For Quick Alerts
  ALLOW NOTIFICATIONS  
  For Daily Alerts

  ಸೈಫ್ ಆಲಿ ಖಾನ್ ನಿದ್ದೆಗೆಡಿಸಿದ ಭಾವಿ ಪತ್ನಿ ಕರೀನಾ

  By Rajendra
  |

  ಸೈಫ್ ಆಲಿ ಖಾನ್ ಗೆ ನಿದ್ರಾಭಂಗವಾಗಿದೆ. ಸೈಫ್ ನಿದ್ದೆಗೆ ಸಂಚಕಾರ ತಂದಿರುವುದು ಆತನ ಭಾವಿ ಪತ್ನಿ ಕರೀನಾ ಕಪೂರ್. ಇದಕ್ಕೆ ಕಾರಣವಾಗಿರುವುದು 'ಹೀರೋಯಿನ್' ಚಿತ್ರದ ಹಸಿಬಿಸಿ ಸೀನ್ ಗಳು. ಚಿತ್ರದ ನಾಯಕ ನಟ ಅರ್ಜುನ್ ರಾಮ್ ಪಾಲ್ ಜೊತೆಗಿನ ಹಾಟ್ ಕಿಸ್ಸಿಂಗ್ ಸೀನ್ ಗಳು ಸೈಫ್ ಪಾಲಿಗೆ ಕರಾಳ ರಾತ್ರಿಗಳು.

  ಮಧುರ್ ಭಂಡಾರಕರ್ ನಿರ್ದೇಶನದ 'ಹೀರೋಯಿನ್' ಚಿತ್ರದಲ್ಲಿ ಹಾಟ್ ಕಿಸ್ಸಿಂಗ್, ಬೆಡ್ ರೂಂ ದೃಶ್ಯಗಳು ಪುಷ್ಕಳವಾಗಿವೆ. ಈ ಹಿಂದೊಮ್ಮೆ ಕರೀನಾ ವಿಚಾರವಾಗಿ ಸೈಫ್ ಮಾತನಾಡುತ್ತಾ, ಅವಳೊಂದಿಗೆ ಯಾರೇ ಆಗಲಿ ಆನ್ ಸ್ಕ್ರೀನ್ ನಲ್ಲಿ ರೋಚಕ ಸನ್ನಿವೇಶಗಳಲ್ಲಿ ಅಭಿನಯಿಸಿದರೆ ನಾನು ಸಹಿಸಲ್ಲ ಎಂದು ಗುಡುಗಿದ್ದ.

  ಈಗ 'ಹೀರೋಯಿನ್' ಚಿತ್ರದ ಪೋಸ್ಟರ್ ಗಳು ಬಿಡುಗಡೆಯಾಗಿವೆ. ಚಿತ್ರದ ಸೀನ್ ಗಳು ಹಾಟ್ ಹಾಟ್ ಆಗಿದ್ದು ಅರ್ಜುನ್ ಹಾಗೂ ಕರೀನಾ ಆನ್ ಸ್ಕ್ರೀನ್ ರಸಾಯನಶಾಸ್ತ್ರ ಚೆನ್ನಾಗಿ ವರ್ಕ್ ಔಟ್ ಆಗಿರುವುದು ಎದ್ದು ಕಾಣುತ್ತದೆ. ಈ ಬಗ್ಗೆ ಸೈಫ್ ಪ್ರತಿಕ್ರಿಯಿಸದಿದ್ದರೂ ಆತನ ಮನಸ್ಸು ಹುಳ್ಳಗಾಗಿರುವ ಸಮಾಚಾರ ಬಾಲಿವುಡ್ ನಲ್ಲಿ ಸುದ್ದಿಯಾಗಿದೆ.

  ಸಾಲದಕ್ಕೆ ಮೊದಲೇ ಹೊತ್ತಿ ಉರಿಯುತ್ತಿರುವ ಸೈಫ್ ಹೃದಯಕ್ಕೆ ಮತ್ತಷ್ಟು ತುಪ್ಪ ಸುರಿದ್ದಾನೆ ಅರ್ಜುನ್ ರಾಮ್ ಪಾಲ್. "ಕರೀನಾ ಎಫೆಕ್ಟ್ ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಣ್ಣು ಮುಚ್ಚಿದರೆ ಸಾಕು ಅದೇ ಸೀನ್ ಗಳು ಬೇಡ ಬೇಡ ಎಂದರೂ ನೆನಪಾಗುತ್ತವೆ. ಮೂಡ್ ಗೆ ಹೊರಳಿಬಿಡುತ್ತೇನೆ. ಕರೀನಾ ಜೊತೆಗಿನ ಆ ಸೀನ್ ಗಳು ಅಷ್ಟೊಂದು ಗಾಢ ಪರಿಣಾಮ ಬೀರಿವೆ" ಎಂದಿದ್ದಾನೆ.

  ಹೋಗಲಿ ಸೈಫ್ ಅವರಿಂದ ನಿಮಗೇನಾದರೂ ಬೆದರಿಕೆ ಕರೆ ಬಂದಿತ್ತೇ ಎಂದರೆ "ನಮ್ಮಿಬ್ಬರ ನಡುವೆ ಆತ್ಮೀಯತೆ ಇದೆ. ಒಬ್ಬರನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಹಾಗಾಗಿ ಅವರಿಂದ ಯಾವುದೇ ಕರೆ ಬಂದಿಲ್ಲ" ಎಂದಿದ್ದಾರೆ ಅರ್ಜುನ್.

  ಈ ಹಿಂದೊಮ್ಮೆ ಸೈಫ್ ಮಾತನಾಡುತ್ತಾ, ನನ್ನ ಗರ್ಲ್ ಫ್ರೆಂಡ್ ಕರೀನಾರನ್ನು ಯಾರಾದರು ಮುಟ್ಟಿದರೆ ಕೊಂದುಹಾಕುವಷ್ಟು ಕೋಪ ಬರುತ್ತದೆ ಎಂದು ಹೂಂಕರಿಸಿದ್ದ. ನಟರೊಂದಿಗೆ ಕರೀನಾ ರೊಮಾನ್ಸ್ ಸೀನ್ ಗಳನ್ನು ನೋಡಿದರೂ ನನಗೆ ಪಿತ್ತ ನೆತ್ತಿಗೇರುತ್ತದೆ ಎಂದಿದ್ದ. ಪಾಪ ಈಗ ರಾಮ್ ಪಾಲ್ ನನ್ನು ಈಗೇನು ಮಾಡುತ್ತಾನೋ ಏನೋ? (ಏಜೆನ್ಸೀಸ್)

  English summary
  Recently, actress Kareena Kapoor had to do some hot, bed scenes with co-star Arjun Rampal for Madhur Bhandarkar's film Heroine. But we cannot help but wonder how her beau Saif Ali Khan would have reacted since he had once mentioned that he hates Bebo getting intimate with any man onscreen.
  Friday, July 27, 2012, 16:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X