For Quick Alerts
  ALLOW NOTIFICATIONS  
  For Daily Alerts

  2ನೇ ಐಟಂ ಸಾಂಗ್‌ಗೆ ಸಮಂತಾ ಸಹಿ: 'ಮಹಾನಟಿ' ಹೀರೋ ಸ್ಯಾಮ್ ಬೋಲ್ಡ್ ಸ್ಟೆಪ್?

  |

  ಅಲ್ಲು ಅರ್ಜುನ್ ರಗಡ್ ಲುಕ್ ಇಷ್ಟ ಆಯ್ತೋ ಇಲ್ಲವೋ ಗೊತ್ತಿಲ್ಲ. ರಶ್ಮಿಕಾ ಡಿ ಗ್ಲಾಮರ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿತೋ ಇಲ್ಲವೋ ಗೊತ್ತಿಲ್ಲ. ಸುಕುಮಾರ್ ನಿರ್ದೇಶನ ಕೆಲವರಿಗೆ ಇಷ್ಟ. ಮತ್ತೆ ಕೆಲವರಿಗೆ ಕಷ್ಟ. ಆದರೆ, ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್ ಮಾತ್ರ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿತ್ತು. ಇದೇ ಮೊದಲ ಬಾರಿಗೆ ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್‌ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತಿ. ದೇವಿಶ್ರೀ ಹಾಕಿದ ಭರ್ಜರಿ ಟ್ಯೂನ್‌ಗೆ ಸಮಂತಾ ಮಾದಕ ಹೆಜ್ಜೆಗಳು ಕಿಕ್ ಮೇಲೆ ಕಿಕ್ ಕೊಟ್ಟಿದ್ದವು.

  ಸಮಂತಾ ಹೆಜ್ಜೆ ಹಾಕಿದ ಒಂದು ಐಟಂ ಸಾಂಗ್ ಹಿಟ್ ಆಗುತ್ತಿದ್ದಂತೆ ಬ್ಯಾಕ್ ಟು ಬ್ಯಾಕ್ ಆಫರ್ ಬರುತ್ತಿವೆ. ಐಟಂ ಸಾಂಗ್‌ಗೆ ಸಮಂತಾ ಹೆಜ್ಜೆ ಹಾಕಲು ಕೇಳುವ ಸಂಭಾವನೆ ಬಲು ದುಬಾರಿ ಅಂತ ಗೊತ್ತಿದ್ದರೂ, ಆಫರ್‌ಗಳಿಗೇನು ಕಮ್ಮಿಯಿಲ್ಲ. ಅಲ್ಲು ಅರ್ಜುನ್ ಒತ್ತಾಯಕ್ಕೆ ಐಟಂ ಸಾಂಗ್ ಮಾಡಿದ್ದ ಸಮಂತಾ ಮತ್ತೊಂದು ಸಾಂಗ್ ಮಾಡುದಿಲ್ಲ ಎಂದೇ ನಂಬಲಾಗಿತ್ತು. ಆದ್ರೀಗ ಟಾಲಿವುಡ್ ಅಂಗಳದಲ್ಲಿ ಸಮಂತಾ ಮತ್ತೊಂದು ಐಟಂ ಸಾಂಗಿಗೆ ಸಹಿ ಹಾಕಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ.

  ಎರಡನೇ ಐಟಂ ಸಾಂಗ್‌ಗೆ ಸಹಿ ಹಾಕಿದ್ರಾ ಸಮಂತಾ?

  ಎರಡನೇ ಐಟಂ ಸಾಂಗ್‌ಗೆ ಸಹಿ ಹಾಕಿದ್ರಾ ಸಮಂತಾ?

  'ಪುಷ್ಪ' ಸಿನಿಮಾದ ಐಟಂ ಸಾಂಗ್‌ ಸಮಂತಾಗೆ ಮತ್ತೊಂದು ಇಮೇಜ್ ಕೊಟ್ಟಿದೆ. ಒಂದು ಐಟಂ ಸಾಂಗ್‌ಗಾಗಿ ಸಮಂತಾ ಅದೆಷ್ಟು ಅಭ್ಯಾಸ ಮಾಡಿದ್ದರು ಅನ್ನುವ ವಿಡಿಯೋ ಸಂಚಲ ಸೃಷ್ಟಿಸಿತ್ತು. ಈ ಹಿಂದೆನೇ ಟಾಲಿವುಡ್ ಅಂಗಳದಲ್ಲಿ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಸಮಂತಾ ಈಗಾಗಲೇ ಎರಡನೇ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಐಟಂ ಸಾಂಗ್ ಮಾಡಲು ಹಿಂದೇಟು ಹಾಕಿದ್ದರು. ಪೇಕ್ಷಕರಿಂದ 'ಹೂ ಅಂತಿಯಾ.. ಮಾವ' ಹಾಡಿಗೆ ಮೆಚ್ಚುಗೆ ಸಿಕ್ಕ ಬಳಿಕ ಮತ್ತೊಂದು ಐಟಂ ಸಾಂಗ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ವಿಜಯ್ ದೇವರಕೊಂಡ 'ಲೈಗರ್' ಚಿತ್ರದಲ್ಲಿ ಐಟಂ ಸಾಂಗ್

