ ನಟಿಯರು ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಾಲ್ಡೀವ್ಸ್‌ನಲ್ಲಿ ಸೌತ್ ಇಂಡಸ್ಟ್ರಿ ಚೆಲುವೆಯರು ಹಾಲಿಡೇ ಎಂಜಾಯ್
ಉದ್ಯಮಿ ಗೌತಮ್ ಜೊತೆ ವಿವಾಹವಾದ ನಟಿ ಕಾಜಲ್ ಅಗರ್‌ವಾಲ್ ತಮ್ಮ ಹನಿಮೂನ್ ಎಂಜಾಯ್ ಮಾಡಿದ್ದು ಮಾಲ್ಡೀವ್ಸ್‌ನಲ್ಲಿ. ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ಬರ್ತಡೇ ಆಚರಿಸಿಕೊಂಡಿದ್ದು ಮಾಲ್ಡೀವ್ಸ್‌ನಲ್ಲಿ.
ಮಾಲ್ಡೀವ್ಸ್‌ನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಮತ್ತು ವೇದಿಕಾ ಸಖತ್ ಹಾಟ್
ರಕುಲ್ ಪ್ರೀತ್ ಸಿಂಗ್, ಬಹುಭಾಷಾ ನಟಿ ವೇದಿಕಾ, ಕನ್ನಡ ನಟಿ ಶರ್ಮಿಳಾ ಮಾಂಡ್ರೆ, ಶಾನ್ವಿ ಶ್ರೀವಾಸ್ತವ್, ಪ್ರಣಿತಾ ಸುಭಾಷ್ ಸಹ ಮಾಲ್ಡೀವ್ಸ್ ಸುತ್ತಿ ಬಂದಿದ್ದಾರೆ. ಹೀಗೆ, ಸೌತ್ ಇಂಡಸ್ಟ್ರಿಯ ಬಹುತೇಕ ನಟಿಯರು ಮಾಲ್ಡೀವ್ಸ್ ಭೇಟಿ ಮಾಡುತ್ತಿರುವುದು ಏಕೆ ಎಂದು ಹುಡುಕಿ ಹೊರಟಾಗ ಆಸಕ್ತಿಕರ ವಿಷಯವೊಂದು ಬಹಿರಂಗವಾಗಿದೆ. ಮುಂದೆ ಓದಿ....

ಮಾಲ್ಡೀವ್ಸ್ ಪ್ರವಾಸೋದ್ಯಮ ಮೇಲೆತ್ತುವ ಪ್ಲಾನ್?
ಮಾಲ್ಡೀವ್ಸ್‌ಗೆ ಪ್ರವಾಸೋದ್ಯಮ ಪ್ರಮುಖ ಆದಾಯ ಕ್ಷೇತ್ರ. ಆದರೆ, ಲಾಕ್‌ಡೌನ್ ಕಾರಣದಿಂದ ಟೂರಿಸಂ ನೆಲಕಚ್ಚಿದೆ. ಲಾಕ್‌ಡೌನ್ನಿಂದ ಹೊರಬಂದ ಮೇಲೂ ಯಾರೂ ಮಾಲ್ಡೀವ್ಸ್ ಕಡೆ ಮುಖ ಮಾಡುತ್ತಿಲ್ಲ. ಹಾಗಾಗಿ, ಜನರನ್ನು ಆಕರ್ಷಿಸಲು ಜಾಹೀರಾತು ಬದಲು ನಟಿಯರಿಂದ ಪ್ರಚಾರದ ಪ್ಲಾನ್ ಮಾಡಲಾಗಿದೆ ಎಂಬ ವಿಚಾರವನ್ನು ಬಾಲಿವುಡ್ ನಟಿಯೊಬ್ಬರಿಂದ ಹೊರಬಿದ್ದಿದೆ.

ನಟಿಯರಿಗೆ ಆಫರ್ ನೀಡಿದ ರೆಸಾರ್ಟ್
ಮಾಲ್ಡೀವ್ಸ್ ಪ್ರವಾಸೋದ್ಯಮವನ್ನು ಚುರುಕುಗೊಳಿಸಲು ಯೋಜನೆ ಹಾಕಿರುವ ರೆಸಾರ್ಟ್‌ಗಳು, ನಟಿಯರ ಪ್ರಯಾಣ ವೆಚ್ಚ, ಊಟ-ವಸತಿ, ಶಾಪಿಂಗ್ ಸೇರಿದಂತೆ ಎಲ್ಲವನ್ನೂ ಆಯೋಜಕರೇ ಒದಗಿಸುವುದಾಗಿ ಒಪ್ಪಿಸಿ ಕರೆಯಿಸಿಕೊಳ್ಳುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

ನಟಿಯರು ಪ್ರಚಾರ ಮಾಡಬೇಕಷ್ಟೇ
ನಟಿಯರು ದಿನಕ್ಕೆ ಎರಡೂ ಅಥವಾ ಮೂರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಕು. ಆ ಫೋಟೋಗಳು ಹಾಟ್ ಆಗಿರಬೇಕು. ಪ್ರತಿ ಫೋಟೋಗೂ ಲೋಕೇಶನ್ ಹಾಗೂ ರೆಸಾರ್ಟ್ ಹೆಸರು ಹಾಕಬೇಕು ಎಂದು ಷರತ್ತುಗಳು ಸಹ ಹಾಕಲಾಗಿದೆಯಂತೆ.

ಬಾಲಿವುಡ್ ಟು ಸೌತ್ ನಟಿಯರು ಪ್ರವಾಸ
ಲಾಕ್‌ಡೌನ್ ಮುಗಿದ ಮೇಲೆ ಬಾಲಿವುಡ್‌ನಿಂದ ಕತ್ರಿನಾ ಕೈಫ್, ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ, ಇಲಿಯಾನಾ, ಮೌನಿ ರಾಯ್ ಮಾಲ್ಡೀವ್ಸ್ ಭೇಟಿ ನೀಡಿದ್ದರು. ಬಳಿಕ ದಕ್ಷಿಣ ಇಂಡಸ್ಟ್ರಿಯಿಂದ ಸಮಂತಾ ದಂಪತಿ, ಕಾಜಲ್ ಅಗರ್‌ವಾಲ್ ದಂಪತಿ, ರಕುಲ್ ಪ್ರೀತ್ ಸಿಂಗ್, ಪ್ರಣಿತಾ, ಶರ್ಮಿಳಾ ಮಾಂಡ್ರೆ, ವೇದಿಕಾ ಸೇರಿದಂತೆ ಹಲವು ನಟಿಯರು ಹೋಗಿದ್ದರು.