For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲೂ ಸದ್ದು ಮಾಡಲಿದೆಯಾ 'ಶಿವಲಿಂಗ'?

  By Suneetha
  |

  ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ 'ಶಿವಲಿಂಗ' ಸಿನಿಮಾ ಎಲ್ಲೆಲ್ಲೂ ಸಖತ್ ಸೌಂಡ್ ಮಾಡುತ್ತಿದೆ. ಪಿ.ವಾಸು ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ದಕ್ಷಿಣ ಭಾರತದ ಖ್ಯಾತ ನಟರು ವೀಕ್ಷಿಸಿ ಈಗಾಗಲೇ ಒಳ್ಳೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ಮಾತ್ರವಲ್ಲದೇ, ರೀಮೇಕ್ ಮಾಡಲು ಮುಂದೆ ಬಂದಿದ್ದಾರೆ.

  ಇದೀಗ ಹೊಸ ವಿಚಾರ ಏನಪ್ಪಾ ಅಂದ್ರೆ ಶಿವರಾಜ್ ಕುಮಾರ್ ಮತ್ತು ನಟಿ ವೇದಿಕಾ ಅಭಿನಯದ 'ಶಿವಲಿಂಗ' ಚಿತ್ರ ಬಾಲಿವುಡ್ ಅಂಗಳಕ್ಕೂ ಕಾಲಿಡುವ ಲಕ್ಷಣಗಳಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಬಿಟೌನ್ ನಲ್ಲೂ ಸಿನಿಮಾ ಸದ್ದು ಮಾಡಲಿದೆ.[ತಮಿಳು ನಟ ರಾಘವ ಲಾರೆನ್ಸ್ 'ಶಿವಲಿಂಗ' ರೀಮೇಕ್ ಮಾಡ್ತಾರಾ?]

  ಅಂದಹಾಗೆ 'ಶಿವಲಿಂಗ' ನನ್ನು ಬಾಲಿವುಡ್ ಅಂಗಳಕ್ಕೂ ಕೊಂಡೊಯ್ಯಬಹುದು ಎಂಬ ಆಲೋಚನೆ ಬಂದಿದ್ದು ಬೇರಾರಿಗೂ ಅಲ್ಲ, ಸ್ಯಾಂಡಲ್ ವುಡ್ ನ ನಿರ್ಮಾಪಕ ಕಮ್ ನಟ ರಾಕ್ ಲೈನ್ ವೆಂಕಟೇಶ್ ಅವರಿಗೆ.[ಬಯಲಾಯಿತು ಶಿವಣ್ಣ & ವಾಸು ಅವರ ಮತ್ತೊಂದು ರಹಸ್ಯ]

  ಇನ್ನು ಬಾಲಿವುಡ್ ನಲ್ಲಿ ಕನ್ನಡದ 'ಶಿವಲಿಂಗ' ನನ್ನು ಯಾರು ಪ್ರತಿಷ್ಠಾಪನೆ ಮಾಡ್ತಾರೆ ಅಂತ ನೀವು ಯೋಚನೆ ಮಾಡುತ್ತಿದ್ದೀರಾ?, ಹಾಗಿದ್ರೆ ನಿಮ್ಮ ಯೋಚನೆಗಳಿಗೆ ಉತ್ತರ ಕೆಳಗಿನ ಸ್ಲೈಡ್ಸ್ ಗಳಲ್ಲಿ...

  ಹಿಂದಿಯಲ್ಲಿ ನಟ ಸಲ್ಮಾನ್ ಖಾನ್

  ಹಿಂದಿಯಲ್ಲಿ ನಟ ಸಲ್ಮಾನ್ ಖಾನ್

  ಶಿವರಾಜ್ ಕುಮಾರ್ ಹಾಗೂ ವಾಸು ಅವರ 'ಶಿವಲಿಂಗ' ಸಿನಿಮಾವನ್ನು ಹಿಂದಿಯಲ್ಲಿ ಮಾಡಿದ್ರೆ ಬಿಟೌನ್ ನ ಬಾಯ್ ಜಾನ್ ಸಲ್ಮಾನ್ ಖಾನ್ ಅವರು ಮಾಡುತ್ತಾರೆ.