  ವಿಜಯ್ ದೇವರಕೊಂಡ 'ಲೈಗರ್' ಚಿತ್ರದಲ್ಲಿ ಐಟಂ ಸಾಂಗ್

  ವಿಜಯ್ ದೇವರಕೊಂಡ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್'. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಕರಣ್ ಜೋಹರ್ ನಿರ್ಮಿಸುತ್ತಿರುವ ಈ ಸಿನಿಮಾ ಬಗ್ಗೆ ಈಗಾಗಲೇ ಟಾಲಿವುಡ್‌ನಲ್ಲಿ ಒಳ್ಳೆ ಟಾಕ್ ಇದೆ. ಹೊಸ ವರ್ಷಕ್ಕೆ ಬಿಟ್ಟ ಟೀಸರ್ ಕೂಡ ಮೆಚ್ಚುಗೆ ಗಳಿಸಿದೆ. ಇದೇ ಸಿನಿಮಾದಲ್ಲಿ ಸಮಂತಾ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಸಿನಿಮಾ ಸಹಿ ಮಾಡಿದ್ದು, ಸೆಟ್ಟಿಗೆ ಹೋಗುವುದೊಂದೇ ಬಾಕಿ ಎನ್ನಲಾಗಿದೆ.

  'ಮಹಾನಟಿ' ಚಿತ್ರದಲ್ಲಿ ಜೋಡಿಯಾಗಿದ್ದ ಸ್ಯಾಮ್-ವಿಜಯ್

  'ಮಹಾನಟಿ' ಚಿತ್ರದಲ್ಲಿ ಜೋಡಿಯಾಗಿದ್ದ ಸ್ಯಾಮ್-ವಿಜಯ್

  ಸಮಂತಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಈ ಮೊದಲೇ ಮಹಾನಟಿ ಸಿನಿಮಾದಲ್ಲಿ ನಟಿಸಿದ್ದಾರೆ. ಪತ್ರಕರ್ತೆಯಾಗಿ ಸಮಂತಾ ನಟಿಸಿದ್ದರೆ, ಇನ್ನೊಂದು ಕಡೆ ಫೋಟೊ ಜರ್ನಲಿಸ್ಟ್ ಆಗಿ ವಿಜಯ್ ದೇವರಕೊಂಡ ನಟಿಸಿದ್ದರು. ಇಬ್ಬರ ಜೋಡಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಮತ್ತೆ ಒಂದೇ ಸಿನಿಮಾದಲ್ಲಿ ಕೆಲಸ ಮಾಡುವ ಸಾಧ್ಯತೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ 'ಲೈಗರ್' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ ಬಾಲಿವುಡ್‌ ನಂಟು ಹೆಚ್ಚಿದೆ. ಹೀಗಾಗಿ ಸಮಂತಾ ಐಟಂ ಸಾಂಗಿಗೆ ಒಪ್ಪಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

  ಐಟಂ ಸಾಂಗ್‌ಗೆ ಒನ್ಸ್ ಮೋರ್ ಎಂದಿದ್ದ ಫ್ಯಾನ್ಸ್

  ಐಟಂ ಸಾಂಗ್‌ಗೆ ಒನ್ಸ್ ಮೋರ್ ಎಂದಿದ್ದ ಫ್ಯಾನ್ಸ್

  ಸಮಂತಾ ವಿಚ್ಛೇದನದ ಬಳಿಕ ಬೋಲ್ಡ್ ರೋಲ್‌ಗಳನ್ನು ಕೈಗೆತ್ತಿಕೊಂಡಿದ್ದರು. ಅದರಲ್ಲೂ ಐಟಂ ಸಾಂಗ್‌ನಲ್ಲಿ ಸಮಂತಾ ನಟಿಸಿದ್ದು ನಾಗಚೈತನ್ಯ ಅಭಿಮಾನಿಗಳಿಗೆ ಇಷ್ಟ ಆಗಿರಲಿಲ್ಲ. ಆದರೆ, ಪ್ರೇಕ್ಷಕರು ಚಿತ್ರಮಂದಿರದಲ್ಲಿ ಒನ್ಸ್ ಮೋರ್ ಎಂದು ಕೂಗಿದ್ದರು. ಚೆನ್ನೈನಲ್ಲಿ ಐಟಂ ಸಾಂಗ್‌ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಿಚ್ಛೇದನದ ಬಳಿಕ ಮೊದಲ ಐಟಂ ಸಾಂಗ್ ಬೇಜಾನ್ ಸದ್ದು ಮಾಡಿದ್ದು, ಎರಡನೇ ಸಾಂಗ್‌ಗೆ ಪ್ರೇಕ್ಷಕರು ಕಾಯುತ್ತಿದ್ದಾರೆ.

  English summary
  Samantha signed her second item song for Vijay Deverakonda Liger movie Rumors in Tollywood. She is having good releationship with Vijay Devarakonda after Mahanati Movie.
  Monday, January 24, 2022, 9:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X