»   » ಕನ್ನಡದ 'ಸೈರಾಟ್'ಗೆ ಟೈಟಲ್ ಫಿಕ್ಸ್!

ಕನ್ನಡದ 'ಸೈರಾಟ್'ಗೆ ಟೈಟಲ್ ಫಿಕ್ಸ್!

Posted By:
Subscribe to Filmibeat Kannada

ಮರಾಠಿಯ ಸೂಪರ್ ಹಿಟ್ ಸಿನಿಮಾ 'ಸೈರಾಟ್' ಕನ್ನಡದಲ್ಲಿ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದ್ರೆ, ಆ ಚಿತ್ರದ ಟೈಟಲ್ ಏನು ಎಂಬುದು ಸಿನಿರಸಿಕರನ್ನ ಕಾಡುತ್ತಿತ್ತು. ಈಗ ಕನ್ನಡದ ಸೈರಾಟ್ ಗೆ ಟೈಟಲ್ ಫಿಕ್ಸ್ ಆಗಿದೆ.

2015 ರಲ್ಲಿ ಬಿಡುಗಡೆಯಾದ 'ಸೈರಾಟ್' ಚಿತ್ರದಲ್ಲಿ ರಿಂಕು ರಾಜಗುರು, ಆಕಾಶ್ ತೋಸರ್, ತಾನಾಜಿ, ಆರ್ಬಾಜ್ ಶೇಖ್, ಛಾಯಾ ಕದಂ ಮುಂತಾದವರು ಅಭಿನಯಿಸಿದ್ದರು. ನಾಗರಾಜ್ ಮಂಜುಳೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿತಿನ್ ಖೇಣಿ, ನಿಖಿಲ್ ಸಾಣೆ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್-ಅತುಲ್ ಅವರ ಸಂಗೀತವಿತ್ತು.[ಮರಾಠಿ ಚಿತ್ರದ ಮೇಲೆ ರಾಕ್ ಲೈನ್ ವೆಂಕಟೇಶ್ ಕಣ್ಣು ಬಿದ್ದದ್ದು ಹೇಗೆ.?]

ಇದೀಗ ಈ ಚಿತ್ರ ಕನ್ನಡದಲ್ಲಿ ಮೂಡಿಬರ್ತಿದ್ದು, ಬಹುತೇಕ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ಅಲ್ಲಿ 'ಸೈರಾಟ್', ಇಲ್ಲಿ 'ಮನಸು ಮಲ್ಲಿಗೆ'!

ಕನ್ನಡದ 'ಸೈರಾಟ್' ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿದ್ದು, 'ಮನಸು ಮಲ್ಲಿಗೆ' ಎಂದು ಹೆಸರಿಡಲಾಗಿದೆ. ಹೊಸ ವರ್ಷದ ವಿಶೇಷವಾಗಿ 'ಮನಸು ಮಲ್ಲಿಗೆ' ಎಂಬ ಟೈಟಲ್ ಇರುವ ಪೋಸ್ಟರ್ ಗಳನ್ನ ಚಿತ್ರತಂಡ ಬಹಿರಂಗಪಡಿಸಿದೆ.

ಚಿತ್ರೀಕರಣ ಮುಕ್ತಾಯ!

ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಕನ್ನಡದ 'ಸೈರಾಟ್' ಈಗ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ. ಎಲ್ಲ ಅಂದುಕೊಂಡತೆ ಆದರೆ, ಫೆಬ್ರವರಿ 9 ರಂದು ತೆರೆಗೆ ಬರುವ ಯೋಚನೆಯಲ್ಲಿದೆ ಈ ರೊಮ್ಯಾಂಟಿಕ್ ಲವ್ ಕಹಾನಿ.

ಸತ್ಯಪ್ರಕಾಶ್ ಮಗ ನಾಯಕ!

ದಕ್ಷಿಣ ಭಾರತದ ಖ್ಯಾತ ಖಳನಾಯಕ ಸತ್ಯಪ್ರಕಾಶ್ ಅವರ ಪುತ್ರ, ಕನ್ನಡದಲ್ಲಿ ನಾಯಕ ನಟನಾಗಿ ಪರಿಚಯವಾಗುತ್ತಿದ್ದಾರೆ. ಹೊಸ ಹೆಸರಿನಿಂದ ಸ್ಯಾಂಡಲ್ ವುಡ್ ಗೆ ಪರಿಚಯವಾಗಲಿರುವ ಸತ್ಯಪ್ರಕಾಶ್ ಅವರ ಮಗನ ಹೆಸರು ಇನ್ನೂ ಬಹಿರಂಗವಾಗಿಲ್ಲ. ಆದ್ರೆ, ಮೂಲಗಳ ಪ್ರಕಾರ 'ನಿಶಾಂತ್' ಎಂದು ಮರುನಾಮಕರಣ ಮಾಡಲಾಗಿದೆ ಎನ್ನಲಾಗುತ್ತಿದೆ.

ರಿಂಕು ರಾಜಗುರು ನಾಯಕಿ!

ಇನ್ನೂ ಮರಾಠಿಯ 'ಸೈರಾಟ್' ಚಿತ್ರದಲ್ಲಿ ನಾಯಕಿಯಾಗಿದ್ದ ರಿಂಕುರಾಜಗುರು, ಕನ್ನಡದಲ್ಲೂ ನಾಯಕಿಯಾಗಿದ್ದು, ಚೊಚ್ಚಲ ಭಾರಿಗೆ ಚಂದನವನಕ್ಕೆ ಕಾಲಿಡುತ್ತಿದ್ದಾರೆ.

ಎಸ್.ನಾರಾಯಣ್ ಸಾರಥ್ಯ!

ಕನ್ನಡದ 'ಸೈರಾಟ್' ಪ್ರೇಮಕಥೆಗೆ ಕಲಾ ಸಾಮ್ರಾಟ್ ಎಸ್.ನಾರಾಯಣ್ ಆಕ್ಷನ್ ಕಟ್ ಹೇಳಿದ್ದಾರೆ.

ರಾಕ್ ಲೈನ್ ನಿರ್ಮಾಣ!

'ಸೈರಾಟ್' ಚಿತ್ರದ ಕನ್ನಡ ರೀಮೇಕ್ ಹಕ್ಕನ್ನ ರಾಕ್ ಲೈನ್ ವೆಂಕಟೇಶ್ ಖರೀದಿಸಿದ್ದು, ಅವರೇ ನಿರ್ಮಾಣ ಮಾಡಿದ್ದಾರೆ.

English summary
The Kannada Remake of Popular Marathi film 'Sairat' has been Titled as 'Manasu Mallige' and the Shooting of the film has been Completed. 'Manasu Mallige' stars Satyaprakash's son and Rinku Rajaguru in lead roles. S Narayan has directed the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada