»   » ಮಾಜಿ ಗೆಳತಿ ಜೊತೆ ಸಲ್ಮಾನ್ ಖಾನ್ ಮುಲಾಕಾತ್

ಮಾಜಿ ಗೆಳತಿ ಜೊತೆ ಸಲ್ಮಾನ್ ಖಾನ್ ಮುಲಾಕಾತ್

Posted By:
Subscribe to Filmibeat Kannada

ಬಾಲಿವುಡ್‌ನ ಮನ್ಮಥರಾಜ ಸಲ್ಮಾನ್ ಖಾನ್ ಆಗಾಗ ಮಾಜಿ ಪ್ರೇಮಿಗಳು ಹಾಗೂ ಮಾಜಿ ಗೆಳತಿಯರ ಜೊತೆ ಮುಲಾಕಾತ್ ಆಗುವುದು ಸರ್ವೇಸಾಮಾನ್ಯ ಸಂಗತಿ. ಇತ್ತೀಚೆಗೆ ತನ್ನ ಹಳೆಯ ಗೆಳತಿ ಸೋನಿ ಆಲಿ ಜೊತೆ ಕಾಣಿಸಿಕೊಂಡಿದ್ದರು. ಆಕೆ ಸ್ಥಾಪಿಸಿರುವ 'Human Being' ಎಂಬ ಚಾರಿಟಿ ಸಂಸ್ಥೆಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಆಕೆ ಹೋದಲ್ಲೆಲ್ಲಾ ಸಲ್ಲು ಹೋಗಿ ಬರುವುದನ್ನು ಮಾಡುತ್ತಿದ್ದಾರೆ.

ಈಗ ಮತ್ತೊಬ್ಬ ಮಾಜಿ ಗೆಳತಿ ಹಾಗೂ ಒಂದು ಕಾಲದ ಬಾಲಿವುಡ್ ತಾರೆ ಸಂಗೀತಾ ಬಿಜಲಾನಿ ಜೊತೆ ಸಲ್ಲು ಇತ್ತೀಚೆಗೆ ಮುಲಾಕಾತ್ ಆಗಿರುವ ವಿಷಯ ಮುಂಬೈನಲ್ಲಿ ಭಾರಿ ಗುಸುಗುಸುಗೆ ಕಾರಣವಾಗಿದೆ. ಕಾರಣಾಂತರಗಳಿಂದ ಇವರಿಬ್ಬರೂ ದೂರವಾಗಿದ್ದರು.

ಅದರಲ್ಲೂ ಕ್ರಿಕೆಟಿಗ ಅಜರುದ್ದೀನ್ ಕೈಹಿಡಿದ ಮೇಲಂತೂ ಸಲ್ಲುಗೆ ಬಿಜಲಾನಿ ಬಹಳ ದೂರವಾಗಿದ್ದರು. ಅಜರುದ್ದೀನ್ ಕೈಹಿಡಿದು 14 ವರ್ಷಗಳು ಕಳೆದ ಮೇಲೆ ಈಗ ಮತ್ತೆ ಸಲ್ಲುಗೆ ಬಿಜಲಾಜನಿ ಹತ್ತಿರವಾಗಿದ್ದಾರೆ.

ಸುದೀರ್ಘ ಸಮಯದಿಂದ ಇಬ್ಬರೂ ನಾನೊಂದು ತೀರ ನೀನೊಂದು ತೀರ ಆಗಿದ್ದವರು ಈಗ ಒಂದೇ ತೀರಕ್ಕೆ ಬಂದಿದ್ದಾರೆ. ಸಲ್ಲುಗೆ ಇರುವ ಮಾನವೀಯತೆ, ಆತನ ಜೊತೆಗಿನ ಕಂಪನಿ ಬಿಜಲಾನಿಗೆ ಇಷ್ಟವಂತೆ. ಹಾಗಾಗಿ ಮತ್ತೆ ಸಲ್ಲು ಸನಿಹ ಬಯಸುತ್ತಿರುವುದಾಗಿ ತಿಳಿಸಿದ್ದಾರೆ.

ಸಂಗೀತಾ ಬಿಜಲಾಜಿ ಕೇವಲ ಸಲ್ಲುಗಷ್ಟೇ ಆತ್ಮೀಯವಾಗಿಲ್ಲ. ಸಲ್ಲು ಕುಟುಂಬದ ಜೊತೆಗೆ ಸಂಗೀತಾ ಸಲುಗೆ ಬೆಳೆಸಿಕೊಂಡಿದ್ದಾರೆ. ಆಗಾಗ ಸಲ್ಲು ಮನೆಗೆ ಭೇಟಿ ನೀಡಿ ಸಲ್ಮಾನ್ ಖಾನ್ ಸಹೋದರಿಯರಾದ ಅಲ್ವಿರಾ ಹಾಗೂ ಅರ್ಪಿತಾರ ಜೊತೆ ಸಂಗೀತಾ ಲಲ್ಲೆಗರೆಯುತ್ತಾರಂತೆ.

ಸಲ್ಲು ಕುಟುಂಬದೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ ಎನ್ನುವ ಸಂಗೀತಾ, ಇತ್ತೀಚೆಗೆ ಸಲ್ಲು ಜೊತೆ ಕಾಣಿಸಿಕೊಂಡಿದ್ದಾರೆ. ಅದೂ ನೈಟ್ ಪಾರ್ಟಿಯಲ್ಲಿ ಎಂಬುದು ವಿಶೇಷ. ಆದರೆ ಸಲ್ಲು ಜೊತೆಗೆ ಆತನ ನಾದಿನಿ ಸೀಮಾ ಕೂಡ ಕಾಣಿಸಿಕೊಂಡಿದ್ದು ಇದಕ್ಕೆ ವಿಶೇಷ ಅರ್ಥ ಕಲ್ಪಿಸುವಂತಿಲ್ಲ.

ವಯಸ್ಸು ಹತ್ತಿರ ಹತ್ತಿರ ಐವತ್ತಕ್ಕೆ ಸಮೀಪಿಸುತ್ತಿರುವ ಸಲ್ಮಾನ್ ಖಾನ್‌ ಇನ್ನೂ ಪಡ್ಡೆ ಹುಡುಗನಲ್ಲ. ಸಲ್ಲುಗೆ ಈಗ ಆತ್ಮೀಯರ ಜೊತೆ ಕಳೆಯುವ ತುಡಿತ. ಅವರೊಂದಿಗೆ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಆತ್ಮೀಯತೆ ಅಷ್ಟೇ.

ಕತ್ರಿನಾ ಕೈಫ್ ಜೊತೆ ಟೂ ಬಿಟ್ಟಾಗಲೂ ಸಲ್ಲು ಆಕೆಯೊಂದಿಗೆ ಅಭಿನಯಿಸಲು ಹಾತೊರೆದಿದ್ದ. ಒಟ್ಟಿನಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಯತ್ನಗಳನ್ನು ಮಾಡಿದ. ಆದರೆ ಅದ್ಯಾಕೋ ಏನೋ ತನ್ನ ಮಾಜಿ ಗೆಳತಿ ಐಶ್ವರ್ಯ ರೈಯಿಂದ ಮಾತ್ರ ದೂರವಾಗಿಯೇ ಉಳಿದ. (ಏಜೆನ್ಸೀಸ್)

English summary
For a long time, Salman Khan had a relationship with Bollywood actress Sangeeta Bijlani but their relationship also met with a miserable ends and the reason best known to them. Despite long time separation, Salman maintains a relationship with Sangeeta.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada