For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಹೊಸ ಚಿತ್ರಕ್ಕೆ ಹೊಸ ಸಂಗೀತ ನಿರ್ದೇಶಕ, ಯಾರವರು?

  By Suneetha
  |

  'ಕ್ರೇಜಿ ಬಾಯ್' ಚಿತ್ರದಲ್ಲಿ ದಿಲೀಪ್ ಪ್ರಕಾಶ್ ಮತ್ತು ಆಶಿಕ ರಂಗನಾಥ್ ಎಂಬ ಇಬ್ಬರು ಹೊಸ ಪ್ರತಿಭೆಗಳನ್ನು ಬೆಳ್ಳಿತೆರೆಗೆ ಪರಿಚಯ ಮಾಡಿದ, ನಿರ್ದೇಶಕ ಮಹೇಶ್ ಬಾಬು ಇದೀಗ ಮತ್ತೊಂದು ಪ್ರತಿಭೆಯನ್ನು ಪರಿಚಯಿಸಲು ಸಜ್ಜಾಗಿದ್ದಾರೆ.

  ಈ ಬಾರಿ ನಟ ಅಥವಾ ನಟಿಯನ್ನಲ್ಲ ಬದ್ಲಾಗಿ, ಸಂಗೀತ ಪ್ರತಿಭೆಯನ್ನು ಪರಿಚಯಿಸಲಿದ್ದಾರೆ. ಅದೂ ಒಬ್ಬ ಖ್ಯಾತ ನಟನ ಮಗನನ್ನು ಸಂಗೀತ ನಿರ್ದೇಶಕರಾಗಿ ಪರಿಚಯ ಮಾಡಿಕೊಡಲಿದ್ದಾರೆ.[ಚೊಚ್ಚಲ ಪ್ರತಿಭೆಗಳಿಗೆ ಬೆನ್ನುಲುಬಾದ ಮಹೇಶ್ ಬಾಬು]

  ಯಾವಾಗಲೂ ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಈ ಅಪರೂಪದ ನಿರ್ದೇಶಕ ಮಹೇಶ್ ಬಾಬು ಅವರು, ಈ ಬಾರಿ ಯಾರನ್ನೂ ಬಿಗ್ ಸ್ಕ್ರೀನ್ ಗೆ ಪರಿಚಯ ಮಾಡಿ ಕೊಡಲಿದ್ದಾರೆ ಅನ್ನೋದನ್ನ ನೋಡಲು ಮುಂದೆ ಓದಿ....

  ಖ್ಯಾತ ಕಾಮಿಡಿ ಕಿಂಗ್ ಮಗ

  ಖ್ಯಾತ ಕಾಮಿಡಿ ಕಿಂಗ್ ಮಗ

  ಈ ಬಾರಿ ನಿರ್ದೇಶಕ ಮಹೇಶ್ ಬಾಬು ಅವರು ಪರಿಚಯ ಮಾಡುತ್ತಿರುವ ಹೊಸ ಪ್ರತಿಭೆ, ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್ ಕಮ್ ಮ್ಯೂಸಿಕ್ ಕಂಪೋಸರ್ ಸಾಧು ಕೋಕಿಲಾ ಅವರ ಮಗ ಸುರಾಗ್ ಅವರು.

  ಯಾವ ಚಿತ್ರಕ್ಕೆ

  ಯಾವ ಚಿತ್ರಕ್ಕೆ

  'ಕ್ರೇಜಿ ಬಾಯ್' ನಂತರ ಹೊಸ ಪ್ರಾಜೆಕ್ಟ್ ಒಂದನ್ನು ಕೈಗೆತ್ತಿಕೊಂಡಿರುವ ಮಹೇಶ್ ಬಾಬು ಅವರು, ಹೊಸ ಪ್ರತಿಭೆಯಿಂದ ಮ್ಯೂಸಿಕ್ ಕಂಪೋಸ್‌ ಮಾಡಿಸಿದರೆ ಹೇಗೆ ಅಂತ ಆಲೋಚನೆ ಮಾಡಿ, ಸಾಧು ಮಹಾರಾಜ್ ಪುತ್ರನಿಗೆ ಅವಕಾಶ ನೀಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸಾಧು ಅವರ ಮಗ ಸುರಾಗ್ ಮ್ಯೂಸಿಕ್ ಕಂಪೋಸ್‌ ಮಾಡಲಿದ್ದಾರೆ ಎನ್ನಲಾಗುತ್ತಿದೆ.

