Just In
Don't Miss!
- News
ಎಂಇಎಸ್, ಉದ್ಧಟವ್ ಠಾಕ್ರೆ ಇಷ್ಟು ಬೆಳೆಯಲು ಕಾರಣ ಬಿಜೆಪಿಯ ಸಲುಗೆ
- Automobiles
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- Sports
ಅಡಿಲೇಡ್ ಸೋಲಿನ ನಂತರ ಗೆಲುವಿನ ಹಾದಿ ಹಿಡಿದ ರೋಚಕ ಸಂಗತಿ ವಿವರಿಸಿದ ಹನುಮ ವಿಹಾರಿ
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸೈರಾ' ಸೆಟ್ ನಲ್ಲಿ ಅಗ್ನಿ ಅವಘಡ ಘಟನೆಗೆ ಟ್ವಿಸ್ಟ್: ರಾಮ್ ಚರಣ್ ಮೇಲೆ ಅನುಮಾನ.!
ಮೆಗಾಸ್ಟಾರ್ ಚಿರಂಜೀವಿ, ಅಮಿತಾಬ್ ಬಚ್ಚನ್, ಕನ್ನಡ ನಟ ಸುದೀಪ್ ಸೇರಿದಂತೆ ಬಹುದೊಡ್ಡ ತಾರಬಳಗ ಹೊಂದಿರುವ ಸೈರಾ ನರಸಿಂಹ ರೆಡ್ಡಿ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಇತ್ತೀಚಿಗಷ್ಟೆ ಅಗ್ನಿ ಅವಘಡ ಸಂಭವಿಸಿತ್ತು. ಇದರಿಂದ ಅಪಾರ ಪ್ರಮಾಣದ ಆಸ್ತಿ ನಷ್ಟ ಆಗಿದೆ.
ಕೋಕಪೇಟ್ ನಲ್ಲಿದ್ದ ಚಿರು ಫಾರ್ಮ್ ಹೌಸ್ ನಲ್ಲಿ ಸೈರಾ ಚಿತ್ರಕ್ಕಾಗಿ ಅದ್ಧೂರಿ ಸೆಟ್ ಹಾಕಲಾಗಿತ್ತು. ಇದೊಂದು ಐತಿಹಾಸಿಕ ಚಿತ್ರವಾಗಿದ್ದರಿಂದ ಭರ್ಜರಿ ಸೆಟ್ ನಿರ್ಮಿಸಲಾಗಿತ್ತು. ಆದ್ರೆ, ಅಗ್ನಿ ಅವಘಡದಲ್ಲಿ ಈ ಎಲ್ಲ ಸೆಟ್ ಸುಟ್ಟು ಕರಕಲಾಗಿದೆ.
ಚಿರಂಜೀವಿ ಫಾರ್ಮ್ ಹೌಸ್ ನಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ 'ಸೈರಾ' ಸೆಟ್
ಈ ಅಪಘಾತ ಆಕಸ್ಮಿವಾಗಿ ಆಗಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದ್ರೀಗ, ಈ ಅಗ್ನಿ ಅಪಘಾತದ ಹಿಂದೆ ಅನುಮಾಗಳು ಹುಟ್ಟಿಕೊಂಡಿದೆ. ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದ್ದು, ಇದರ ಹಿಂದೆ ರಾಮ್ ಚರಣ್ ತೇಜ ಇದ್ದಾರೆ ಎನ್ನಲಾಗುತ್ತಿದೆ. ಏನಿದು, ಅಗ್ನಿ ಅವಘಡಕ್ಕೆ ಟ್ವಿಸ್ಟ್? ಮುಂದೆ ಓದಿ......

ರಾಮ್ ಚರಣ್ ತೇಜ ಮೇಲೆ ಅನುಮಾನ.!
ಸೈರಾ ಸೆಟ್ ನಲ್ಲಿ ನಡೆದ ಅಗ್ನಿ ಅವಘಡ ಶಾರ್ಟ್ ಸರ್ಕ್ಯೂಟ್ ನಿಂದ ಆಗಿರಬಹುದು ಎಂದು ಊಹಿಸಲಾಗಿತ್ತು. ಸರಿ ಇದರಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂಬ ಕಾರಣಕ್ಕೆ ಎಲ್ಲರು ನಿಟ್ಟುಸಿರು ಬಿಟ್ಟಿದ್ದರು. ಇದೀಗ, ಈ ಅಗ್ನಿ ಅವಘಡ ಉದ್ದೇಶಪೂರ್ವಕವಾಗಿ ನಡೆದಿದ್ದು, ಇದರ ಹಿಂದ ಸೈರಾ ನಿರ್ಮಾಪಕ ಹಾಗೂ ಚಿರಂಜೀವಿ ಮಗ ರಾಮ್ ಚರಣ್ ತೇಜ ಇದ್ದಾರೆ ಎಂಬ ಅನುಮಾನ ಟಾಲಿವುಡ್ ನಲ್ಲಿ ಚರ್ಚೆಯಾಗ್ತಿದೆ.

ವಿಮೆ ಹಣಕ್ಕಾಗಿ ಈ ಪ್ಲಾನ್?
ಈ ಅಗ್ನಿ ಅವಘಡದ ಹಿಂದೆ ಇಂತಹದೊಂದು ಚರ್ಚೆಯೂ ಆಗುತ್ತಿದೆ. ವಿಮೆ ಹಣಕ್ಕಾಗಿ ಸೈರಾ ಸೆಟ್ ಗೆ ಬೆಂಕಿ ಇಡಲಾಯಿತು. ಸುಮಾರು 2 ಕೋಟಿವರೆಗೂ ಈ ಅವಘಡದಲ್ಲಿ ನಷ್ಟವಾಗಿದೆ ಎನ್ನಲಾಗುತ್ತಿದೆ. ಭಾರಿ ಮೊತ್ತವನ್ನ ವಿಮೆ ಮೂಲಕ ಪಡೆಯಬಹುದು ಎಂಬ ಕಾರಣಕ್ಕೆ ಸೆಟ್ ಗೆ ಬೆಂಕಿ ಇಡಲಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ತೆಲುಗು ಇಂಡಸ್ಟ್ರಿಗೆ ಚೆನ್ನಾಗಿ ಗೊತ್ತು ನಮ್ಮ ಉಪೇಂದ್ರ ತಾಕತ್ತು

ಶೂಟಿಂಗ್ ಮುಗಿದಿದ್ದರೂ ಸೆಟ್ ಯಾಕೆ ತೆಗಿದಿಲ್ಲ?
ಚಿತ್ರೀಕರಣ ಮುಗಿದಿದ್ದರೂ ಚಿರಂಜೀವಿ ಫಾರ್ಮ್ ಹೌಸ್ ನಲ್ಲಿ ಹಾಕಲಾಗಿದ್ದ ಸೆಟ್ ಯಾಕೆ ತೆಗೆದಿರಲಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ರಾಮ್ ಚರಣ್ ತೇಜ ಆಪ್ತರು ಕೊನೆಯ ಹಂತದ ಶೂಟಿಂಗ್ ಬಾಕಿಯಿತ್ತು ಎನ್ನುತ್ತಿದ್ದಾರಂತೆ. ಆದ್ರೆ, ಇನ್ನೊಂದು ಮೂಲದ ಪ್ರಕಾರ ಸೆಟ್ ನಲ್ಲಿ ಮಾಡಬೇಕಿದ್ದ ಶೂಟಿಂಗ್ ಮುಗಿದಿತ್ತು. ಹಾಗಿದ್ದರೂ ಅದನ್ನ ಹಾಗೆ ಉಳಿಸಿಕೊಂಡಿದ್ದರು. ಇದರ ಹಿಂದೆ ಅಗ್ನಿ ಅವಘಡ ಸೃಷ್ಟಿಸುವ ಪ್ಲಾನ್ ಮೊದಲೇ ಆಗಿತ್ತು ಎನ್ನುತ್ತಿದ್ದಾರೆ.

ಶೂಟ್ ಮುಗಿಸಿ ವಿಶ್ರಾಂತಿಯಲ್ಲಿರುವ ಚಿರು
ಆ ಕಡೆ ನೋಡಿದ್ರೆ ಸೈರಾ ಶೂಟಿಂಗ್ ಮುಗಿಸಿರುವ ಚಿರಂಜೀವಿ ಫ್ಯಾಮಿಲಿ ಜೊತೆ ವಿಶ್ರಾಂತಿಯಲ್ಲಿದ್ದಾರಂತೆ. ಈಗಾಗಲೇ ಸೈರಾ ಚಿತ್ರೀಕರಣ ಮುಗಿದಿದ್ದು, ರಿಲೀಸ್ ಗೆ ತಯಾರಾಗುತ್ತಿದೆಯಂತೆ. ಈ ಮಧ್ಯೆ ಅಗ್ನಿ ಅವಘಡ ನಡೆದಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಲೆಜೆಂಡ್ ಚಿರಂಜೀವಿ ಬಗ್ಗೆ ಸುದೀಪ್ ಮಾಡಿದ ಟ್ವೀಟ್ ಏನು.?

2 ಕೋಟಿಗೋಸ್ಕರ ಚಿರು ಪುತ್ರ ಹೀಗೆ ಮಾಡ್ತಾರಾ?
ಸುಮಾರು 300 ಕೋಟಿ ವೆಚ್ಚದಲ್ಲಿ ಸೈರಾ ಸಿನಿಮಾ ಸಿದ್ಧವಾಗಿದೆ. ಚಿರಂಜೀವಿ, ಸುದೀಪ್, ಅಮಿತಾಬ್, ವಿಜಯ್ ಸೇತುಪತಿ, ಜಗಪತಿ ಬಾಬು, ನಯನತಾರ, ತಮನ್ನಾ ಅಂತಹ ಸ್ಟಾರ್ ಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಿರುವಾಗ ಕೇವಲ 2 ಕೋಟಿಗೋಸ್ಕರ ಇಂತಹ ಕೆಲಸಕ್ಕೆ ರಾಮ್ ಚರಣ್ ಆಲೋಚನೆ ಮಾಡ್ತಾರಾ ಎಂದು ಇನ್ನೊಂದು ವರ್ಗ ಹೇಳುತ್ತಿದೆ.