For Quick Alerts
  ALLOW NOTIFICATIONS  
  For Daily Alerts

  200 ಕೋಟಿ ಹಣ ಬೇಡವೆಂದ ಸ್ವಾಭಿಮಾನಿ ಸಮಂತಾ

  |

  ನಟಿ ಸಮಂತಾ ಹಾಗೂ ನಾಗ ಚೈತನ್ಯ ಬೇರಾಗಿದ್ದಾರೆ. ತಾವು ವಿಚ್ಛೇಧನ ಪಡೆದುಕೊಂಡಿರುವುದಾಗಿ, ಆದರೆ ಪರಸ್ಪರ ಗೌರವಗಳನ್ನು ಹಿಂದಿನಂತೆಯೇ ಉಳಿಸಿಕೊಳ್ಳುವುದಾಗಿ ನಾಗ ಚೈತನ್ಯ ನಿನ್ನೆಯಷ್ಟೆ ಹೇಳಿದ್ದರು.

  ಸೆಲೆಬ್ರಿಟಿಗಳ ವಿಚ್ಛೇಧನವಾದಾಗಲೆಲ್ಲ ಪರಿಹಾರ ಮೊತ್ತದ ಚರ್ಚೆ ಬಂದೇ ಬರುತ್ತದೆ. ಪರಿಹಾರ ಅಥವಾ ಜೀವನಾಂಶ ಹಣಕ್ಕಾಗಿಯೇ ಸೆಲೆಬ್ರಿಟಿಗಳು ಕೆಲವರು ವಿಚ್ಛೇಧನ ಪಡೆಯುತ್ತಾರೆ ಎಂಬ ಆರೋಪ ಹಿಂದಿನಿಂದಲೂ ಇದೆ.

  ಇದೀಗ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನದಲ್ಲಿಯೂ ಜೀವನಾಂಶ ಮೊತ್ತ ಎಷ್ಟಿರಬಹುದು, ಎಷ್ಟು ಹಣ ಹಾಗೂ ಆಸ್ತಿಯನ್ನು ನಾಗ ಚೈತನ್ಯ ಸಮಂತಾಗೆ ಕೊಡಬೇಕಾಗಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

  ಇದೀಗ ವೈರಲ್ ಆಗಿರುವ ಸುದ್ದಿಯ ಪ್ರಕಾರ, ನಿಯಮದ ಪ್ರಕಾರ ಸುಮಾರು 200 ಕೋಟಿ ಜೀವನಾಂಶ ಅಥವಾ ಪರಿಹಾರ ಮೊತ್ತವನ್ನು ನಾಗ ಚೈತನ್ಯ, ಸಮಂತಾಗೆ ಕೊಡಬೇಕಾಗಿದೆ. ಆದರೆ ಸ್ವಾಭಿಮಾನಿ ಸಮಂತಾ ಆ ಹಣವನ್ನು ಬೇಡವೆಂದಿದ್ದಾರೆ.

  ನಾಗ ಚೈತನ್ಯ, ಪರಿಹಾರ ಮೊತ್ತವನ್ನು ನೀಡಲು ತಯಾರಾಗಿದ್ದರಂತೆ ಆದರೆ ಸಮಂತಾ, ತಮಗೆ ಯಾವುದೇ ಹಣ ಬೇಡ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಸ್ವಾಭಿಮಾನವನ್ನು ಜಗಜ್ಜಾಹೀರು ಮಾಡಿದ್ದಾರೆ. ಸಮಂತಾರ ಈ ನಿರ್ಣಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಕೇಳಿ ಬರುತ್ತಿದೆ.

  ನಾಗ ಚೈತನ್ಯರ ಕುಟುಂಬದಿಂದ ಒಂದು ರುಪಾಯಿ ಹಣವನ್ನು ಸಹ ಸಮಂತಾ ಪಡೆದುಕೊಳ್ಳುತ್ತಿಲ್ಲ. ತಾವು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇಧನ ಪಡೆಯುತ್ತಿದ್ದೇವಾದ್ದರಿಂದ ಜೀವನಾಂಶದ ಬೇಡ ಎಂಬ ನಿಲವು ತಳೆದಿದ್ದಾರೆ ಸಮಂತಾ.

  ಸಮಂತಾ ಟಾಲಿವುಡ್‌ನ ಬಹು ಬೇಡಿಕೆಯ ಸಿನಿಮಾ ನಟಿ. ಮದುವೆ ಆಗಿದ್ದರೂ ಸಾಲು-ಸಾಲು ಸಿನಿಮಾಗಳ ಆಫರ್‌ಗಳು ಸಮಂತಾಗೆ ಬರುತ್ತಲೇ ಇದೆ. 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ ಸಮಂತಾ. ಸಿನಿಮಾ ನಟನೆ ಜೊತೆಗೆ ನಿರ್ಮಾಣವನ್ನೂ ಆರಂಭಿಸುತ್ತಿದ್ದಾರೆ. ನಿರೂಪಕಿಯಾಗಿಯೂ ಹೆಸರು ಮಾಡಿರುವ ಸಮಂತಾ ಚಿನ್ನದ ಆಭರಣ ಮಳಿಗೆ ಸ್ಥಾಪಿಸುವ ಯೋಜನೆಯನ್ನೂ ಹೊಂದಿದ್ದಾರೆ.

  ಸಮಂತಾ ಹಾಗೂ ನಾಗ ಚೈತನ್ಯ ಪರಸ್ಪರ ಒಪ್ಪಿ ತಮ್ಮ ದಾಂಪತ್ಯವನ್ನು ಅಂತ್ಯಗೊಳಿಸಿದ್ದಾರೆ. ತಾವಿಬ್ಬರೂ ಬೇರಾಗುತ್ತಿರುವ ವಿಷಯವನ್ನು ನಿನ್ನೆ (ಅಕ್ಟೋಬರ್ 02) ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ''ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮ್ಮ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ'' ಎಂದಿದ್ದಾರೆ ಸಮಂತಾ ಮತ್ತು ನಾಗ ಚೈತನ್ಯ.

  English summary
  Actress Samantha says no to 200 crore rs alimony offered by Akkineni family. Samantha And Naga Chaithanya separated recently.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X