For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದಲ್ಲಿ ಕೆಜಿಎಫ್ ದಾಖಲೆ ಮುರಿದ ರಾಬರ್ಟ್: ಅತಿ ದೊಡ್ಡ ಬೆಲೆಗೆ ವಿತರಣೆ ಹಕ್ಕು ಸೇಲ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಬಹಳ ದೊಡ್ಡ ಮಟ್ಟದಲ್ಲಿ ತೆರೆಕಾಣಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರ ಕರ್ನಾಟಕ ಹಾಗೂ ಆಂಧ್ರ-ತೆಲಂಗಾಣದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

  ರಿಲೀಸ್‌ಗೂ ಮುಂಚೆ ಇಷ್ಟೊಂದು ಹೈಪ್ ಕ್ರಿಯೇಟ್ ಮಾಡಿರುವ ರಾಬರ್ಟ್ ಸಿನಿಮಾದ ಕಲೆಕ್ಷನ್ ಕುರಿತು ಬಹಳ ಲೆಕ್ಕಾಚಾರ ನಡೆಯುತ್ತಿದೆ. ಕನ್ನಡದಲ್ಲಿ ಪಾಲಿಗೆ ಅತಿ ಹೆಚ್ಚು ಗಳಿಕೆ ಕಾಣಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೀಗ, ರಾಬರ್ಟ್ ಚಿತ್ರದ ವಿತರಣೆ ಹಕ್ಕು ದಾಖಲೆ ಬೆಲೆ ಮಾರಾಟವಾಗಿದೆ ಎಂದು ಮಾಹಿತಿ ಫಿಲ್ಮಿಬೀಟ್ ಕನ್ನಡಕ್ಕೆ ಎಕ್ಸ್‌ಕ್ಲೂಸಿವ್ ಆಗಿ ಲಭ್ಯವಾಗಿದೆ. ಮುಂದೆ ಓದಿ....

  ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಹೊಸ ಸಿನಿಮಾ: ಮದಕರಿ ನಾಯಕನ ಕತೆ ಏನಾಯಿತು?

  ರಾಬರ್ಟ್ ಕರ್ನಾಟಕ ವಿತರಣೆ ಹಕ್ಕು ಸೋಲ್ಡ್

  ರಾಬರ್ಟ್ ಕರ್ನಾಟಕ ವಿತರಣೆ ಹಕ್ಕು ಸೋಲ್ಡ್

  ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ದುಬಾರಿ ಬೆಲೆಗೆ ಸೋಲ್ಡ್ ಔಟ್ ಆಗಿದೆ. ಉಮಾಪತಿ ಫಿಲಂಸ್, ಶ್ರೀ ಭವಾನಿ ಆರ್ಟ್ಸ್, ಮೆಹಲ್ ಫಿಲಂಸ್ ವಿಶಾಲ ಕರ್ನಾಟಕಕ್ಕೆ ಡಿ ಬಾಸ್ ಚಿತ್ರವನ್ನು ಹಂಚಿಕೆ ಮಾಡುತ್ತಿದ್ದಾರೆ.

  78 ಕೋಟಿಗೆ ರಾಬರ್ಟ್ ಸೇಲ್?

  78 ಕೋಟಿಗೆ ರಾಬರ್ಟ್ ಸೇಲ್?

  ರಾಬರ್ಟ್ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಬರೋಬ್ಬರಿ 78 ಕೋಟಿಗೆ ಸೇಲ್ ಆಗಿದೆ ಎಂಬ ವಿಚಾರ ಹೊರಬಿದ್ದಿದೆ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಕರಾವಳಿ ಹಾಗೂ ಮೈಸೂರು ಕರ್ನಾಟಕ ಸೇರಿದಂತೆ ವಿಶಾಲ ಕರ್ನಾಟಕದ ವಿತರಣೆ ಹಕ್ಕು 78 ಕೋಟಿ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  ಡಿ-ಬಾಸ್‌ ರಾಬರ್ಟ್ 'ಡ್ಯಾನ್ಸ್' ಹಿಂದಿರುವ ಮಾಂತ್ರಿಕ ಇವರೇ!

  ಕೆಜಿಎಫ್ ದಾಖಲೆ ಬ್ರೇಕ್ ಮಾಡಿದ ರಾಬರ್ಟ್

  ಕೆಜಿಎಫ್ ದಾಖಲೆ ಬ್ರೇಕ್ ಮಾಡಿದ ರಾಬರ್ಟ್

  ಕರ್ನಾಟಕದ ಮಟ್ಟಿಗೆ ರಾಬರ್ಟ್ ಚಿತ್ರದ ವಿತರಣೆ ಹಕ್ಕು ದಾಖಲೆಯಾಗಿದೆ. ಇದಕ್ಕೂ ಮುಂಚೆ ಯಾವ ಕನ್ನಡ ಸಿನಿಮಾಗಳಿಗೂ ಕರ್ನಾಟಕದಲ್ಲಿ ಇಷ್ಟೊಂದು ದೊಡ್ಡ ಬೆಲೆ ಸಿಕ್ಕಿರಲಿಲ್ಲ. ಕೆಜಿಎಫ್ ಚಿತ್ರಕ್ಕೂ ಸಹ ಕರ್ನಾಟಕದಲ್ಲಿ ಇಷ್ಟೊಂದು ದೊಡ್ಡ ಮೊತ್ತ ಸಿಕ್ಕಿರಲಿಲ್ಲ. ಈ ವಿಚಾರದಲ್ಲಿ ಕೆಜಿಎಫ್ ಚಿತ್ರವನ್ನು ರಾಬರ್ಟ್ ಹಿಂದಿಕ್ಕಿದೆ ಎಂದು ಹೇಳಲಾಗುತ್ತಿದೆ.

  ಆಂಧ್ರ-ತೆಲಂಗಾಣದಲ್ಲಿ ದಾಖಲೆ ಸ್ಕ್ರೀನ್

  ಆಂಧ್ರ-ತೆಲಂಗಾಣದಲ್ಲಿ ದಾಖಲೆ ಸ್ಕ್ರೀನ್

  ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸ್ವತಃ ವಿತರಕರೇ ಹೇಳಿಕೊಂಡಿರುವ ಪ್ರಕಾರ, 400ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಾಬರ್ಟ್ ಎಂಟ್ರಿಯಾಗುತ್ತಿದೆ. ಈ ಕರ್ನಾಟಕದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ದರ್ಶನ್ ಸಿನಿಮಾ ರಿಲೀಸ್ ಆಗುತ್ತಿದೆ. ರಿಲೀಸ್‌ಗೂ ಮುಂಚೆಯೇ ದಾಖಲೆ ಮಟ್ಟದಲ್ಲಿ ಬಿಸಿನೆಸ್ ಮಾಡುತ್ತಿರುವ ರಾಬರ್ಟ್ ತೆರೆಕಂಡ ಬಳಿಕ ಎಷ್ಟು ಗಳಿಕೆ ಮಾಡುತ್ತದೆ ಎಂಬ ಕುತೂಹಲ ಕಾಡ್ತಿದೆ.

  English summary
  Challenging star Darshan starrer Roberrt Movie Karnataka distribution rights sold for huge amount.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X