For Quick Alerts
ALLOW NOTIFICATIONS  
For Daily Alerts

  ಲಕ್ಷ ಸಂಭಾವನೆ ಪಡೆಯುವ ನಮ್ಮ ’ಲಕ್ಷಾಧೀಶ’ನಟರು

  |

  ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯುವ ನಮ್ಮ ಕನ್ನಡದ ನಾಯಕರ ಬಗ್ಗೆ ಓದಿದ್ದಾಯಿತು. ಈಗ ಲಕ್ಷದಲ್ಲಿ ಹಣ ಎಣಿಸುವ ನಮ್ಮ ನಾಯಕ ನಟರಾರು ಎನ್ನುವುದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಲಕ್ಷಕ್ಕಿಂತ ಹೆಚ್ಚು ಕೋಟಿಗಿಂತ ಕಮ್ಮಿ ಸಂಭಾವನೆ ಪಡೆಯುವ ನಮ್ಮ ನಾಯಕ ನಟರು ಯಾರ್ಯಾರು ಎಂದು ಪಟ್ಟಿ ಮಾಡಲು ಹೊರಟರೆ ಪಟ್ಟಿ ಇಷ್ಟುದ್ದಾ ಬೆಳೆಯುತ್ತೆ, ಆದರೂ ಅದರಲ್ಲಿ ಪ್ರಮುಖವಾದುದ್ದನ್ನು ನೋಡೊಣ (ಕೆಲ ಪ್ರಮುಖರದ್ದು ಲಭ್ಯವಾಗುತ್ತಿಲ್ಲ)

  ಗಂಡಸರ ಸಂಬಳ ಕೇಳಬಾರದು ಹೆಂಗಸರ ವಯಸ್ಸು ಕೇಳಬಾರದು ಎನ್ನುವ ಗಾದೆ ಮಾತನ್ನು ದೊಡ್ದವರು ಸುಮ್ನೆ ಬರ್ದೀದಾರಾ? ಹಾಗಾಗಿ ಸೆಲೆಬ್ರಿಟಿಗಳಾಗಿರಬಹುದು, ಇತರರಾಗಿರಬಹುದು ಅವರಿಂದ ಸರಿಯಾದ ಬ್ಯಾಲನ್ಸ್ ಶೀಟ್ ಕಂಡುಕೊಳ್ಳುವುದು ಒಸಿ ಅಲ್ಲಾ ಶ್ಯಾಣೆ ಕಷ್ಟದ ಕೆಲಸನೇ.

  ಒಂದು ಚಿತ್ರಕ್ಕೆ ಇಷ್ಟೇ ಸಂಭಾವನೆ ಪಡೆಯುತ್ತೇವೆ ಎಂದು ಸೆಲೆಬ್ರಿಟಿಗಳು ಚಿತ್ರದ ಪ್ರಮೋಶನಿಗೆ ಪ್ರೆಸ್ ಮೀಟ್ ಕರೆದು ಹೇಳುವ ಹಾಗೆ ಮಾಧ್ಯಮದವರ ಮುಂದೆ ಹೇಳುತ್ತಾರಾ? ಒಂದು ಪಕ್ಷ ಹೇಳೇ ಬಿಟ್ರು ಅನ್ಕೂಳ್ಳಿ ಆದಾಯ ತೆರಿಗೆ ಇಲಾಖೆಯವರು ಲೆಕ್ಕ ಕೇಳದೆ ಬಿಡ್ತಾರಾ? ಸೋ ನೋ ಚಾನ್ಸ್.. ಯಾರೂ ಈ ರಿಸ್ಕ್ ತೆಗೆದುಕೊಳ್ಳಲ್ಲಾ..

  ಚಿತ್ರವೊಂದಕ್ಕೆ ಸಿನಿಮಾದವರು ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಕುತೂಹಲ ನಮಗೆ ಸಂಬಂದವಿಲ್ಲದ ವಿಚಾರವಾದರೂ ತಿಳಿದುಕೊಳ್ಳುವ ಹಂಬಲ ಇದ್ದೇ ಇರುತ್ತೆ. ಒಂದು ಚಿತ್ರ ನಿರ್ಮಾಣಕ್ಕೆ ಬರೀ ನಾಯಕ ನಟ/ನಟಿಯರು ಮಾತ್ರ ಮುಖ್ಯವಲ್ಲ ಜೊತೆಗೆ ಪೋಷಕ ನಟರು, ತಾಂತ್ರಿಕ ವರ್ಗದವರೂ ಮುಖ್ಯ. ಅವರಿಗೂ ಒಳ್ಳೆ ಸಂಭಾವನೆ ಸಿಗುವಂತಾಗಲಿ, ನಿರ್ಮಾಪಕರು ಒಪ್ಪಿಕೊಳ್ಳುವ ಫೀಸ್ ಅವರಿಗೂ ಸರಿಯಾದ ಸಮಯಕ್ಕೆ ತಲುಪುವಂತಾಗಲಿ ಎನ್ನುವುದು ನಮ್ಮ ಆಶಯ.

  ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ತಣಕಾಡಿಸಿ, ಸಿನಿಮಾ ಮಂದಿಗಳನ್ನು ಕೇಳಿ, ಬೇಡಿ ಈ ಲೇಖನಕ್ಕೆ ಒಂದು ಸ್ವರೂಪ ನೀಡಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ಕರಾರುವಕ್ಕಾದ ಮಾಹಿತಿಯಲ್ಲ. ತಪ್ಪಿದ್ದಲ್ಲಿ ಎಚ್ಚರಿಸಿ ತಿದ್ದಿಕೊಳ್ಳುತ್ತೇವೆ, ಹೆಚ್ಚು ಕಮ್ಮಿ ಸರಿಯಿದ್ದರೆ ಬೆನ್ನು ತಟ್ಟಲು ಮಾತ್ರ ಮರೀಬೇಡಿ...

  ಲೂಸ್ ಮಾದ ಯಾನೆ ಯೋಗೀಶ್

  ಹುಡುಗರು, ಯಾರೇ ಕೂಗಾಡಲಿ ಚಿತ್ರದ ಯಶಸ್ಸಿನ ನಂತರ ಯೋಗೀಶ್ ಒಳ್ಳೆ ಬೇಡಿಕೆಯ ನಟ. ಇನ್ನೆರೆಡು ವರ್ಷಕ್ಕೆ ಬೇಕಾದಷ್ಟು ಚಿತ್ರಗಳಿವೆ. ಚಿತ್ರವೊಂದಕ್ಕೆ ಸಂಭಾವನೆ ಮತ್ತು ಇತರ ಲೆಕ್ಕಾಚಾರದಲ್ಲಿ ಎಂಬತ್ತು ಲಕ್ಷದಿಂದ ತೊಂಬತ್ತು ಲಕ್ಷದವರೆಗೆ ತೆಗೆದುಕೊಳ್ಳುತ್ತಾರೆ ಎನ್ನುವುದು ಸುದ್ದಿ.

  ಗೋಲ್ಡನ್ ಸ್ಟಾರ್ ಗಣೇಶ್

  ಯಶಸ್ಸಿನ ಬೆನ್ನೇರಿ ಓಡುತ್ತಿದ್ದ ಗಣೇಶ್ ತುರ್ತಾಗಿ 'ಯಶಸ್ಸಿ'ನ ಹುಡುಕಾಟದಲ್ಲಿದ್ದಾರೆ. ಗಣೇಶ್ ಚಿತ್ರಕ್ಕೆ ಮುಗಿ ಬೀಳುತ್ತಿದ್ದ ಚಿತ್ರರಸಿಕರು ಅದ್ಯಾಕೋ ಇತ್ತೀಚೆಗೆ ನಮಸ್ಕಾರ..ನಮಸ್ಕಾರ..ನಮಸ್ಕಾರ ಅನ್ನುತ್ತಿದ್ದಾರೆ. ಗಣೇಶ್ ಎಪ್ಪತ್ತರಿಂದ ತೊಂಬತ್ತು ಲಕ್ಷ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ.

  ರಾಕಿಂಗ್ ಸ್ಟಾರ್ ಯಶ್

  ಕನ್ನಡ ಚಿತ್ರರಂಗದ ಭರವಸೆಯ ನಟ. ಕಿರಾತಕ, ಡ್ರಾಮಾ ಚಿತ್ರಗಳು ಹಿಟ್ ಪಟ್ಟಿಗೆ ಸೇರಿದ ಮೇಲೆ ಇವರ ಕಾಲ್ಶೀಟ್ ರೇಟ್ ಒಂದೇ ಸಮನೆ ಜಾಸ್ತಿಯಾಗಿದೆ ಎನ್ನುವುದು ಗಾಂಧಿನಗರದ ಸುದ್ದಿ. ಇವರು ಕೂಡಾ ಎಪ್ಪತ್ತರಿಂದ ತೊಂಬತ್ತು ಲಕ್ಷದ ವರೆಗೆ ಚಾರ್ಜ್ ಮಾಡುತ್ತಾರೆ ಎನ್ನುವ ಸುದ್ದಿಯಿದೆ.

  ದಿಗಂತ್

  ಕನ್ನಡ ಚಿತ್ರರಂಗದ ಮತ್ತೊಬ್ಬ ಭರವಸೆಯ ನಟ. ದಿಗಂತ್ ಪಂಚರಂಗಿ ಚಿತ್ರದ ಯಶಸ್ಸಿನ ನಂತರ ಚಿತ್ರವೊಂದಕ್ಕೆ ಮೂವತ್ತರಿಂದ ನಲವತ್ತು ಲಕ್ಷ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ.

  ಅಜಯ್ ರಾವ್

  ಕೃಷ್ಣನ್ ಲವ್ ಸ್ಟೋರಿ ಚಿತ್ರ ಗೆದ್ದ ನಂತರ ಇವರ ಕಾಲ್ಶೀಟ್ ರೇಟು ಇಪ್ಪತ್ತೈದು ಲಕ್ಷದಿಂದ ಮೂವತ್ತೈದು ಲಕ್ಷ ಎನ್ನುವ ಸುದ್ದಿಯಿದೆ.

  ಪ್ರಜ್ವಲ್ ದೇವರಾಜ್

  ಮೂರಕ್ಕೇರದ, ಆರಕ್ಕಿಳಿಯದ ನಟ. ಪ್ರಜ್ವಲ್ ಯಾವ ಚಿತ್ರಗಳೂ ಸಿಕ್ಕಾಪಟ್ಟೆ ಹಿಟ್ ಆಗಿಲ್ಲ. ಹಾಗಂತ ನಿರ್ಮಾಪಕರಿಗೆ, ಡಿಸ್ಟ್ರಿಬ್ಯೂಟರ್ ಗಳಿಗೆ ನುಕ್ಷಾನ್ ಕೂಡಾ ಆಗಿಲ್ಲ. ಇವರು ಐವತ್ತರಿಂದ ಎಪ್ಪತ್ತು ಲಕ್ಷದವರೆಗೆ ಚಾರ್ಜ್ ಮಾಡುತ್ತಾರೆ ಎನ್ನಲಾಗುತ್ತಿದೆ.

  English summary
  Remuneration details of some of Sandalwood actor. Remuneration can be changed film to film and amount posted in this article is not the accurate figure.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more