  ಮುಂಬೈಗೆ ಹಾರಿದ ರಾಕ್ ಲೈನ್

  ಮುಂಬೈಗೆ ಹಾರಿದ ರಾಕ್ ಲೈನ್

  ನಟ ಸಲ್ಮಾನ್ ಖಾನ್ ಅವರಿಗೆ ಪಿ.ವಾಸು ನಿರ್ದೇಶನದ 'ಶಿವಲಿಂಗ' ಸಿನಿಮಾವನ್ನು ತೋರಿಸೋಕೆ ಅಂತ ನಿರ್ಮಾಪಕ ಕಮ್ ನಟ ರಾಕ್ ಲೈನ್ ವೆಂಕಟೇಶ್ ಅವರು ಸೀದಾ ಮುಂಬೈಗೆ ಹಾರಿದ್ದಾರೆ.

  ಸಲ್ಲುಗೆ ಇಷ್ಟ ಆದರೆ ಬಿಟೌನ್ ನಲ್ಲೂ 'ಶಿವಲಿಂಗ'

  ಸಲ್ಲುಗೆ ಇಷ್ಟ ಆದರೆ ಬಿಟೌನ್ ನಲ್ಲೂ 'ಶಿವಲಿಂಗ'

  ಬಾಲಿವುಡ್ ನ ಬಾಯ್ ಜಾನ್ ಸಲ್ಮಾನ್ ಗೆ 'ಶಿವಲಿಂಗ' ಇಷ್ಟ ಆದರೆ ಅಲ್ಲೂ 'ಶಿವತಾಂಡವ' ಆಗೇ ಬಿಡ್ಲಿ ಅನ್ನೋದು ರಾಕ್ ಲೈನ್ ಅವರ ಲೆಕ್ಕಾಚಾರ ಹಾಕಿದ್ದಾರೆ ಎಂದು ಸದ್ಯಕ್ಕೆ ಅಲ್ಲಲ್ಲಿ ಗುಲ್ಲೆದ್ದಿದೆ. ಆದರೆ ಈ ಸುದ್ದಿ ಇನ್ನೂ ಪಕ್ಕಾ ಆಗಿಲ್ಲ. ಸಲ್ಲು ಇಷ್ಟಪಟ್ಟರೆ ಬಿಟೌನ್ ನಲ್ಲಿ 'ಶಿವಲಿಂಗ' ರೀಮೇಕ್ ಖಂಡಿತ.

  ಸಲ್ಲು-ರಾಕ್ ಲೈನ್ ಖಾಸ ದೋಸ್ತ್

  ಸಲ್ಲು-ರಾಕ್ ಲೈನ್ ಖಾಸ ದೋಸ್ತ್

  ಇನ್ನು ಭಾಯ್ ಜಾನ್ ಸಲ್ಲು ಮತ್ತು ಕನ್ನಡದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ತುಂಬಾ ಒಳ್ಳೆಯ ಖಾಸ ದೋಸ್ತ್ ಗಳು. ಈ ಮೊದಲು ನಟ ಸಲ್ಮಾನ್ ಖಾನ್ ಅವರ 'ಭಜರಂಗಿ ಭಾಯ್ ಜಾನ್' ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಅವರು ಸಹ ನಿರ್ಮಾಪಕರಾಗಿದ್ದರು.

  ಭರವಸೆ ಇದೆ

  ಭರವಸೆ ಇದೆ

  ಈಗಾಗಲೇ 'ಶಿವಲಿಂಗ' ಸಿನಿಮಾವನ್ನು ಸಲ್ಲುಗೆ ತೋರಿಸಲು ರಾಕ್ ಲೈನ್ ಉತ್ಸುಕರಾಗಿದ್ದು, ಬಾಯ್ ಜಾನ್ ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆ ಇದೆಯಂತೆ. ಒಂದು ವೇಳೆ ಸಲ್ಲು ಮೆಚ್ಚಿಕೊಂಡರೆ ಬಾಲಿವುಡ್ ನಲ್ಲೂ 'ಶಿವಲಿಂಗ' ಸದ್ದು ಮಾಡೋದು ಖಂಡಿತ. ಒಟ್ನಲ್ಲಿ ರಾಕ್ ಲೈನ್ ಅವರ ಈ ಕನಸು ವರ್ಕೌಟ್ ಆಗುತ್ತಾ ಅನ್ನೋ ಕುತೂಹಲ ಗಾಂಧಿನಗರದಲ್ಲಂತೂ ಬಹಳ ಜಾಸ್ತೀನೆ ಇದೆ.

  English summary
  Popular Kannada producer Rockline Venkatesh, who has co-produced forthcoming Hindi action drama 'Bhajrangi Bhaijaan' with Salman Khan, intrested remade Kannada Actor Shiva Rajkumar's Kannada Movie 'Shivalinga' in Hindi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X