»   » ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರ 'ಮೈಸೂರು ಹುಲಿ'

ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರ 'ಮೈಸೂರು ಹುಲಿ'

By: ಜೀವನರಸಿಕ
Subscribe to Filmibeat Kannada

ಮುಂಬರುವ ದಿನಗಳಲ್ಲಿ ಸ್ಯಾಂಡಲ್ ವುಡ್ ಮಾಸ್ ಮಹಾವೀರರು ಮತ್ತೊಂದು ಸುತ್ತಿನ ಕದನಕ್ಕೆ ಸಜ್ಜಾಗಲಿದ್ದಾರೆ. 'ರಾಜಾಹುಲಿ' ಅನ್ನೋ ಸಿನಿಮಾ ಗೆದ್ದ ನಂತರ 'ಹುಲಿ' ಅನ್ನೋ ಟೈಟಲ್ ನ ಭರಾಟೆ ವಾಣಿಜ್ಯ ಮಂಡಳಿಯಲ್ಲೂ ಸದ್ದು ಮಾಡ್ತಿದೆ.

ಏಪ್ರಿಲ್ ತಿಂಗಳಲ್ಲಿ ಕಿಚ್ಚ ಸುದೀಪ್ ಹಾಗೂ ಗಜಕೇಸರಿ ಕೃಷ್ಣ ಜೋಡಿಯ 'ಹೆಬ್ಬುಲಿ' ಸಿನಿಮಾ ಸೆಟ್ಟೇರಲಿದೆ. ಈ ಮೂಲಕ ಹೆಬ್ಬುಲಿ ಅನ್ನೋ ಟೈಟಲ್ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಆಗಿದೆ. ಸುದೀಪ್ ಆರ್ಮಿ ಆಫೀಸರ್ ಆಗಿ ಸಾಹಸ ಮೆರೆಯೋ ಚಿತ್ರ ಹೆಬ್ಬುಲಿ. [ಯಶ್ 'ಮಾಸ್ಟರ್ ಪೀಸ್' ಶೂಟಿಂಗ್ ನಿಂತೋಯ್ತಾ?]

Rocking Star Yash new movie titled as Mysuru Huli

ಇನ್ನು 'ರಾಜಾಹುಲಿ' ನಿರ್ಮಾಣ ಮಾಡಿದ್ದ ಕೆ.ಮಂಜು ಯಶ್ ಗೊಂದು ಕಿಸ್ ಕೊಟ್ಟು ಮತ್ತೊಂದು ಸಿನಿಮಾ ಯಶ್ ಜೊತೆ ಮಾಡ್ತೀನಿ ಅಂದಿದ್ರು. ಕೆ ಮಂಜು ಈಗ 'ಮೈಸೂರು ಹುಲಿ' ಅನ್ನೋ ಟೈಟಲ್ ಮೂಲಕ ಯಶ್ ಸಿನಿಮಾ ಮಾಡೋಕೆ ತಯಾರಿ ಮಾಡ್ತಿದ್ದಾರೆ.

ಮೈಸೂರು ಹುಲಿ ಸಿನಿಮಾಗೆ ಸದ್ಯ ಮಾಸ್ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ ಕೆ ಮಂಜು. ಬಹುಶಃ 'ರಾಜಾಹುಲಿ' ನಿರ್ದೇಶಕ ಗುರುದೇಶಪಾಂಡೆರಿಂದಲೇ ಆಕ್ಷನ್ ಕಟ್ ಹೇಳಿಸುವ ಸಾಧ್ಯತೆ ಹೆಚ್ಚು ಅಂತ ಹೇಳಲಾಗ್ತಿದೆ.

ಇನ್ನು ಮತ್ತೊಬ್ಬ ಮಾಸ್ ಮಹಾವೀರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹಿಂದೆ ಮಂಡ್ಯ ಅನ್ನೋ ಸಿನಿಮಾ ಮಾಡಿದ್ರು. ಈಗ ಮಂಡ್ಯ ಹುಲಿ ಅನ್ನೋ ಟೈಟಲನ್ನ ನಿರ್ಮಾಪಕರೊಬ್ಬರು ದರ್ಶನ್ ರಿಗಾಗಿ ತೆಗೆದಿಟ್ಟಿದ್ದಾರೆ. ಈ ಮೂರು ಹುಲಿಗಳು ಸ್ಯಾಂಡಲ್ ವುಡ್ ನಲ್ಲಿ ಗರ್ಜಿಸೋ ದಿನಗಳು ದೂರವಿಲ್ಲ.

English summary
Acccording to Sandalwood sources, Rocking Star Yash new movie titled as 'Mysuru Huli'. The upcoming movie produced by K Manju and directed by 'Raja Huli' fame Guru Deshpande.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada