»   » ವಿಜಿ ಸಂಸಾರದಲ್ಲಿ ಹುಳಿ ಹಿಂಡೋಕೆ ಹೊರಟ ರಿಪೋರ್ಟರ್

ವಿಜಿ ಸಂಸಾರದಲ್ಲಿ ಹುಳಿ ಹಿಂಡೋಕೆ ಹೊರಟ ರಿಪೋರ್ಟರ್

By: ಜೀವನರಸಿಕ
Subscribe to Filmibeat Kannada

ಅಭಿಮಾನಿಗಳು ಪ್ರೀತಿಯಿಂದ 'ಕರಿಚಿರತೆ' ಎಂದೇ ಕರೆಯುವ ದುನಿಯಾ ವಿಜಯ್ ಸಂಸಾರವೇನೋ ಒಂದಾಗಿದೆ. ಇತ್ತೀಚೆಗಷ್ಟೇ ಎರಡು ವರ್ಷಗಳ ಅಂತರ ಕಡಿದುಕೊಂಡ ವಿಜಿ ಮತ್ತು ನಾಗರತ್ನ ದಂಪತಿ ಒಂದಾಗಿದ್ದಾರೆ. ಆದ್ರೆ ಈ ಗ್ಯಾಪಲ್ಲೇ ವಿಜಿ ಗರಂ ಆದ ವಿಷಯ ಹೊರಬಂದಿದೆ.

ಆದ್ರೆ ಹೆಂಡತಿ ವಿರುದ್ಧ ಅಲ್ಲ ಮಾಧ್ಯಮದ ರಿಪೋರ್ಟರ್ ಒಬ್ಬರ ವಿರುದ್ಧ. ವಿಜಿ ಡೈವೋರ್ಸ್ ಗೆ ಕೊಟ್ಟ ಬಲವಾದ ಕಾರಣ ತನ್ನ ತಂದೆ ತಾಯಿಯನ್ನ ಹೆಂಡತಿ ಸರಿಯಾಗಿ ನೋಡಿಕೊಳ್ತಿಲ್ಲ ಅನ್ನೋದು. ಆದರೆ ರಿಪೋರ್ಟ್ ಒಬ್ಬರು ಕೇಳಿದ ಪ್ರಶ್ನೆಗೆ ವಿಜಿ ಅಷ್ಟೇ ಅಲ್ಲ ಅಲ್ಲಿದ್ದವರನ್ನೆಲ್ಲಾ ಗಜಿಬಿಜಿ ಗೊಳಿಸಿತು. [ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ]

reporter-make-actor-duniya-vijay-feels-bitter


ವಿಜಿ ಮತ್ತು ನಾಗರತ್ನ ರಾಜಿಯಾದ ನಂತರ ವರದಿಗಾರರೊಬ್ಬರು, "ನಿಮ್ಮ ಹೆಂಡತಿ ತಂದೆ ತಾಯಿಯನ್ನ ಸರಿಯಾಗಿ ನೋಡಿಕೊಳ್ಳಲ್ಲ ಅಂತ ದೂರವಾದ್ರಿ ಈಗ ಒಂದಾಗಿದ್ದೀರಾ ಇನ್ಮುಂದೆ ಸರಿಯಾಗಿ ನೋಡಿಕೊಳ್ತಾರೆ ಅನ್ನೋ ಭರವಸೆ ಇದ್ಯಾ" ಅಂತ ಕೇಳಿದ್ದಾರೆ.

ಗಂಡ ಹೆಂಡತಿ ಒಂದಾಗಿರೋ ಟೈಮಲ್ಲಿ ತಾಯಿ ಪಕ್ಕದಲ್ಲೇ ಇರೋ ಟೈಮಲ್ಲಿ ಇದೆಂಥಾ ಪ್ರಶ್ನೆ. ಚೆನ್ನಾಗಿ ಆಗ್ತಿರೋ ಸಂಸಾರದಲ್ಲಿ ಮತ್ತೆ ಹುಳಿ ಹಿಂಡೋಕೆ ಹೊರಡ್ತಿದ್ದಾರೆ ಅಂತ ವಿಜಿ ಗರಂ ಆದ್ರಂತೆ. ಆಗಿದ್ರಲ್ಲೇನು ತಪ್ಪಿಲ್ಲ ಆದ್ರೆ ಸುದ್ದಿ ಸ್ವಲ್ಪ ನಿಧಾನಕ್ಕೆ ಹೊರಬಂದಿದೆ ಅಷ್ಟೇ.

'ಒಡೆದ ಮನಸ್ಸುಗಳು ಈಗಲಾದರೂ ಒಂದಾಗಿವೆಯಲ್ಲಾ'' ಅಂತ ದುನಿಯಾ ವಿಜಿ ಅಭಿಮಾನಿಗಳು ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದಾರೆ. ಇತ್ತ ದುನಿಯಾ ವಿಜಿ ಮತ್ತು ನಾಗರತ್ನ ಕೂಡ ಸಿಹಿಹಂಚಿಕೊಂಡು ನಗುಮೊಗದಲ್ಲಿದ್ದಾಗ ಇದೆಂಥಾ ಪ್ರಶ್ನೆ ಎಂಬುದು ಮಾಧ್ಯಮ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

English summary
Recently a reporter had asked actor Duniya Vijay a embitter question. The actor feels bitter about the media person. The incident took place on Duniya Vijay divorce case ends on a happy note.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada