For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹಬ್ಬಿರುವ ಗಾಸಿಪ್ ನಿಜವೇ?

  By ಹರಾ
  |

  ನ್ಯೂಸ್ ಚಾನೆಲ್ ನಲ್ಲಿ ಸಿಗುವ ಬ್ರೇಕಿಂಗ್ ನ್ಯೂಸ್ ಗಿಂತ ಹೆಚ್ಚು ಗರಮಾಗರಂ ಆಗಿರುವ ಸುದ್ದಿ ಬೇಕು ಅಂದ್ರೆ ಒಮ್ಮೆ ಗಾಂಧಿನಗರವನ್ನ ರೌಂಡ್ ಹಾಕೊಂಡ್ ಬರ್ಬೇಕು.

  ಅಲ್ಲಿ ಸಿಗುವ ಸುದ್ದಿಗಳಿಗೆ ತಲೆ-ಬುಡಗಳಿರುವುದಿಲ್ಲ. ಅದು ಸತ್ಯವೋ, ಸುಳ್ಳೋ ಅಂತ ನಿರ್ಧರಿಸುವುದೂ ಅಷ್ಟೇ ಕಷ್ಟ. ನದಿ ಮೂಲ, ಋಷಿ ಮೂಲ ಕಂಡು ಹಿಡಿಯುವುದು ಕಷ್ಟ. ಹಾಗೇ ಗಾಂಧಿನಗರದ ಸುದ್ದಿ ಮೂಲ ಕೂಡ.!

  ತಲೆಗೆ ಹೆಬ್ಬಾವು ಬಿಟ್ಟಂಗಾಗುವ ಗಾಂಧಿನಗರದ ಗಲ್ಲಿ ಗಾಸಿಪ್ ಗೆ ಈಗ ಆಹಾರವಾಗಿರುವವರು ಮಿಸ್ಟರ್ ದರ್ಶನ್ ಅರ್ಥಾತ್ ಚಾಲೆಂಜಿಂಗ್ ಸ್ಟಾರ್ ದರ್ಶನ್.! [ದರ್ಶನ್ ತೋಟದ ಮನೆಯಲ್ಲಿ ಆಗಿದ್ದೇನು? ಫುಲ್ ಸ್ಟೋರಿ]

  ದರ್ಶನ್ ವೈಯುಕ್ತಿಕ ಜೀವನದ ಬಗ್ಗೆ ಗಾಂಧಿನಗರದ ಮೂಲೆಮೂಲೆಯಲ್ಲೂ ಗುಲ್ಲೆದ್ದಿದೆ. ಅದನ್ನ ಕೇಳಿ ನಾವೂ ಕೂಡ ತಬ್ಬಿಬ್ಬಾಗಿದ್ದೀವಿ. ಅದೇನು ಅಂತ ವಿವರವಾಗಿ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

  ದರ್ಶನ್ ಸಂಸಾರದಲ್ಲಿ ಮತ್ತೆ ಬಿರುಗಾಳಿ?

  ದರ್ಶನ್ ಸಂಸಾರದಲ್ಲಿ ಮತ್ತೆ ಬಿರುಗಾಳಿ?

  ಹೆಂಡತಿ ವಿಜಯಲಕ್ಷ್ಮಿಗೆ ಪೀಡಿಸಿ ದರ್ಶನ್ ಕಂಬಿ ಎಣಿಸಿದ ಸುದ್ದಿ ನಿಮಗೆಲ್ಲಾ ಗೊತ್ತಿದೆ. ಅಂದು ಎಲ್ಲಾ ಸಮಸ್ಯೆಗಳನ್ನ ಪರಿಹಾರ ಮಾಡಿಕೊಂಡು ಸುಖ ಸಂಸಾರಕ್ಕೆ ನಾಂದಿ ಹಾಡಿದ್ದ ದರ್ಶನ್ ಸಾಂಸಾರಿಕ ಜೀವನದಲ್ಲಿ ಮತ್ತೆ ಬಿರುಗಾಳಿ ಎದ್ದಿದೆ ಅಂತ ಗಾಸಿಪ್ ಹರಡಿದೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಡಿಸಿದ ಹೊಸ ಬಾಂಬ್]

  ವಿಚ್ಛೇದನ ನೀಡ್ತಾರಂತೆ ದರ್ಶನ್?

  ವಿಚ್ಛೇದನ ನೀಡ್ತಾರಂತೆ ದರ್ಶನ್?

  ಎಲ್ಲೆಡೆ ಹಬ್ಬಿರುವ ರೂಮರ್ಸ್ ಪ್ರಕಾರ, ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯದಲ್ಲಿ ವಿರಸ ಉಂಟಾಗಿದೆ. ವಿಚ್ಛೇದನ ನೀಡುವುದಕ್ಕೆ ವಿಜಯಲಕ್ಷ್ಮಿ ಮುಂದಾಗಿದ್ದಾರಂತೆ. ದರ್ಶನ್ ಕೂಡ ಕೋರ್ಟ್-ಕಛೇರಿ ಅಂತ ಅಲೆದಾಡುತ್ತಿದ್ದಾರಂತೆ. [ಪತ್ರಕರ್ತರನ್ನ ಕಂಡರೆ ದರ್ಶನ್ ಉರಿದು ಬೀಳುವುದೇಕೆ?]

  ವಿರಸಕ್ಕೆ ಕಾರಣವೇನು?

  ವಿರಸಕ್ಕೆ ಕಾರಣವೇನು?

  ದರ್ಶನ್ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಅಂತ ಆಗಾಗ ಗಾಸಿಪ್ ಹಬ್ಬುತ್ತಲೇ ಇತ್ತು. ಈಗ ಅದೇ ಗಾಸಿಪ್ ಮತ್ತೆ ತಲೆ ಎತ್ತಿ ಬುಸುಗುಡುವುದಕ್ಕೆ ಕಾರಣ ಮತ್ತೊಬ್ಬ ಸ್ಯಾಂಡಲ್ ವುಡ್ ನಟಿ.! [ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗಾ ಅನ್ನೋದು?]

  ಯಾರು ಆ ನಟಿ?

  ಯಾರು ಆ ನಟಿ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ಕಾರಣ ಮಾಡೆಲ್ ಕಮ್ ನಟಿ ಅನ್ನೋದು ಲೇಟೆಸ್ಟ್ ಗಾಸಿಪ್. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಮಾಡೆಲಿಂಗ್ ಮಾಡಿ, ನಂತರ ಸ್ಯಾಂಡಲ್ ವುಡ್ ಗೆ ಕಾಲಿಟ್ಟ 'ಆ' ನಟಿ 'ಅಗಮ್ಯ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ತಮಿಳು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಬದುಕಿನ ನಿಜವಾದ ದರ್ಶನ]

  'ಆ' ನಟಿಗೂ ದರ್ಶನ್ ಗೂ ಎಲ್ಲಿಗೆಲ್ಲಿಯ ಸಂಬಂಧ?

  'ಆ' ನಟಿಗೂ ದರ್ಶನ್ ಗೂ ಎಲ್ಲಿಗೆಲ್ಲಿಯ ಸಂಬಂಧ?

  ಶ್ರೀಮಂತ ಕುಟುಂಬದಿಂದ ಬಂದಿರುವ 'ಆ' ನಟಿ ಅನೇಕ ಚಿನ್ನಾಭರಣ ಜಾಹೀರಾತುಗಳಲ್ಲಿ ಮಿಂಚಿದ್ದಾರೆ. ಫ್ಯಾಶನ್ ಶೋಗಳಲ್ಲಿ ಬೆಕ್ಕಿನ ನಡಿಗೆ ಪ್ರದರ್ಶನ ಮಾಡಿದ್ದಾರೆ. ಆಗಾಗ ಪೇಜ್ 3 ಪಾರ್ಟಿಗಳಿಗೆ ಹಾಜರ್ ಆಗುತ್ತಿರುತ್ತಾರೆ. ಇಂತಹ ಪೇಜ್ 3 ಪಾರ್ಟಿಗಳಲ್ಲೇ ದರ್ಶನ್ ಹಾಗೂ 'ಆ' ನಟಿಗೆ ಪರಿಚಯವಾಗಿದ್ದಂತೆ.

  ಈಗ ಹಬ್ಬಿರುವ ಗಾಸಿಪ್ ಏನು?

  ಈಗ ಹಬ್ಬಿರುವ ಗಾಸಿಪ್ ಏನು?

  ದರ್ಶನ್ ಮತ್ತು 'ಆ' ನಟಿಯ ಫ್ರೆಂಡ್ ಶಿಪ್ ಎಕ್ಸ್ ಟ್ರಾ ಸ್ಪೆಷಲ್ ಆಗಿದ್ಯಂತೆ. ದರ್ಶನ್ ಕೂಡ ಆಕೆಯನ್ನ ಬನ್ನೇರುಘಟ್ಟದ ಬಂಗಲೆಯೊಂದರಲ್ಲಿ ಬಿಟ್ಟಿದ್ದಾರಂತೆ ಅಂತ ಅಂತೆ ಕಂತೆ ಪುರಾಣ ಶುರುವಾಗಿದೆ.

  ಇದೇ ವಿಚಾರಕ್ಕೆ ಡೈವೋರ್ಸ್?

  ಇದೇ ವಿಚಾರಕ್ಕೆ ಡೈವೋರ್ಸ್?

  ಈ ವಿಚಾರವನ್ನು ತಿಳಿದ ವಿಜಯಲಕ್ಷ್ಮಿ ಬೇಸರಗೊಂಡು ವಿಚ್ಛೇದನ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋದು ಗಾಸಿಪ್ ಪಂಡಿತರ ಮಾತು.

  ಬೇರೆ ಮನೆಯಲ್ಲಿದ್ದಾರಾ ದರ್ಶನ್ ಪತ್ನಿ?

  ಬೇರೆ ಮನೆಯಲ್ಲಿದ್ದಾರಾ ದರ್ಶನ್ ಪತ್ನಿ?

  ದಾಂಪತ್ಯದಲ್ಲಿ ಬಿರುಕು ಮೂಡಿರುವ ಕಾರಣ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬನಶಂಕರಿಯಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರಂತೆ.

  ಇಲ್ಲಿ ಇನ್ನೊಂದು ಟ್ವಿಸ್ಟ್ ಇದೆ.!

  ಇಲ್ಲಿ ಇನ್ನೊಂದು ಟ್ವಿಸ್ಟ್ ಇದೆ.!

  ಈಗ ದರ್ಶನ್ ಜೊತೆ ಲಿಂಕ್ ಆಗಿದ್ದಾರೆ ಎನ್ನಲಾಗಿರುವ 'ಆ' ನಟಿಗೆ ಈ ಹಿಂದೆಯೇ ಮದುವೆಯಾಗಿ ಮಗು ಇತ್ತು ಅಂತ ಗಾಂಧಿನಗರದಲ್ಲಿ ಹೇಳುವವರೂ ಇದ್ದಾರೆ. ಆದ್ರೆ, ಇದನ್ನೆಲ್ಲಾ ಊಹಿಸಿಕೊಳ್ಳುವುದೂ ಕಷ್ಟ.!

  ಯಾವುದು ಸುಳ್ಳು-ಯಾವುದು ಸತ್ಯ?

  ಯಾವುದು ಸುಳ್ಳು-ಯಾವುದು ಸತ್ಯ?

  ದರ್ಶನ್ ಒಬ್ಬ ಸ್ಟಾರ್. ಅಂದ್ಮೇಲೆ ಅವರ ವಿರುದ್ಧ ಗಾಸಿಪ್ ಗಳು ಹೊಸದೇನಲ್ಲ. ದಿನನಿತ್ಯ ಒಬ್ಬರಲ್ಲ ಒಬ್ಬರ ಸುತ್ತ ಗಾಸಿಪ್ ಸುದ್ದಿ ಹರಡುತ್ತಲೇ ಇರುತ್ತದೆ. ಅಂತದ್ರಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ವಿಚ್ಛೇದನ ನೀಡ್ತಾರೆ ಅಂದ್ರೆ, ಅದು ದೂರದ ಮಾತು. ಅದ್ರಲ್ಲೂ ಅದಕ್ಕೆ ಕಾರಣ ಮತ್ತೋರ್ವ ನಟಿ ಅಂದ್ರೆ ಯಾರ್ ನಂಬ್ತಾರೆ?

  ಸಂಬಂಧ ಕಲ್ಪಿಸುವುದು ತಪ್ಪು

  ಸಂಬಂಧ ಕಲ್ಪಿಸುವುದು ತಪ್ಪು

  ಸೆಲೆಬ್ರಿಟಿ ಆದ ಕಾರಣ ಪೇಜ್ 3 ಪಾರ್ಟಿಗಳಿಗೆ ಹೋಗುವುದು ಸಾಮಾನ್ಯ. ಅಲ್ಲಿ ಎಲ್ಲರ ಪರಿಚಯವಾಗುವುದೂ ಅಷ್ಟೇ ಸಹಜ. ಪರಿಚಯ-ಸ್ನೇಹವನ್ನ ತಪ್ಪಾಗಿ ಅರ್ಥೈಸಿ ಸಂಬಂಧ ಕಲ್ಪಿಸುವುದು ತಪ್ಪು.

  ಗಾಸಿಪ್ 'ಗಾಸಿಪ್' ಆಗೇ ಇರಲಿ

  ಗಾಸಿಪ್ 'ಗಾಸಿಪ್' ಆಗೇ ಇರಲಿ

  ದರ್ಶನ್ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟ. ಅವರು ಹೊಂದಿರುವ ಅಭಿಮಾನಿ ಬಳಗ ಕೂಡ ಅಪಾರ. ಇಂತಹ ಗಾಸಿಪ್ ಸುದ್ದಿಗಳಿಂದ ಬೇಸೆತ್ತು ಮಾಧ್ಯಮ ಹಾಗೂ ಪತ್ರಿಕಾ ಮಿತ್ರರಿಂದ ದೂರ ಉಳಿದಿರುವ ದರ್ಶನ್ ಸುತ್ತ ಈಗ ಹರಡಿರುವ ಗಾಸಿಪ್, ಬರೀ 'ಗಾಸಿಪ್' ಆಗಿರಲಿ. ದರ್ಶನ್ ದಾಂಪತ್ಯ ಸುಖವಾಗಿರಲಿ ಅನ್ನೋದು ನಮ್ಮ ಆಶಯ. ಅಭಿಮಾನಿಗಳು ಹಾರೈಸೋದು ಕೂಡ ಇದನ್ನೇ ಅಲ್ಲವೇ.

  ರಾಧಿಕಾ ಕುಮಾರಸ್ವಾಮಿ ಬಗ್ಗೆ ಕೂಡ ಗಾಸಿಪ್

  ರಾಧಿಕಾ ಕುಮಾರಸ್ವಾಮಿ ಬಗ್ಗೆ ಕೂಡ ಗಾಸಿಪ್

  ಕೆಲವೇ ದಿನಗಳ ಹಿಂದೆಯಷ್ಟೇ ರಾಧಿಕಾ ಕುಮಾರಸ್ವಾಮಿ ವೈಯುಕ್ತಿಕ ವಿಚಾರದ ಬಗ್ಗೆ ಕೂಡ ಇಂತದ್ದೇ ಗಾಸಿಪ್ ಹಬ್ಬಿತ್ತು. ಆದ್ರೆ ಯಾವುದಕ್ಕೂ, ರಾಧಿಕಾ ಮೇಡಂ ತುಟಿಕ್ ಪಿಟಿಕ್ ಅಂದಿರಲಿಲ್ಲ. ಬುಸುಗುಡುತ್ತಿದ್ದ ಗಾಸಿಪ್ ತಣ್ಣಗಾಗೋಯ್ತು. ದರ್ಶನ್ ಖಾಸಗಿ ಬದುಕು ಕೂಡ ಗಾಸಿಪ್ ಗಳಿಂದ ಮುಕ್ತವಾಗಿರಲಿ ಅನ್ನೋದು ಈ ಲೇಖನದ ಆಶಯ.

  English summary
  According to the grapevine, Kannada Actor Darshan will file divorce shortly. Darshan is also alleged for having affair with another Kannada Actress. But how far is it true is question as of now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X