For Quick Alerts
  ALLOW NOTIFICATIONS  
  For Daily Alerts

  ಸೈಡಿಗ್ ಹೋಗೋ ಯಶ್ ಅಂದ್ರಾ ಎಸ್ ನಾರಾಯಣ್?

  By ಕುಸುಮ
  |

  ಇತ್ತೀಚೆಗೆ 'ರಾಕಿಂಗ್ ಸ್ಟಾರ್' ಯಶ್‌ಗೆ ಹೋಲುವಂತಹಾ ಒಂದು ಒಳ್ಳೆಯ ಕಥೆ ಮಾಡಿಕೊಂಡು 'ಕಲಾ ಸಾಮ್ರಾಟ್' ಎಸ್ ನಾರಾಯಣ್ ಕಥೆ ಕೇಳಿ ಕಾಲ್ಶೀಟ್ ಕೊಡುವಂತೆ ಸಂಪರ್ಕಿಸಿದ್ದಾರೆ. ಸದ್ಯ ಎರಡರಿಂದ ಮೂರು ವರ್ಷಗಳಿಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಯಶ್ ನೊಡೋಣ ಇರಿ ಸಾರ್ ಅಂದಿದ್ದಾರೆ.

  ನನಗೆ ಹಾಗೆಲ್ಲ 'ಕಾಲ್ಶೀಟ್ ಕಷ್ಟ ಆಗಲ್ಲ' ಅಂತ ಹೇಳ್ತಾರೆ ಅಂದುಕೊಂಡಿದ್ದ ಎಸ್ ನಾರಾಯಣ್ರಿಗೆ, ಯಶ್ ಹಾಕಿದ ಡೈಲಾಗ್ ಯಾಕೋ ಕಷ್ಟ ಅನ್ನಿಸಿದೆ. ಇದರಿಂದ ನಾರಾಯಣ್ ಹೊಸಬರ ಸಿನಿಮಾ ನಿರ್ದೇಶನ ಮಾಡೋಕೆ ಒಪ್ಪಿಕೊಂಡಿದ್ದಾರೆ. ಆ ಸಿನಿಮಾದ ಜಾಹೀರಾತಿನಲ್ಲಿ ಸೈಡ್ಗೆ ಹೋಗೋ ರಾಕಿಂಗ್ ಅಣ್ಣ ಡಾನ್ಸಲ್ ಕಿಂಗ್' ಅನ್ನೋ ಲೈನ್ ಬರೆಸಿದ್ದಾರೆ. ಹೀಗಂತ ಇವತ್ತಿನ ಪತ್ರಿಕೆಗಳ ಜಾಹಿರಾತು ನೋಡಿ ಚಿತ್ರಪ್ರೇಮಿಗಳು ಮಾತಾಡಿಕೊಳ್ಳುತ್ತಿದ್ದಾರೆ. [ಯಾರು ಅತ್ಯುತ್ತಮ ನಟ: ಯಶ್ ಅಥವಾ ಪುನೀತ್?]

  ನಿಜಕ್ಕೂ ಎಸ್ ನಾರಾಯಣ್ ಯಶ್ ವಿರುದ್ಧ ತಿರುಗಿ ಬಿದ್ದಿದ್ದಾರಾ? ಯಶ್ ಅವರು ಎಸ್ ನಾರಾಯಣ್ರಿಗೆ ಕಾಲ್ಶೀಟ್ ಕೊಡೋಕೆ ನೋ ಅಂದ್ರಾ? ಇದು ಸದ್ಯದ ಪ್ರಶ್ನೆ. ಆದರೆ ಇವತ್ತು ರಾಜ್ಯದ ಪ್ರಮುಖ ಪತ್ರಿಕೆಯೊಂದರಲ್ಲಿ ಕಾಣಿಸಿಕೊಂಡಿರುವ ಜಾಹೀರಾತಿನಲ್ಲಿ ಜೆ ಡಿ' ಎನ್ನುವ ಸಿನಿಮಾ ಕಲಾಸಾಮ್ರಾಟ್ ಎಸ್ ನಾರಾಯಣ್ರ 50ನೇ ಸಿನಿಮಾ ಅಂತ ಕಾಣಿಸಿಕೊಂಡಿದೆ.

  ಡಾನ್ ಎಂಟ್ರಿ ಎನ್ನುವ ಟ್ಯಾಗ್ಲೈನ್ ಕೊಟ್ಟಿರುವ ಚಿತ್ರದ ಮುಹೂರ್ತ ಜೂನ್ 23ರಂದು, ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇನ್ನು ಚಿತ್ರಕ್ಕೆ 'ಹಾರ್ಟ್ ಅಟ್ಯಾಕ್ ಮೂವಿ' ಎನ್ನುವ ಕಿಕ್ಕರ್ ಇಟ್ಟಿದ್ದು, ಮೇಲಿರುವ ಡೈಲಾಗ್ ಮಾತ್ರ ಯಶ್ ಅಭಿಮಾನಿಗಳ ಹಾರ್ಟ್‌ಗೇ ಅಟ್ಯಾಕ್ ಮಾಡಿದಂತಿದೆ!

  ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣವಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಲಿದ್ದಾರೆ. ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್ ರಚಿಸಿದ್ದಾರೆ. ಈ ಜಟಾಪಟಿಗಳೇನೇ ಇರಲಿ, ಯಶ್ ಮತ್ತು ಎಸ್ ನಾರಾಯಣ್ ಇಬ್ಬರೂ ಸೇರಿ ಒಂದು ಮಹೋನ್ನತ ಚಿತ್ರ ನೀಡಲಿ. [ವೆಂಕಟ್ ವಿರುದ್ಧ ಚಾಟಿ ಬೀಸಿದ ನಿರ್ದೇಶಕ ಎಸ್ ನಾರಾಯಣ್]

  English summary
  Kala Samrat S Narayan will be launching his 50th movie JD on 23rd June in Ramanagara. According to sources, Narayana had approached Rocking Star Yash to be the lead. But, Yash rejected as he was busy with other movies. But, promo speaks some other story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X