  ಚಿತ್ರದ ನಾಯಕ-ನಾಯಕಿ ಯಾರು

  ಚಿತ್ರದ ನಾಯಕ-ನಾಯಕಿ ಯಾರು

  'ಆ ದಿನಗಳು' ಖ್ಯಾತಿಯ ಚೇತನ್ ಮತ್ತು ನಟಿ ಲತಾ ಹೆಗಡೆ ಕಾಣಿಸಿಕೊಳ್ಳಲಿರುವ ಹೊಸ ಚಿತ್ರಕ್ಕೆ ಸುರಾಗ್ ಸಾಧು ಕೋಕಿಲಾ ಅವರು ಸಂಗೀತ ನೀಡಲಿದ್ದಾರೆ. 'ಮೈನಾ' ನಂತ್ರ ಲಾಂಗ್ ಗ್ಯಾಪ್ ತೆಗೆದುಕೊಂಡಿರುವ ಚೇತನ್, 'ನೂರೊಂದು ನೆನಪು' ಚಿತ್ರದಲ್ಲಿ ನಟಿಸಿದ್ದು, ಇದೀಗ ಮಹೇಶ್ ಅವರ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.['ನೂರೊಂದು ನೆನಪು'ಗಳಲ್ಲಿ ಚೇತನ್-ಮೇಘನಾ ರಾಜ್]

  'ಗಡಿಯಾರ' ಸಿನಿಮಾದ ಕಥೆ ಏನಾಯ್ತು?

  'ಗಡಿಯಾರ' ಸಿನಿಮಾದ ಕಥೆ ಏನಾಯ್ತು?

  ಈ ಮೊದಲು ಸುರಾಗ್ ಅವರು ನಾಗಶೇಖರ್ ನಿರ್ದೇಶನದ 'ಗಡಿಯಾರ' ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಈಗಷ್ಟೇ ಆ ಚಿತ್ರದ ಸ್ಕ್ರಿಪ್ಟಿಂಗ್ ನಡೆಯುತ್ತಿದ್ದು, ಸಿನಿಮಾ ಬರೋದು ಲೇಟಾಗುತ್ತೆ. ಅದಕ್ಕಿಂತ ಮುನ್ನ ಮಹೇಶ್ ಬಾಬು ಅವರ ಹೊಸ ಸಿನಿಮಾದ ಮೂಲಕ ಸುರಾಗ್ ಸ್ವತಂತ್ರ ನಿರ್ದೇಶಕರಾಗಲಿದ್ದಾರೆ. ತಮ್ಮ ತಂದೆ ಮತ್ತು ಇನ್ನಿತರೇ ಸಂಗೀತ ನಿರ್ದೇಶಕರ ಜೊತೆ ಸಹಾಯಕರಾಗಿ ದುಡಿದಿರುವ ಸುರಾಗ್ ಇದೀಗ ಮೊದಲ ಬಾರಿ ಮಹೇಶ್ ಬಾಬು ಸಿನಿಮಾಗೆ ಚೊಚ್ಚಲ ಸಂಗೀತ ನಿರ್ದೇಶಕರಾಗಲಿದ್ದಾರೆ.

  ಕಬೀರ್ ದುಹಾನ್ ಸಿಂಗ್ ವಿಲನ್

  ಕಬೀರ್ ದುಹಾನ್ ಸಿಂಗ್ ವಿಲನ್

  ಸುದೀಪ್ ಅವರ 'ಹೆಬ್ಬುಲಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಖಡಕ್ ವಿಲನ್ ಕಬೀರ್ ದುಹಾನ್ ಸಿಂಗ್ ಅವರು, ಇದೀಗ ಕನ್ನಡದಲ್ಲಿ ಎರಡನೇ ಚಿತ್ರಕ್ಕೆ ಸಹಿ ಹಾಕಿದ್ದು, ಮಹೇಶ್ ಬಾಬು ಅವರ ಹೊಸ ಚಿತ್ರದಲ್ಲಿ ಚೇತನ್ ಅವರಿಗೆ ಟಕ್ಕರ್ ನೀಡಲಿದ್ದಾರೆ.

  English summary
  Suraag is son of the Kannada actor-director-musician Sadhu Kokila, is making his debut as a music composer with Director Mahesh Babu's next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X