»   » ಮುಂಗಾರು ಮಳೆ ಬಳಿಕ ಕರೀನಾಗೆ ಮಾಂಗಲ್ಯ ಭಾಗ್ಯ

ಮುಂಗಾರು ಮಳೆ ಬಳಿಕ ಕರೀನಾಗೆ ಮಾಂಗಲ್ಯ ಭಾಗ್ಯ

Posted By:
Subscribe to Filmibeat Kannada

ಬಾಲಿವುಡ್‌ನ ರೊಮ್ಯಾಂಟಿಕ್ ಜೋಡಿ ಸೈಫ್ ಆಲಿ ಖಾನ್ ಹಾಗೂ ಕರೀನಾ ಕಪೂರ್ ಮುಂಗಾರು ಮಳೆ ಮುಗಿಯುವುದನ್ನೇ ಕಾಯುತ್ತಿದ್ದಾರೆ. ಮುಂಗಾರು ಮಳೆ ಮುಗಿಯುತ್ತಿದ್ದಂತೆ ಇಬ್ಬರೂ ಹೊಸ ಬಾಳಿಗೆ ಅಡಿಯಿಡಲಿದ್ದಾರೆ ಎಂದು ಹಿರಿಯ ತಾರೆ ಹಾಗೂ ಸೈಫ್ ತಾಯಿ ಶರ್ಮಿಳಾ ಠಾಗೋರ್ ಖಚಿತವಾಗಿ ನುಡಿದ್ದಾರೆ.

ತಮ್ಮ ಮಗಳು ಸೋಹಾ ಆಲಿ ಖಾನ್ ಹಾಗೂ ಕುನಾಲ್ ಖೆಮು ಮದುವೆ ಯಾವಾಗ ಎಂದು ಖಚಿತವಾಗಿ ಹೇಳಲಾರೆ. ಆದರೆ ಸೈಫ್ ಮತ್ತು ಕತ್ರಿನಾ ಮದುವೆ ಮಾತ್ರ ಮುಂಗಾರುಮಳೆ ಬಳಿಕ ನಡೆಯುವುದು ನಿಸ್ಸಂದೇಹ ಎಂದಿದ್ದಾರೆ. ಹವಾಮಾನ ಸರಿಯಿಲ್ಲದ ಕಾರಣ ಅವರ ಮದುವೆ ಮುಂದೂಡುತ್ತಿದ್ದೇವೆ ಎಂದಿದ್ದಾರೆ ಶರ್ಮಿಳಾ.

"ಕರೀನಾಳನ್ನು ಮಿಸಸ್ ಖಾನ್ ಎಂದು ಕರೆಯುವ ಸಮಯ ದೂರವಿಲ್ಲ. ಇವರಿಬ್ಬರದ್ದೂ ಹೇಳಿ ಮಾಡಿಸಿದ ಜೋಡಿ. ಇಂತಹ ಹೆಣ್ಣನ್ನು ಪತ್ನಿಯಾಗಿ ಪಡೆಯಲು ಸೈಫ್ ಬಹಳ ಪುಣ್ಯ ಮಾಡಿದ್ದಾನೆ" ಎಂದು ಕರೀನಾರ ಭಾವಿ ಅತ್ತೆ ಸರ್ಟಿಫಿಕೇಟ್ ನೀಡಿದ್ದಾರೆ. ರಾಯಲ್ ಮದುವೆಯ ನಿರೀಕ್ಷೆಯಲ್ಲಿ ಬಾಲಿವುಡ್‌ ಇದೆ. (ಏಜೆನ್ಸೀಸ್)

English summary
Bollywood star duo Saif Ali Khan and Kareena Kapoor are all set to exchange wedding vows after this summer. So, it’s not too long when Kareena would be called Mrs. Khan said Saif’s mother and veteran actress Sharmila Tagore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada