»   » 'ಅಂಬಿ ನಿಂಗೆ ವಯಸ್ಸಾಯ್ತೋ' ಅಂತ ಹೇಳುತ್ತಿದ್ದಾರೆ ಕಿಚ್ಚ ಸುದೀಪ್.!

'ಅಂಬಿ ನಿಂಗೆ ವಯಸ್ಸಾಯ್ತೋ' ಅಂತ ಹೇಳುತ್ತಿದ್ದಾರೆ ಕಿಚ್ಚ ಸುದೀಪ್.!

Posted By:
Subscribe to Filmibeat Kannada

ಕನ್ನಡದಲ್ಲಿ ಮಲ್ಟಿ ಸ್ಟಾರ್ ಚಿತ್ರಗಳನ್ನು ಮಾಡುವುದಕ್ಕೆ ಇದು ನಿಜಕ್ಕೂ ಸುಗ್ಗಿ ಕಾಲ. ಯಾಕಂದ್ರೆ ದಿನ ಕಳೆಯುತ್ತಾ ಇದ್ದ ಹಾಗೆ ಒಂದೊಂದೇ ಮಲ್ಟಿ ಸ್ಟಾರ್ ಸಿನಿಮಾಗಳು ಶುರು ಆಗುತ್ತಲೇ ಇವೆ.

ಅದೇ ರೀತಿ ಇದೀಗ ಮತ್ತೆ ಸುದೀಪ್ ಹಾಗೂ ಅಂಬರೀಶ್ ಕಾಂಬಿನೇಶನ್ ನಲ್ಲಿ ಸಿನಿಮಾವೊಂದು ಬರಲಿದೆ ಎಂಬ ಸುದ್ದಿ ಗಾಂಧಿನಗರದ ಹಾಟ್ ಟಾಪಿಕ್ ಆಗಿದೆ. ಈ ಹಿಂದೆ 'ವೀರ ಪರಂಪರೆ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದ ಸುದೀಪ್ ಮತ್ತು ಅಂಬರೀಶ್ ಜೋಡಿ 7 ವರ್ಷಗಳ ನಂತರ ಮತ್ತೆ ಒಂದಾಗಲಿದೆ ಎನ್ನುವ ಸುದ್ದಿ ಹರಿದಾಡಿದೆ.

ಅಂದಹಾಗೆ, ಅಂಬರೀಶ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವ ಆ ಹೊಸ ಸಿನಿಮಾದ ಒಂದಷ್ಟು ವಿವರ ಇಲ್ಲಿದೆ ಓದಿ...

'ಅಂಬಿ ನಿಂಗೆ ವಯಸ್ಸಾಯ್ತೋ'

'ಅಂಬಿ ನಿಂಗೆ ವಯಸ್ಸಾಯ್ತೋ' ಎಂಬ ವಿಭಿನ್ನ ಸಿನಿಮಾದ ಮೂಲಕ ಅಂಬರೀಶ್ ಮತ್ತು ಸುದೀಪ್ 7 ವರ್ಷಗಳ ನಂತರ ಮತ್ತೆ ಒಂದಾಗಲಿದ್ದಾರೆ ಎನ್ನುವ ಸುದ್ದಿ ಇದೆ.

ಹೀರೋ ಅಂಬರೀಶ್

ಸದ್ಯ ಪೋಷಕ ಪಾತ್ರದಲ್ಲಿ ಹೆಚ್ಚಾಗಿ ನಟಿಸುತ್ತಿರುವ ಅಂಬರೀಶ್ ಈಗ ಮತ್ತೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರದ ಅತಿಥಿ ಪಾತ್ರವನ್ನು ಮಾಡುವ ಮೂಲಕ ಸುದೀಪ್ ಅಂಬಿಗೆ ಸಾಥ್ ನೀಡಲಿದ್ದಾರಂತೆ.

ನಂದ ಕಿಶೋರ್ ನಿರ್ದೇಶನ

'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರವನ್ನು ಸ್ಟಾರ್ ಡೈರೆಕ್ಟರ್ ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರಂತೆ. ಅಂಬರೀಶ್ ಅವರ ವಯಸ್ಸು ಹಾಗೂ ವ್ಯಕ್ತಿತ್ವಕ್ಕೆ ಹೊಂದುವ ಹಾಗೆ ಚಿತ್ರದ ಕಥೆ ಇದೆಯಂತೆ.

ಸುದೀಪ್ ನಿರ್ಮಾಣ

ವಿಶೇಷ ಅಂದರೆ ಸುದೀಪ್ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾತ್ರವಲ್ಲದೆ, ಈ ಚಿತ್ರವನ್ನು ಅವರೇ ತಮ್ಮ 'ಕಿಚ್ಚ ಕ್ರಿಯೇಷನ್ಸ್' ನಲ್ಲಿ ನಿರ್ಮಾಣ ಮಾಡಲಿದ್ದಾರಂತೆ.

ನಲ್ಲ ಸುದೀಪ್ ಜೊತೆ ಪವರ್ ಸ್ಟಾರ್ ಪುನೀತ್ ಸಿನಿಮಾ ಮಾಡುತ್ತಾರಾ?

ಅಂತಿಮ ಆಗಿಲ್ಲ

'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಬಗ್ಗೆ ದೊಡ್ಡ ಸುದ್ದಿ ಹೇಳಿ ಬಂದರೂ ಇನ್ನೂ ಈ ಸಿನಿಮಾ ಬರುವ ಬಗ್ಗೆ ಚಿತ್ರತಂಡದಿಂದ ಅಂತಿಮ ಮಾಹಿತಿ ಹೊರಬಂದಿಲ್ಲ.

English summary
According to the sources, Sudeep will do a cameo role in Rebel Star Ambareesh starrer 'Ambi ninge vaiyasayitho' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada