For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ಮುಖಂಡನ ಮಗನೊಂದಿಗೆ ಹನ್ಸಿಕಾ ಮೋಟ್ವಾನಿ ನಿಶ್ಚಿತಾರ್ಥ: ಬಿಂದಾಸ್ ಹುಡುಗಿ ಕಥೆಯೇನು?

  |

  ಹನ್ಸಿಕಾ ಮೋಟ್ವಾನಿ ದಕ್ಷಿಣ ಭಾರತದಲ್ಲಿ ಜನಪ್ರಿಯ ನಟಿ. ಉತ್ತರ ಭಾರತದವರಾಗಿದ್ದರೂ ಹೆಸರು ಮಾಡಿದ್ದು ದಕ್ಷಿಣ ಭಾರತದಲ್ಲಿ. ತೆಲುಗು, ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದ ನಟಿ ಕನ್ನಡಿಗರೂ ಚಿರಪರಿಚಿತ. ಸದ್ಯ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ನಟಿಯೀಗ ಮತ್ತೆ ಸುದ್ದಿಯಲ್ಲಿದ್ದಾರೆ.

  ಹೌದು, ಹನ್ಸಿಕಾ ಮೋಟ್ವಾನಿ ಮತ್ತೆ ಸುದ್ದಿಯಲ್ಲಿರೋದು ಸಿನಿಮಾಗಳಿಂದ ಅಲ್ಲ. ಮದುವೆ ವಿಚಾರವಾಗಿ ಹನ್ಸಿಕಾ ಮೋಟ್ವಾನಿ ಸದ್ದು ಮಾಡುತ್ತಿದ್ದಾರೆ. ಈಗಂತೂ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ನಟಿ ಬಗ್ಗೆನೇ ಚರ್ಚೆ. ಟಾಲಿವುಡ್‌ನಲ್ಲಿ ಹರಿದಾಡುತ್ತಿರೋ ಸುದ್ದಿ ಏನಪ್ಪಾ ಅಂದ್ರೆ, ಹನ್ಸಿಕಾ ಶೀಘ್ರದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ.

  ಸದ್ಯಕ್ಕೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಹನ್ಸಿಕಾ ಮೋಟ್ವಾನಿ ದಕ್ಷಿಣ ಭಾರತದ ರಾಜಕೀಯ ಮುಖಂಡನ ಮಗನೊಂದಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಹಾಗಿದ್ದರೆ, ಹನ್ಸಿಕಾ ನಿಶ್ಚಿತಾರ್ಥದ ಬಗ್ಗೆ ಓಡಾಡುತ್ತಿರುವ ಸುದ್ದಿಯೇನು? ತಿಳಿಯಲು ಮುಂದೆ ಓದಿ.

  ಅಪ್ಪು ಜೊತೆ ನಟಿಸಿದ್ದ 'ಬಿಂದಾಸ್' ಹನ್ಸಿಕಾ

  ಅಪ್ಪು ಜೊತೆ ನಟಿಸಿದ್ದ 'ಬಿಂದಾಸ್' ಹನ್ಸಿಕಾ

  ಹನ್ಸಿಕಾ ಮೋಟ್ವಾನಿ ಬಾಲಿವುಡ್‌ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಹೃತಿಕ್ ರೋಷನ್ ನಟಿಸಿದ್ದ 'ಕೋಯಿ ಮಿಲ್ ಗಯಾ', 'ಜಾಗೋ'ದಂತಹ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಪಾದಾರ್ವಣೆ ಮಾಡಿದ್ದರು. ಈ ವೇಳೆನೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ಬಿಂದಾಸ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ ಮೂಲಕ ಹನ್ಸಿಕಾ ಕನ್ನಡಿಗರಿಗೆ ಪರಿಚಯವಿದೆ. ಈ ನಟಿ ಈಗ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

  'ದೇಶಮುದುರು' ಸಿನಿಮಾ ಮೂಲಕ ನಾಯಕಿ ಪಟ್ಟ

  'ದೇಶಮುದುರು' ಸಿನಿಮಾ ಮೂಲಕ ನಾಯಕಿ ಪಟ್ಟ

  ಹನ್ಸಿಕಾ ಮೋಟ್ವಾನಿ 'ದೇಶಮುದುರು' ಸಿನಿಮಾ ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿದ್ದರು. ಪುರಿ ಜಗನ್ನಾಥ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅಲ್ಲು ಅರ್ಜುನ್ ಹಾಗೂ ಹನ್ಸಿಕಾ ಮೋಟ್ವಾನಿ ಇಬ್ಬರ ಕಾಂಬಿನೇಷನ್ ಕ್ಲಿಕ್ ಆಗಿತ್ತು. ದಕ್ಷಿಣದ ಮೊದಲ ಸಿನಿಮಾದಲ್ಲಿಯೇ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇಲ್ಲಿಂದ ದಕ್ಷಿಣ ಭಾರತದಲ್ಲಿ ಹನ್ಸಿಕಾ ಮೋಟ್ವಾನಿ ಜರ್ನಿ ಆರಂಭ ಆಗಿದೆ.

  ಬಿಂದಾಸ್ ನಟಿ ನಿಶ್ಚಿತಾರ್ಥ?

  ಬಿಂದಾಸ್ ನಟಿ ನಿಶ್ಚಿತಾರ್ಥ?

  ಕೆಲವು ತಮಿಳು ಮಾಧ್ಯಮಗಳ ಪ್ರಕಾರ, ಹನ್ಸಿಕಾ ಮೋಟ್ವಾನಿ ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ರಾಜಕೀಯ ಮುಖಂಡನ ಪುತ್ರನೊಂದಿಗೆ ನಿಶ್ಚಿತಾರ್ಥ ಕೂಡ ಮಾಡಿಕೊಳ್ಳಿದ್ದಾರೆ ಎನ್ನಲಾಗುತ್ತಿದೆ. ಹನ್ಸಿಕಾ ಕೈ ಹಿಡಿಯಲಿರುವ ಹುಡುಗ ಉದ್ಯಮಿಯಾಗಿದ್ದು, ಶೀಘ್ರದಲ್ಲಿಯೇ ನಿಶ್ಚಿತಾರ್ಥದ ದಿನವನ್ನು ಅನೌನ್ಸ್ ಮಾಡಲಾಗುತ್ತೆ ಎಂದು ವರದಿಯಾಗಿದೆ. ಆದರೆ, ಇನ್ನೂ ಹನ್ಸಿಕಾ ಮೋಟ್ವಾನಿ ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡಿಲ್ಲ.

  ಪ್ರಭುದೇವಾ ಜೊತೆ ಅಫೇರ್?

  ಪ್ರಭುದೇವಾ ಜೊತೆ ಅಫೇರ್?

  ಹನ್ಸಿಕಾ ಮೋಟ್ವಾನಿ ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ. ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವಾ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿತ್ತು. ಸುಮಾರು 50 ಸಿನಿಮಾಗಳಲ್ಲಿ ನಟಿಸಿರುವ ಹನ್ಸಿಕಾ ಮೋಟ್ವಾನಿ ಕರಿಯರ್ ಇಲ್ಲಿಂದ ಕೊಂಚ ಹಿನ್ನೆಲೆ ಅನುಭವಿಸಿತ್ತು. 50ನೇ ಸಿನಿಮಾ ಮಹಾ ಬಳಿಕ ಈಕೆಯ ಬಳಿಕ 7 ಸಿನಿಮಾಗಳಿವೆ. ಈ ಮಧ್ಯೆನೇ ಹನ್ಸಿಕಾ ನಿಶ್ಚಿತಾರ್ಥ ಸುದ್ದಿ ಸದ್ದು ಮಾಡುತ್ತಿದೆ.

  English summary
  Rumour Is That Hansika Motwani Will Engage With South Indian Politician Son , Know More,
  Saturday, August 6, 2022, 17:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X