Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಜಮೌಳಿ ಸಿನಿಮಾದಲ್ಲಿ ಪ್ರಭಾಸ್ - ಜೂ.ಎನ್‌ಟಿಆರ್? ಯಂಗ್ ಟೈಗರ್ ಫ್ಯಾನ್ಸ್ ಆಕ್ರೋಶ!
ಚಿತ್ರರಂಗದ ಅಂದ್ಮೇಲೆ ನೂರಾರು ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಒಂದು ಹೆಜ್ಜೆ ಮುಂದೆನೇ. ಪ್ರತಿದಿನ ಏನಾದರೂ ಒಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇರುತ್ತೆ.
ಸದ್ಯಕ್ಕೀಗ ರಾಜಮೌಳಿ ಸಿನಿಮಾ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಂತ ಅದು ಮಹೇಶ್ ಬಾಬು ಸಿನಿಮಾ ಬಗ್ಗೆ ಅಲ್ಲ. ಮೂವಿ ಮಾಂತ್ರಿಕ ಹೊಸ ಸಿನಿಮಾ ಬಗ್ಗೆ ಟಾಲಿವುಡ್‌ನಲ್ಲಿ ಸಖತ್ ಸುದ್ದಿಯೊಂದು ಹರಿದಾಡುತ್ತಿದೆ. ಈ ಸುದ್ದಿ ತೆಲುಗು ಮಂದಿಯ ನಿದ್ದೆ ಕೆಡಿಸಿದೆ.
RRR ಸಿನಿಮಾ ಬಳಿಕ ರಾಜಮೌಳಿ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾ ನಿರ್ದೇಶಕನ ಮಾಡುತ್ತಿರೋದು ಗೊತ್ತೇ ಇದೆ. ಈ ಮಧ್ಯೆ ಮತ್ತೊಂದು ಸಿನಿಮಾ ಬಗ್ಗೆನೂ ಟಾಕ್ ಶುರುವಾಗಿದೆ. ಅದೇನು ಅಂತ ತಿಳಿಯೋಕೆ ಮುಂದೆ ಓದಿ.

ಪ್ರಭಾಸ್ - ಜೂ.ಎನ್‌ಟಿಆರ್ - ರಾಜಮೌಳಿ ಸಿನಿಮಾ
ಹೌದು, ಟಾಲಿವುಡ್‌ನಲ್ಲಿ ರಾಜಮೌಳಿಯ ಹೊಸ ಸುದ್ದಿಯೊಂದು ಸದ್ದು ಮಾಡುತ್ತಿದೆ. ಮಹೇಶ್ ಬಾಬು ಸಿನಿಮಾ ಬಳಿಕ ರಾಜಮೌಳಿ ಮತ್ತೆ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಯಂಗ್ ಟೈಗರ್ ಜೂ.ಎನ್‌ಟಿಆರ್‌ಗೆ ಆಕ್ಷನ್ ಕಟ್ ಹೇಳುತ್ತಾರಂತೆ. ಇಬ್ಬರೂ ಈಗಾಗಲೇ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರಂತೆ. ಅದಕ್ಕೆ ಕಥೆ ಕೂಡ ರೆಡಿಯಾಗುತ್ತಿದೆ ಅನ್ನೋದು ಸದ್ಯ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ. ಈ ಮ್ಯಾಟರ್ ಹೊರಬೀಳುತ್ತಿದ್ದಂತೆ ಪ್ರಭಾಸ್ ಹಾಗೂ ಯಂಗ್ ಟೈಗರ್ ಅಭಿಮಾನಿಗಳು ಫುಲ್ ಕನ್ಪ್ಯೂಸ್ ಆಗಿದ್ದಾರೆ.

ಪ್ರಭಾಸ್, ಜೂ.ಎನ್‌ಟಿಆರ್ ಮೊದಲ ಸಿನಿಮಾ
ಟಾಲಿವುಡ್‌ನಲ್ಲಿ ಹೀರೊಗಳ ನಡುವೆ ಸ್ಟಾರ್ ವಾರ್ ಅನ್ನೋದು ಏನಿಲ್ಲ. ಪ್ರಭಾಸ್ ಆಗಲಿ, ಜೂ.ಎನ್‌ಟಿಆರ್ ಆಗಿರಲಿ ಇಬ್ಬರೂ ರಾಜಮೌಳಿಗೆ ತುಂಬಾನೇ ಕ್ಲೋಸ್ ಇದ್ದಾರೆ. ಇಬ್ಬರ ಕರಿಯರ್‌ಗೂ ಬಿಗ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದು ಕೂಡ ರಾಜಮೌಳಿಯೇ. ಹೀಗಿರುವಾಗ, ಇಬ್ಬರ ಜೊತೆ ಸಿನಿಮಾ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಅಲ್ಲದೆ ಇಬ್ಬರು ಸ್ಟಾರ್ ನಟರು ಒಂದೇ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳೋದು ಕ್ರೇಜಿ ಕಾಂಬಿನೇಷನ್ ಅನ್ನೋದರಲ್ಲಿ ಡೌಟೇ ಇಲ್ಲ. ಆದರೆ, ಈ ಸುದ್ದಿಯನ್ನು ನಂಬುವುದಕ್ಕೆ ಅಭಿಮಾನಿಗಳು ರೆಡಿಯಿಲ್ಲ. ಜೊತೆಗೆ ಜೂ.ಎನ್‌ಟಿಆರ್ ಫ್ಯಾನ್ಸ್ ಅಂತೂ ಈ ಸಿನಿಮಾ ಬೇಡವೇ ಬೇಡ ಅಂತಿದ್ದಾರೆ.

ರಾಜಮೌಳಿ ವಿರುದ್ಧ ಜೂ.ಎನ್‌ಟಿಆರ್ ಫ್ಯಾನ್ಸ್ ಬೇಸರ
ಟಾಲಿವುಡ್‌ನಲ್ಲಿ ರಾಜಮೌಳಿ, ಪ್ರಭಾಸ್, ಜೂ.ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ ಬಗ್ಗೆ ಸುದ್ದಿ ಓಡಾಡುತ್ತಿರೋದು ನಿಜ. ಆದರೆ, ಎಲ್ಲೂ ಈ ಮೂವರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಈ ಮಧ್ಯೆ ರಾಜಮೌಳಿ ವಿರುದ್ಧ ಜೂ.ಎನ್‌ಟಿಆರ್ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ದಯವಿಟ್ಟು ಈ ಸಿನಿಮಾ ಒಪ್ಪಿಕೊಳ್ಳಬೇಡಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ರಾಜಮೌಳಿ ನಿಮ್ಮನ್ನು ಸೆಕೆಂಡ್ ಹೀರೊ ತರ ತೋರಿಸುತ್ತಾರೆ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ
RRR ಬಳಿಕ ಮಹೇಶ್ ಬಾಬು ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ಆದರೆ, ಸದ್ಯಕ್ಕೆ ಈ ಸಿನಿಮಾ ಶುರುವಾಗುವಂತೆ ಕಾಣುತ್ತಿಲ್ಲ. ಯಾಕಂದ್ರೆ, ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಸಿನಿಮಾ ಮುಗಿದ ಬಳಿಕ ರಾಜಮೌಳಿ ಸಿನಿಮಾ ಸೆಟ್ಟೇರಬೇಕು. ಇತ್ತ ರಾಜಮೌಳಿ RRR ಸಿನಿಮಾದ ಪ್ರಚಾರದಲ್ಲಿಯೇ ಬ್ಯುಸಿಯಾಗಿದ್ದಾರೆ. ಹೀಗಾಗಿ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಯಾವಾಗ ಶುರುವಾಗುತ್ತೋ ಅನ್ನೋದ ಗೊಂದಲವಿದೆ.