ಜೇನುಗೂಡು ಕಟ್ಟಲು ರೆಡಿ ಬಾಲಿವುಡ್ ಲವ್ ಬರ್ಡ್ಸ್: ಶೀಘ್ರದಲ್ಲೇ ಸಿದ್ಧಾರ್ಥ್,ಕಿಯಾರಾ ಮದುವೆ?

ಬಾಲಿವುಡ್‌ನಲ್ಲಿ ಗಾಳಿಸುದ್ದಿಗಳಿಗೇನು ಕಮ್ಮಿಯಿಲ್ಲ. ಪ್ರತಿ ದಿನ ಒಂದಲ್ಲ ಒಂದು ಗಾಳಿ ಸುದ್ದಿಗಳು ಒಡಾಡುತ್ತಲೇ ಇರುತ್ತವೆ. ಈಗ ಇಂತಹದ್ದೇ ಒಂದು ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಅದು ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಮದುವೆ.

ಬಾಲಿವುಡ್ ಹ್ಯಾಂಡ್ಸಮ್ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಡೇಟಿಂಗ್ ನಡೆಸುತ್ತಿರೋ ಬಗ್ಗೆ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಕಳೆದ ಹಲವು ತಿಂಗಳುಗಳಿಂದ ಇಬ್ಬರು ಮದುವೆ ಆಗುತ್ತಾರೆ ಅನ್ನೋ ವಿಷಯ ಹರಿದಾಡುತ್ತಲೇ ಇತ್ತು. ಈಗ ಮತ್ತೊಂದು ಸುದ್ದಿ ಬೇಜಾನ್ ಸದ್ದು ಮಾಡುತ್ತಿದೆ.

 ಸಿದ್ಧಾರ್ಥ್,ಕಿಯಾರಾ ಮದುವೆ ಡೇಟ್ ಫಿಕ್ಸ್?

ಸಿದ್ಧಾರ್ಥ್,ಕಿಯಾರಾ ಮದುವೆ ಡೇಟ್ ಫಿಕ್ಸ್?

ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇಬ್ಬರೂ ಮದುವೆ ಮ್ಯಾಟರ್ ಚರ್ಚೆಯಾಗುತ್ತಲೇ ಇತ್ತು. ಆದರೆ, ಈ ಬಗ್ಗೆ ಈ ಜೋಡಿ ಇದರೂವರೆಗೂ ಎಲ್ಲೂ ಹೇಳಿಕೆ ನೀಡಿಲ್ಲ. ಈಗ ಬಾಲಿವುಡ್ ಇಬ್ಬರ ವೈವಾಹಿಕ ಜೀವನಕ್ಕೆ ಕಾಲಿಡುವ ಸಮಯ ಬಂದೇ ಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ ಅನ್ನೋ ಗುಸು ಗುಸು ಬಾಲಿವುಡ್‌ನಲ್ಲಿ ಹರಡಿದೆ.

 ರಾಜಸ್ತಾನದಲ್ಲಿ ಈ ಜೋಡಿ ಮದುವೆ

ರಾಜಸ್ತಾನದಲ್ಲಿ ಈ ಜೋಡಿ ಮದುವೆ

ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇಬ್ಬರ ಮದುವೆ ಖಾಸಗಿಯಾಗಿ ನಡೆಯಲಿದೆ. ರಾಜಸ್ತಾನದಲ್ಲಿ ಕೆಲವೇ ಕೆಲವು ಸಂಬಂಧಿಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ ಅನ್ನೋ ಮಾತು ಹರಿದಾಡುತ್ತಿದೆ. ಕೇವಲ 100 ಜನರು ಮಾತ್ರ ಈ ಮದುವೆ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ಅಲ್ಲದೆ ಈಗಾಗಲೇ ಇಬ್ಬರೂ ಮದುವೆಗೆ ತಯಾರಿಯನ್ನೂ ನಡೆಸಿದ್ದಾರೆ ಎನ್ನಲಾಗಿದೆ.

 ಬಾಲಿವುಡ್ ಮಂದಿಗೆ ಇಲ್ಲ ಆಹ್ವಾನ

ಬಾಲಿವುಡ್ ಮಂದಿಗೆ ಇಲ್ಲ ಆಹ್ವಾನ

ಇಬ್ಬರ ಮದುವೆ ವಿಚಾರ ಸರ್ಪ್ರೈಸ್ ಅಲ್ಲದೇ ಹೋದರೂ, ಅಚ್ಚರಿ ವಿಷಯವೊಂದಿಗೆ. ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇಬ್ಬರ ಮದುವೆಯಲ್ಲಿ ಬಾಲಿವುಡ್ ಮಂದಿಗೆ ಆಹ್ವಾನ ನೀಡುದಿಲ್ವಂತೆ. ಬಾಲಿವುಡ್‌ ಸೆಲೆಬ್ರೆಟಿಗಳಿಗೆ ತೀರಾ ಕ್ಲೋಸ್ ಆಗಿರೋ ಜೋಡಿ, ಅವರಿಗೆ ಯಾಕೆ ಆಹ್ವಾನ ನೀಡುತ್ತಿಲ್ಲ ಅನ್ನೋದು ಇನ್ನೂ ಗೌಪ್ಯವಾಗಿಯೇ ಇದೆ. ಆದರೂ, ನಿರ್ಮಾಪಕ ಕರಣ್ ಜೋಹರ್ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ.

 ಈ ಜೋಡಿ ಸಿನಿಮಾದಲ್ಲಿ ಬ್ಯುಸಿ

ಈ ಜೋಡಿ ಸಿನಿಮಾದಲ್ಲಿ ಬ್ಯುಸಿ

ಕಿಯಾರಾ ಅಡ್ವಾನಿ ಬಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೇ 'ಸತ್ಯ ಪ್ರೇಮ್ ಕಿ ಕಥಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ 'ಮಿಷನ್ ಮಜ್ನು' ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಹಾಗೇ 'ಯೋಧ' ಸೆಟ್ಟೇರಿದ್ದು, ಶೂಟಿಂಗ್ ನಡೆಯುತ್ತಿದೆ.

More from Filmibeat

English summary
Rumour Is That Sidharth Malhotra Kiara Advani Wedding Will Be In Feb,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X