»   » 'ರಾಜಾಹುಲಿ' ಯಶ್ ಕೈಹಿಡಿಯಲಿರುವ ರಾಣಿ ಯಾರು?

'ರಾಜಾಹುಲಿ' ಯಶ್ ಕೈಹಿಡಿಯಲಿರುವ ರಾಣಿ ಯಾರು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಗೆ ಸುಲ್ತಾನ್ ಆಗಿರುವ ಯಶ್, ಗಾಂಧಿನಗರಕ್ಕೆ ಚಿನ್ನದ ಹುಡುಗನಾಗ್ಬಿಟ್ಟಿದ್ದಾರೆ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮೂಲಕ ಸತತ ಆರನೇ ಹಿಟ್ ಕೊಟ್ಟಿರುವ ಯಶ್, ವೃತ್ತಿ ಬದುಕ್ಕಲ್ಲಿ ಜಯ ಸಾಧಿಸುತ್ತಿರುವ ಬೆನ್ನಲ್ಲೇ ದಾಂಪತ್ಯ ಜೀವನಕ್ಕೂ ಲಗ್ಗೆ ಇಡುವ ಆಲೋಚನೆಯಲ್ಲಿದ್ದಾರೆ.

ಯೆಸ್, ಹರೆಯದ ಹುಡುಗಿಯರ ಹೃದಯಕ್ಕೆ ಕೊಳ್ಳಿ ಇಡುವ ಇಂತಹ ಸುದ್ದಿಯೊಂದು ಇಂದು, ಅಂದ್ರೆ ಯಶ್ ಹುಟ್ಟುಹಬ್ಬದಂದೇ ಹೊರಬಿದ್ದಿದೆ. ಹಾಗಂತ ಇದು ಯಾರೋ ಹಬ್ಬಿಸಿರುವ ಗಾಸಿಪ್ ಅಲ್ಲ, ಖುದ್ದು ಯಶ್ ಬಾಯಿಂದ ಹೊರಬಂದಿರುವ ಸತ್ಯ.

Rocking Star Yash2

ಹುಟ್ಟುಹಬ್ಬವನ್ನ, ತಮ್ಮ ಮನೆಯಲ್ಲಿ ಅಭಿಮಾನಿಗಳ ಜೊತೆ ಸಡಗರದಿಂದ ಸೆಲೆಬ್ರೇಟ್ ಮಾಡುತ್ತಿರುವ ಯಶ್, ಆಪ್ತೇಷ್ಟರ ಬಳಿ ಸದ್ಯದಲ್ಲೇ, ಅಂದ್ರೆ ಇನ್ನೆರಡು ವರ್ಷಗಳಲ್ಲಿ ವೈವಾಹಿಕ ಬದುಕಿಗೆ ಕಾಲಿಡುತ್ತೇನೆ ಅಂದಿದ್ದಾರೆ.

ಒಂಟಿಯಿಂದ ಜಂಟಿಯಾಗುವುದರೆಡೆಗೆ ಯೋಚಿಸುತ್ತಿರುವ ಯಶ್ ಮನಸ್ಸಲ್ಲಿ ಯಾರಿದ್ದಾರೆ..? ಈಗಾಗಲೇ ಗಾಂಧಿನಗರ ಕಂಡು ಹಿಡಿದಿರುವ ಪ್ರಕಾರ 'ಮೊಗ್ಗಿನ ಮನಸ್ಸಿ'ನ ಹುಡುಗಿ ರಾಧಿಕಾ ಪಂಡಿತ್ ಇದ್ದಾರೆ. ಅದಕ್ಕೆ ಹೊಸ ವರ್ಷದಂದು ಇಬ್ಬರು ಗೋವಾದಲ್ಲಿ ಪಾರ್ಟಿ ಮಾಡಿದ್ದಕ್ಕಿಂತ ಮತ್ತೊಂದು ಪುರಾವೆ ಬೇಕಿಲ್ಲ. [ಗೋವಾ ಬೀಚ್ ನಲ್ಲಿ ಯಶ್-ರಾಧಿಕಾ ಮೋಜು-ಮಸ್ತಿ]

Rocking Star Yash1

ಸದ್ಯ ರಾಧಿಕಾ ಪಂಡಿತ್ ಕೂಡ ಸಿನಿಮಾಗಳಲ್ಲೇ ಬಿಜಿಯಾಗಿದ್ದಾರೆ. 'ಎಂದೆಂದಿಗೂ', 'ಝೂಮ್' ಸೇರಿದಂತೆ ಕೈಯಲ್ಲಿ ಎರಡ್ಮೂರು ಚಿತ್ರಗಳನ್ನಿಟ್ಟುಕೊಂಡಿರುವ ರಾಧಿಕಾ ಅವೆಲ್ಲವನ್ನ ಮುಗಿಸುವುದಕ್ಕೆ ಕನಿಷ್ಟ ಒಂದು ವರ್ಷವಾದರೂ ಬೇಕು. [ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ]

ಇನ್ನೂ ಯಶ್ ಕೂಡ 'ಮಾಸ್ಟರ್ ಪೀಸ್' ಸೇರಿದಂತೆ ಎರಡು ಚಿತ್ರಗಳಿಗೆ ಸಹಿ ಮಾಡಿದ್ದಾಗಿದೆ. ಹೀಗಾಗಿ ಮುಂದಿನ ವರ್ಷದ ಕೊನೆಯ ವರೆಗೂ ಯಶ್ ಗೆ ಪುರುಸೊತ್ತಿಲ್ಲ. ಈ ಕಮ್ಮಿಟ್ಮೆಂಟ್ ಗಳನ್ನ ಮುಗಿಸಿ, ದಾಂಪತ್ಯದ ಸವಿಯನ್ನ 'ಹಾಲಿಡೇ'ಯಲ್ಲಿ ಸವಿಯುವ ಪ್ಲಾನ್ ಯಶ್ ಗೆ ಇರಬಹುದು.

Rocking Star Yash3

ಆದ್ರೆ, ಇನ್ನೆರಡು ವರ್ಷಗಳಲ್ಲಿ ಹಸೆಮಣೆ ಏರುತ್ತೀನಿ ಅಂತ ಮಾತ್ರ ಯಶ್ ಹೇಳಿದ್ದಾರೆ ಹೊರತು, ರಾಧಿಕಾ ಪಂಡಿತ್ ಹೆಸರನ್ನ ಎತ್ತಿಲ್ಲ. ಎಷ್ಟೇ ಆಗಲಿ, ಅದನ್ನ ನಾವು ಕೇಳಲೂ ಬಾರದು...ಅವರು ಹೇಳಲೂ ಬಾರದು...ಅಲ್ಲವೇ...! (ಫಿಲ್ಮಿಬೀಟ್ ಕನ್ನಡ)

English summary
Rocking Star Yash is all set to get hitched in another two years. Yash has revealed that he will get married in two years time. But will it be with his alleged love Radhika Pandhit? Well, Yash need to answer this.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada