For Quick Alerts
  ALLOW NOTIFICATIONS  
  For Daily Alerts

  7 ವರ್ಷದ ಹಳೆಯ ಹಿಟ್ ಚಿತ್ರದ ರಿಮೇಕ್‌ನಲ್ಲಿ ಸಲ್ಮಾನ್ ಖಾನ್?

  |

  ಕಳೆದ ವರ್ಷ ಸಲ್ಮಾನ್ ಖಾನ್ ಖುದ್ದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೊಸ ಸಿನಿಮಾವೊಂದು ಘೋಷಣೆ ಮಾಡಿದ್ದರು. ಜನವರಿ 10, 2020ರಲ್ಲಿ ಸಾಜಿದ್ ನಿರ್ಮಾಣದಲ್ಲಿ ಮುಂದಿನ ಸಿನಿಮಾ ಮಾಡ್ತಿದ್ದೇನೆ ಎಂದು ಪ್ರಕಟಣೆ ಕೊಟ್ಟಿದ್ದರು. ಈದ್ ಹಬ್ಬದ ಪ್ರಯುಕ್ತ 2021ಕ್ಕೆ ಆ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಿದ್ದರು. ಆದರೆ ಇದುವರೆಗೂ ಈ ಚಿತ್ರ ಶುರುವಾಗಲೇ ಇಲ್ಲ.

  ಇದೀಗ, ವರ್ಷಗಳ ನಂತರ ಮತ್ತೊಮ್ಮೆ ಈ ಸಿನಿಮಾ ಸುದ್ದಿ ಮಾಡ್ತಿದೆ. ಈ ಹಿಂದೆ ಪ್ರಕಟಿಸಿದಂತೆ ಈ ಚಿತ್ರಕ್ಕೆ 'ಕಭಿ ಈದ್ ಕಭಿ ದಿವಾಳಿ' ಎಂದು ಹೆಸರಿಡಲಾಗಿತ್ತು. ಆದ್ರೀಗ ಈ ಸಿನಿಮಾದ ಟೈಟಲ್ ಬದಲಾಯಿಸಿದ್ದು, 'ಭಾಯಿಜಾನ್' ಎಂದು ಮರುನಾಮಕರಣ ಮಾಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

  ಮಾಸ್ಟರ್ ರಿಮೇಕ್: ಸಲ್ಮಾನ್ ಖಾನ್ ಹೀರೋ, ಸೇತುಪತಿ ಪಾತ್ರಕ್ಕೆ ಯಾರು?ಮಾಸ್ಟರ್ ರಿಮೇಕ್: ಸಲ್ಮಾನ್ ಖಾನ್ ಹೀರೋ, ಸೇತುಪತಿ ಪಾತ್ರಕ್ಕೆ ಯಾರು?

  ಅಂದ್ಹಾಗೆ, ಇದು ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾದ ರಿಮೇಕ್. ತಮಿಳಿನ ಇದೇ ಚಿತ್ರವನ್ನ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ತೆಲುಗಿನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ರಿಮೇಕ್ ಮಾಡಿದ್ರು. ಈಗ ಹಿಂದಿಯಲ್ಲಿ ಸಲ್ಲು ಭಾಯ್ ಟೇಕ್ ಆನ್ ಮಾಡ್ತಿದ್ದಾರೆ. ಯಾವುದು ಆ ಚಿತ್ರ? ಮುಂದೆ ಓದಿ...

  'ವೀರಂ' ರಿಮೇಕ್‌ನಲ್ಲಿ ಸಲ್ಲು?

  'ವೀರಂ' ರಿಮೇಕ್‌ನಲ್ಲಿ ಸಲ್ಲು?

  ಸಲ್ಮಾನ್ ಖಾನ್ ಮತ್ತು ನಿರ್ಮಾಪಕ ಸಾಜಿದ್ ಕಾಂಬಿನೇಷನ್ ಬರಲಿರುವ ಈ ಚಿತ್ರ ತಮಿಳಿನಲ್ಲಿ ಅಜಿತ್ ಕುಮಾರ್ ನಟಿಸಿದ್ದ 'ವೀರಂ' ರಿಮೇಕ್ ಎನ್ನಲಾಗಿದೆ. ಹಿಂದಿಯಲ್ಲಿ ಈ ಚಿತ್ರಕ್ಕೆ 'ಕಭಿ ಈದ್ ಕಭಿ ದಿವಾಳಿ' ಎಂದು ಹೆಸರಿಡಲಾಗಿತ್ತು. ಆದ್ರೀಗ, 'ಭಾಯಿಜಾನ್' ಎಂದು ನೂತನ ಹೆಸರಿಡಲು ನಿರ್ಧರಿಸಲಾಗಿದೆ ಎಂಬ ವಿಚಾರ ಹೊರಬಿದ್ದಿದೆ.

  ಸಲ್ಮಾನ್ ಜೊತೆ ರಾಜಮೌಳಿ ತಂದೆ ಸಿನಿಮಾ; ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ವಿಜಯೇಂದ್ರ ಪ್ರಸಾದ್ಸಲ್ಮಾನ್ ಜೊತೆ ರಾಜಮೌಳಿ ತಂದೆ ಸಿನಿಮಾ; ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ವಿಜಯೇಂದ್ರ ಪ್ರಸಾದ್

  ಪೂಜಾ ಹೆಗ್ಡೆ ನಾಯಕಿ

  ಪೂಜಾ ಹೆಗ್ಡೆ ನಾಯಕಿ

  ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ 'ಭಾಯಿಜಾನ್' ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದಾರೆ. ಪ್ರಸ್ತುತ ನಿರ್ಮಾಪಕ ಸಾಜಿದ್, ಅಕ್ಷಯ್ ಕುಮಾರ್ ಜೊತೆ ಬಚ್ಚನ್ ಪಾಂಡೆ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರವೇ 'ವೀರಂ' ಆಗಿದೆ ಎಂಬ ಸುದ್ದಿಯೂ ವರದಿಯಾಗಿದೆ. ಅದರೆ, ಅದು ನಿಜವಲ್ಲ. ಬಚ್ಚನ್ ಪಾಂಡೆ ಸ್ವಮೇಕ್ ಸಿನಿಮಾ. ವೀರಂ ರಿಮೇಕ್‌ನಲ್ಲಿ ಸಲ್ಮಾನ್ ಖಾನ್ ಅವರೇ ನಟಿಸುತ್ತಿದ್ದಾರೆ. ವೀರಂ ಸ್ಕ್ರಿಪ್ಟ್ ಕೇಳಿ ಸಲ್ಲು ಭಾಯ್ ನಾನೇ ಮಾಡ್ತೀನಿ ಅಂದಿದ್ದರಂತೆ.

  ಕನ್ನಡ-ತೆಲುಗಿನಲ್ಲಿ ವೀರಂ ಅವತರಣಿಕೆ

  ಕನ್ನಡ-ತೆಲುಗಿನಲ್ಲಿ ವೀರಂ ಅವತರಣಿಕೆ

  2014ರಲ್ಲಿ ತೆರೆಕಂಡಿದ್ದ ವೀರಂ ಚಿತ್ರಕ್ಕೆ ಶಿವ ನಿರ್ದೇಶನ ಮಾಡಿದ್ದರು. ಅಜಿತ್‌ಗೆ ನಾಯಕಿಯಾಗಿ ತಮನ್ನಾ ನಟಿಸಿದ್ದರು. ಇದೇ ಚಿತ್ರವನ್ನು 2017ರಲ್ಲಿ ಪವನ್ ಕಲ್ಯಾಣ್ 'ಕಾಠಮರಾಯುಡು' ಹೆಸರಿನಲ್ಲಿ ರಿಮೇಕ್ ಮಾಡಿದರು. ನಂತರ 2019ರಲ್ಲಿ ಕನ್ನಡ ನಟ ದರ್ಶನ್ 'ಒಡೆಯ' ಹೆಸರಿನಲ್ಲಿ ರಿಮೇಕ್ ಮಾಡಿದರು. ಎರಡು ಭಾಷೆಯಲ್ಲಿ ಈ ಸಿನಿಮಾ ಹಿಟ್ ಆಗಲಿಲ್ಲ.

  ಶೀಘ್ರದಲ್ಲಿ ಮುಂದಿನ ಅಪ್‌ಡೇಟ್

  ಶೀಘ್ರದಲ್ಲಿ ಮುಂದಿನ ಅಪ್‌ಡೇಟ್

  'ರಾಧೆ' ಸಿನಿಮಾದ ಸೋಲಿನ ಬಳಿಕ 'ಟೈಗರ್ 3' ಚಿತ್ರದಲ್ಲಿ ಸಲ್ಮಾನ್ ಖಾನ್ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಮುಗಿಸಿದ ಬಳಿಕ ವೀರಂ ರಿಮೇಕ್‌ಗೆ ಕೈ ಹಾಕಬಹುದು. ಫರ್ಹಾದ್ ಸಂಜಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಮುಂದಿನ ಅಪ್‌ಡೇಟ್ ಏನೆಂದು ಶೀಘ್ರದಲ್ಲಿ ಮಾಹಿತಿ ನೀಡಬಹುದು. 2022ರ ದೀಪಾವಳಿಗೆ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜೊತೆ ವಿಜಯ್-ವಿಜಯ್ ಸೇತುಪತಿ ನಟಿಸಿದ್ದ 'ಮಾಸ್ಟರ್' ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗುತ್ತಿದೆ. ಅದರಲ್ಲಿ ಸಲ್ಲು ಭಾಯ್ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಇನ್ನು ರವಿತೇಜ ನಟಿಸಿರುವ ಇನ್ನು ಬಿಡುಗಡೆಯಾಗದ 'ಖಿಲಾಡಿ' ಚಿತ್ರದ ರಿಮೇಕ್ ಹಕ್ಕು ಸಹ ಸಲ್ಮಾನ್ ಖಾನ್‌ಗೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

  English summary
  Bollywood actor Salman Khan and Pooja Hegde's next likely to undergo title change from Kabhi Eid Kabhi Diwali to Bhaijaan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X