»   » ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕರ ಸಂಭಾವನೆ ನಿಮಗ್ಗೊತ್ತಾ?

ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕರ ಸಂಭಾವನೆ ನಿಮಗ್ಗೊತ್ತಾ?

By: ಜೀವನರಸಿಕ
Subscribe to Filmibeat Kannada

ಉಪೇಂದ್ರ ಅಭಿನಯದ ನಿರ್ದೇಶನದ ಉಪ್ಪಿ-2 ಸಿನಿಮಾ ರಿಲೀಸ್ಗೆ ಬರ್ತಿದೆ. ಸಿನಿಮಾದ ಬಗ್ಗೆ ತೀವ್ರ ಕತೂಹಲ ಇದೆ. ಸುದೀಪ್ ಕೂಡ ಜಿಗರ್ತಾಂಡ ಸಿನಿಮಾ ರೀಮೇಕ್ನ್ನ ಕನ್ನಡದಲ್ಲಿ ನಿರ್ದೇಶನ ಮಾಡ್ತಿದ್ದಾರೆ. ಆರ್ ಚಂದ್ರು, ಪ್ರೇಮ್ ಕೂಡ ನಿರ್ದೇಶನಕ್ಕಿಳಿದಿದ್ದಾರೆ.

ಹೀಗೆ ನಿರ್ದೇಶನಕ್ಕಿಳಿದಿರೋ ಕನ್ನಡದ ಈ ಸ್ಟಾರ್ ನಿರ್ದೇಶಕರು ಪಡೀತಾ ಇರೋ ಸಂಭಾವನೆ ಭರ್ಜರಿಯಾಗಿದೆ. ಸ್ಟಾರ್ ನಟರ ಸಂಭಾವನೆಯಷ್ಟನ್ನ ಕನ್ನಡದ ನಿರ್ದೇಶಕರು ಪಡೀತಿದ್ದಾರೆ. ನಾವು ತೆರೆ ಮೇಲೆ ಕಾಣೋ ನಟರ ಸಂಭಾವನೆಯನ್ನ ಮಾತ್ರ ಲೆಕ್ಕ ಹಾಕ್ತೀವಿ. ಆದ್ರೆ ತೆರೆಯ ಹಿಂದಿನ ಈ ಸೂತ್ರಧಾರರ ಸಂಭಾವನೆ ಎಷ್ಟು ನಿಮಗ್ಗೊತ್ತಾ?

ಅದ್ರಲ್ಲೂ ಇತ್ತೀಚೆಗೆ ರಾಜಕಾರಿಣಿಗಳ ಪುತ್ರರ ಸಿನಿಮಾ ನಿರ್ದೇಶನ ಮಾಡ್ತಿರೋ ನಿರ್ದೇಶಕರು ಕೋಟಿಗಟ್ಟಲೆ ಸಂಭಾವನೆ ಪಡೆದಿದ್ದಾರೆ ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿದೆ. ಹಾಗಾದ್ರೆ ನಮ್ಮ ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕರು ಪಡೆಯೋ ಸಂಭಾವನೆ ಎಷ್ಟು ಅನ್ನೋ ಮಾಹಿತಿಯನ್ನ ನೋಡ್ತಾ ಹೋಗಿ.. [ದಿನವೊಂದಕ್ಕೆ ಅತಿ ಹೆಚ್ಚು ಗಳಿಸುವ ಕನ್ನಡ ನಟರಿವರು]

ತಾಜ್ ಮಹಲ್ ಫೇಮ್ ಆರ್ ಚಂದ್ರು

ಸದ್ಯ ಲಕ್ಷ್ಮಣ ಸಿನಿಮಾ ನಿರ್ದೇಶನ ಮಾಡ್ತಿರೋ ಆರ್ ಚಂದ್ರು ನಿರ್ಮಾಣದ 'ಮಳೆ' ಚಿತ್ರ ರಿಲೀಸ್ಗೆ ರೆಡಿ ಇದೆ. ಆದ್ರೆ ಈ ನಡುವೆ ಬಂಪರ್ ಲಾಟ್ರಿ ಹೊಡೆದಿರೋದು ಲಕ್ಷ್ಮಣ ಸಿನಿಮಾ ಮೂಲಕ. ಎಚ್ ಎಂ ರೇವಣ್ಣ ಪುತ್ರ ಅನೂಪ್ರನ್ನ ಸ್ಯಾಂಡಲ್ವುಡ್ಗೆ ಮಾಸ್ ಹೀರೋ ಆಗೋ ಇಂಟ್ರೊಡ್ಯೂಸ್ ಮಾಡ್ತಿರೋ ಚಂದ್ರು ಮೂರು ಕೋಟಿಯಷ್ಟನ್ನ ನಿರ್ದೇಶನಕ್ಕೆ ಪಡೆದಿದ್ದಾರೆ ಅಂತಿವೆ ಮೂಲಗಳು.

ಮಹೇಶ್ `ಸುಖ'ಧರೆ ಚೆಲುವಯ್ಯ ಚೆಲುವೋ

ಅಂಬರೀಷನಿಂದ ಅಷ್ಟೇನೂ ಲಾಭ ಪಡೆಯದ ಮಹೇಶ್ ಸುಖಧರೆ ಈಗ ಭರ್ಜರಿ ಲಾಭದ ಬೆಳೆ ಬೆಳೀತಿದ್ದಾರೆ. ಮಹೇಶ್ ಸುಖಧರೆ ಈಗ ಚೆಲುವರಾಯಸ್ವಾಮಿ ಪುತ್ರ ಸಚಿನ್ರಿಗೆ ಹ್ಯಾಪಿ ಬರ್ತಡೇ ಅನ್ನೋ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಸಿನಿಮಾಗೆ ಮಹೇಶ್ ಸುಖಧರೆ ಕೂಡ 3 ಕೋಟಿ ಸಂಭಾವನೆ ಪಡೆದಿದ್ದಾರೆ ಅಂತಿದ್ದಾರೆ ಗಾಂಧಿನಗರದ ಸಿನಿಪಂಡಿತರು.

ಕಿಚ್ಚ ಸುದೀಪ್ ಸಂಬಳ ಎಷ್ಟು?

ಕಿಚ್ಚ ಸುದೀಪ್ ಹಲವು ಬಾರಿ ಹೇಳಿಕೊಂಡಂತೆ ನಿರ್ದೇಶನಕ್ಕೆ ಅದೆಷ್ಟೋ ಸಿನಿಮಾಗಳಿಗೆ ದುಡ್ಡನ್ನೇ ಪಡೆದಿಲ್ಲ. ಸ್ನೇಹಿತರಿಗಾಗಿ ಸಿನಿಮಾ ನಿರ್ದೇಶನ ಮಾಡೋ ಕಿಚ್ಚ ಸ್ನೇಹಕ್ಕಾಗಿ ಕೇವಲ ತಾನು ಹೇಳಿದ ಬಜೆಟ್ನಲ್ಲಿ ಸಿನಿಮಾ ಮಾಡೋಕೆ ಒತ್ತಾಯಿಸ್ತಾರೆ. ಇದ್ರಿಂದಾಗಿ ನಿರ್ಮಾಪಕರಿಗೆ ಸುದೀಪ್ರಿಗೆ ಕೊಡಬೇಕಾದ ಸಂಭಾವನೆ ಚಿತ್ರದ ಮೇಕಿಂಗ್ನಲ್ಲೇ ಹೊರಟು ಹೋಗುತ್ತೆ ಅನ್ನೋದು ನಿರ್ಮಾಪಕರ ಲೆಕ್ಕಾಚಾರ.

ನಟ ಕಂ ನಿರ್ದೇಶಕ ಉಪೇಂದ್ರ

ಉಪೇಂದ್ರ ಎಲ್ಲರಿಗೂ ತಿಳಿದಿರುವಂತೆ ಅತ್ಯುತ್ತಮ ನಿರ್ದೇಶಕ. ನಿರ್ದೇಶನದಲ್ಲಿ ಉಪ್ಪಿಗೆ ಚಿತ್ರತಂಡ ಇಷ್ಟವಾದ್ರೆ ಮತ್ತು ಒಳ್ಳೆಯ ಕಲಾವಿದರು ಸಿಕ್ಕರೆ ಸಂಭಾವನೆ ವಿಚಾರದಲ್ಲಿ ಉಪ್ಪಿ ಕಾಂಪ್ರೊಮೈಸ್ ಆಗ್ತಾರೆ. ಆದ್ರೆ ಇತ್ತೀಚೆಗೆ ತನ್ನ ಡೈರೆಕ್ಷನ್ನಲ್ಲಿ ತಾನೇ ಆಕ್ಟ್ ಮಾಡ್ತಿರೋದ್ರಿಂದ ನಿರ್ದೇಶನ ಮಾಡೋದ್ರಲ್ಲಿ ಹೆಚ್ಚಿನ ಹಣ ಕೇಳೋದಿಲ್ಲ.

ನಿರ್ಮಾಪಕರಿಗೂ ರಾಜಿಯಾಗ್ತಾರೆ ಉಪ್ಪಿ

ತನ್ನ ಸ್ನೇಹಿತರ ನಿರ್ಮಾಣದ ಚಿತ್ರಗಳಾದ್ರೆ ಉಪ್ಪಿ ಅಷ್ಟೇ ಹಣ ಬೇಕು, ಇಷ್ಟೇ ಹಣ ಬೇಕು ಅಂತ ಕಂಡೀಷನ್ ಹಾಕಲ್ಲ. ಆತ್ಮೀಯರಾದ್ರೆ ಉಪ್ಪಿಗೆ ನಿರ್ದೇಶನಕ್ಕೆ ಅವ್ರು ಕೊಟ್ಟದ್ದೇ ಸಂಭಾವನೆ ಅನ್ನುತ್ತವೆ ಉಪ್ಪಿ ಹತ್ತಿರದ ಮೂಲಗಳು.

ಯೋಗರಾಜ್ ಭಟ್ರು ಎಷ್ಟು ಪಡಕೊಂಡ್ರು?

ಭಟ್ರು ನಿರ್ದೇಶನಕ್ಕೆ ದೊಡ್ಡ ಸಂಭಾವನೆಯನ್ನೇನೂ ಪಡೆಯೋದಿಲ್ಲ ಅಂತಾರೆ ಭಟ್ಟರ ಸ್ನೇಹಿತರು. ಆದ್ರೆ ಅಷ್ಟು ಸುಲಭವಾಗಿ ನಿರ್ದೇಶನಕ್ಕೆ ಯಾರ ಕೈಗೂ ಸಿಗದ ಭಟ್ರು ಸಿನಿಮಾ ಶುರು ಮಾಡೋ ಮೊದಲೇ ಸಂಭಾವನೆಯನ್ನ ಪಕ್ಕಾ ಮಾಡಿಕೊಂಡೇ ನಿರ್ದೇಶನಕ್ಕಿಳೀತಾರಂತೆ. ಭಟ್ಟರು ಸದ್ಯ ನಿರ್ದೇಶನಕ್ಕೆ ಎರಡೂವರೆ ಕೋಟಿ ಪಡೀತಾರಂತೆ.

ಪ್ರೇಮ್ ಕೂಡ ಯಾರಿಗೇನು ಕಡಿಮೆಯಿಲ್ಲ

ಕನ್ನಡದ ಸ್ಟಾರ್ ನಿರ್ದೇಶಕ ಅಂತಾನೇ ಕರೆಸಿಕೊಳ್ಳೋ ಪ್ರೇಮ್ ಸಂಭಾವನೆ ವಿಚಾರದಲ್ಲಿ ಪಕ್ಕಾ ಅಂತೆ. ಮೇಕಿಂಗ್ ವಿಚಾರದಲ್ಲೂ ಕೋಟಿ ಕೋಟಿ ಖರ್ಚು ಮಾಡಿಸೋ ಪ್ರೇಮ್ ಗಿಮಿಕ್ ಮಾಡಿ ಸಿನಿಮಾ ಗೆಲ್ಲಿಸೋ ಚತುರ. ಹಾಗಾಗೀನೇ ತನ್ನ ಸಂಭಾವನೆ ವಿಚಾರದಲ್ಲೂ ಪಕ್ಕಾ. ತಮ್ಮ ಒಂದು ಸಿನಿಮಾಗೆ ಎರಡೂವರೆ ಕೋಟಿ ಪಡೀತಿದ್ದಾರೆ ಪ್ರೇಮ್. [ಆರ್ ದಿ ಕಿಂಗ್ ನಿರ್ದೇಶನಕ್ಕೆ ಪ್ರೇಮ್]

English summary
There are many top directors like R Chandru, Upendra, Sudeep, Prem, Mahesh Sukhadhare, Yogaraj Bhat in Kannada film industry. Do you know how much they are getting for the movie? They are no less than any star film actor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada