»   » ಕೊನೆಗೂ 'ಕುರುಕ್ಷೇತ್ರ' ಚಿತ್ರಕ್ಕೆ ನಾಯಕಿಯಾದ ಪರಭಾಷಾ ನಟಿ..!

ಕೊನೆಗೂ 'ಕುರುಕ್ಷೇತ್ರ' ಚಿತ್ರಕ್ಕೆ ನಾಯಕಿಯಾದ ಪರಭಾಷಾ ನಟಿ..!

Posted By:
Subscribe to Filmibeat Kannada

'ಕುರುಕ್ಷೇತ್ರ' ಸಿನಿಮಾಗೆ ಅವರು ನಾಯಕಿ.. ಇವರು ನಾಯಕಿ.. ಅಂತ ದಿನಕ್ಕೊಂದು ಹೆಸರು ಬರುತ್ತಲೇ ಇರುತ್ತದೆ. ಆದರೆ ಈಗ ಚಿತ್ರಕ್ಕೆ ಹಿರೋಯಿನ್ ಗಳ ಆಯ್ಕೆ ನಿಧಾನವಾಗಿ ಫೈನಲ್ ಆಗುತ್ತಿದೆ. ಪರಭಾಷೆಯ ನಟಿಯೊಬ್ಬರು ಚಿತ್ರದಲ್ಲಿ ನಟಿಸುವುದು ಬಹುತೇಕ ಖಾತ್ರಿಯಾಗಿದೆ.

ದರ್ಶನ್ 'ಕುರುಕ್ಷೇತ್ರ'ಕ್ಕೆ ಬಲಗಾಲಿಟ್ಟು ಬಂದ ಮೊದಲ ನಟಿ!

ಇತ್ತೀಚಿಗಷ್ಟೆ ಸಿನಿಮಾದಲ್ಲಿ ಹರಿಪ್ರಿಯಾ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಆಕೆ ಜೊತೆಗೆ ಇದೀಗ ಸಿನಿಮಾದಲ್ಲಿ ಇನ್ನೊಬ್ಬ ನಟಿ ಆಯ್ಕೆ ಆಗಿದ್ದಾರೆ. ಹರಿಪ್ರಿಯಾ ಚಿತ್ರದಲ್ಲಿ ನೃತ್ಯಗಾರ್ತಿಯ ಪಾತ್ರ ಮಾಡುತ್ತಿದ್ದು, ಪ್ರಮುಖ ಪಾತ್ರದಲ್ಲಿ ಪರಭಾಷಾ ನಟಿ ನಟಿಸುತ್ತಿದ್ದಾರೆ.

'ಕುರುಕ್ಷೇತ್ರ'ದ ದ್ರೌಪದಿ ಪಾತ್ರಕ್ಕಾಗಿ ಈ ನಟಿಗೆ ಆಫರ್ ನೀಡಲಾಗಿದ್ಯಂತೆ!

ದರ್ಶನ್ ಅವರ 'ಕುರುಕ್ಷೇತ್ರ' ಸಿನಿಮಾದಲ್ಲಿ ನಾಯಕಿಯಾದ ಆ ನಟಿ ಯಾರು ಎಂಬ ಕುತೂಹಲ ಇದ್ದರೆ ಮುಂದೆ ಓದಿ....

'ಸೂರ್ಯಕಾಂತಿ' ಚಲುವೆ

ಈ ಹಿಂದೆ ಕನ್ನಡದಲ್ಲಿ 'ಸೂರ್ಯಕಾಂತಿ' ಎಂಬ ಸಿನಿಮಾ ಮಾಡಿದ್ದ ನಟಿ ರೆಜಿನಾ ಈಗ ಮತ್ತೆ 'ಕುರುಕ್ಷೇತ್ರ' ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಡಲಿದ್ದಾರೆ.

ಪಾತ್ರ ಏನು..?

'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ರೆಜಿನಾ ನಟಿಸುವುದು ಪಕ್ಕಾ ಆಗಿದೆ. ಆದರೆ ಅವರು ಯಾವ ಪಾತ್ರದಲ್ಲಿ ನಟಿಸುತ್ತಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ದ್ರೌಪದಿ ಅಲ್ಲ

ದ್ರೌಪದಿ ಪಾತ್ರಕ್ಕೆ ನಟಿ ರೆಜಿನಾ ಆಯ್ಕೆ ಆಗಿಲ್ಲ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಟಾರ್ ನಟಿ

ಅನೇಕ ತೆಲುಗು ಸಿನಿಮಾಗಳನ್ನು ಮಾಡಿರುವ ರೆಜಿನಾ ಒಳ್ಳೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತೆಲುಗಿನಲ್ಲಿ ಅವರ 'ಶೌರ್ಯ' ಸಿನಿಮಾ ಸೂಪರ್ ಹಿಟ್ ಆಗಿತ್ತು.

ಆಗಸ್ಟ್ ನಲ್ಲಿ ಶುರು

'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಆಗಸ್ಟ್ ನಲ್ಲಿ ಶುರುವಾಗಲಿದೆಯಂತೆ. ಸದ್ಯ ಸಿನಿಮಾಗೆ ಬೇಕಾದ ಎಲ್ಲ ರೀತಿಯ ತಯಾರಿಯಲ್ಲಿ ನಿರ್ದೇಶಕ ನಾಗಣ್ಣ ತೊಡಗಿದ್ದಾರೆ.

English summary
According to Grapevine, Kannada Actress Regina Cassandra is selected to play key role in Darshan starrer 'Kurukshetra'. The Movie will be Directed by Naganna and Produced By Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada