»   » ಆಸೆ ತೀರಿಸೆಂದವನ ಮುಖಕ್ಕೆ ಸಂಜನಾ ಮಂಗಳಾರತಿ

ಆಸೆ ತೀರಿಸೆಂದವನ ಮುಖಕ್ಕೆ ಸಂಜನಾ ಮಂಗಳಾರತಿ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಕನ್ನಡ ಚಿತ್ರರಂಗದ ಬೆಡಗಿ ಸಂಜನಾ ಸದ್ಯಕ್ಕೆ ತೆಲುಗು ಚಿತ್ರವೊಂದರಲ್ಲಿ ಬಿಜಿಯಾಗಿದ್ದಾರೆ. ಆಕೆ ಅಭಿನಯಿಸುತ್ತಿರುವ 'ಶಿವಕೇಶವ್' ಚಿತ್ರದ ನಿರ್ಮಾಪಕನ ಜೊತೆ ಜಟಾಪಟಿ ನಡೆಯುತ್ತಿದೆ. ಇತ್ತೀಚೆಗೆ ಸಂಜನಾರನ್ನು ಆಡಿಯೋ ರಿಲೀಸ್ ಫಂಕ್ಷನ್ ಗೆ ಆಹ್ವಾನಿಸಿರಲಿಲ್ಲ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಚಿತ್ರದ ನಿರ್ಮಾಪಕ ಸಂಜನಾರ ಬಳಿ "ಅನ್ ಪ್ರೊಫೆಷನಲ್ ಡಿಮ್ಯಾಂಡ್ಸ್" ಇಟ್ಟಿದ್ದಾನೆ ಎಂಬ ಮಾತುಗಳು ಕೇಳಿಬರುತಿವೆ. ಆತನ ಆಸೆ ತೀರಿಸುವ ಕೋರಿಕೆ ಮುಂದಿಟ್ಟಿರುವುದೇ ಇದಕ್ಕೆ ಕಾರಣ ಎನ್ನುತ್ತದೆ ಟಾಲಿವುಡ್. ಆತನ ಕೋರಿಕೆಯನ್ನು ಸಂಜನಾ ನಿರಾಕರಿಸುವ ಜೊತೆಗೆ ಆತನ ಮುಖಕ್ಕೆ ಮಂಗಳಾರತಿಯನ್ನೂ ಮಾಡಿದ್ದಾರೆ.

ಇದರಿಂದ ಕುಪಿತನಾದ ಆತ ಸಂಜನಾರನ್ನು ಆಡಿಯೋ ರಿಲೀಸ್ ಫಂಕ್ಷನ್ ಗೆ ಆಹ್ವಾನಿಸಿರಲಿಲ್ಲ ಎನ್ನುತ್ತವೆ ಮೂಲಗಳು. ಈ ಬಗ್ಗೆ ಈಗ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಸಂಜನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂಜನಾಗೆ ಆಹ್ವಾನ ನೀಡದಿರಲು ಏನು ಕಾರಣ

ಸಾಧಾರಣವಾಗಿ ಸಂಜನಾ ಚಿತ್ರೀಕರಣ ಸ್ಪಾಟ್ ಗಳಲ್ಲಿ ಅವರ ತಾಯಿ ಜೊತೆಯಾಗಿರುತ್ತಾರೆ. ಆದರೆ ನಿರ್ಮಾಪಕನ ಜೊತೆಗಿನ ಕಹಿ ಘಟನೆ ಬಳಿಕ ತಂದೆಯವರನ್ನೂ ಶೂಟಿಂಗ್ ಸ್ಪಾಟ್ ಗೆ ಕರೆದೊಯ್ದರಂತೆ. ಇದರಿಂದ ನಿರ್ಮಾಪಕನ ಪಿತ್ತನೆತ್ತಿಗೇರಿದೆ. ಆಕೆಯನ್ನು ಆಡಿಯೋ ರಿಲೀಸ್ ಫಂಕ್ಷನ್ ಆಹ್ವಾನ ನೀಡದೆ ಇರಲು ಇದೇ ಕಾರಣ ಎನ್ನಲಾಗಿದೆ.

ಕೆಲವು ನಿರ್ಮಾಪಕರ ಧೋರಣೆ ಬದಲಾಗಬೇಕು

ಈ ಬಗ್ಗೆ ಆಂಗ್ಲ ಪತ್ರಿಕೆಯೊಂದರ ಜೊತೆ ಮಾತನಾಡಿರುವ ಸಂಜನಾ ಪರೋಕ್ಷವಾಗಿ ನಿರ್ಮಾಪಕನ ಬಣ್ಣ ಬಯಲು ಮಾಡಿದ್ದಾರೆ. "ತಮ್ಮ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದೇನೆ ಎಂಬ ಕಾರಣಕ್ಕೆ ಚಿತ್ರೋದ್ಯಮದಲ್ಲಿ ಕೆಲವು ನಿರ್ಮಾಪಕರು, ನಿರ್ದೇಶಕರು ಹೀರೋಯಿನ್ ತಮಗೇ ಸೇರಿದ್ದು ಎಂದು ಭಾವಿಸುತ್ತಿದ್ದಾರೆ. ಚಿತ್ರೋದ್ಯಮದಲ್ಲಿ ಸಾಕಷ್ಟು ಹೀರೋಯಿನ್ ಗಳಿಗೆ ಈ ರೀತಿಯ ಕಹಿ ಅನುಭವಗಳು ಆಗುತ್ತಿವೆ..."

ನಾನು ಆ ರೀತಿಯ ನಟಿಯಲ್ಲ: ಸಂಜನಾ

ನಿರ್ಮಾಪರು ನನ್ನ ಮ್ಯಾನೇಜರ್ ಮೂಲಕ ಏನು ಡಿಮ್ಯಾಂಡ್ ಮಾಡುತ್ತಿದ್ದಾರೋ ನನಗೆ ಅರ್ಥವಾಗುತ್ತದೆ. ಆದರೆ ನಾನು ಆ ರೀತಿಯ ನಟಿಯಲ್ಲ. ನನ್ನ ಬಳಿ ಕ್ಷಮೆಯಾಚಿಸಿದ ಬಳಿಕ ಚಿತ್ರದ ಪ್ರಚಾರಕಾರ್ಯದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದೆ. ಈ ಚಿತ್ರಕ್ಕಾಗಿ ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಸಂಜನಾರನ್ನು ಆಹ್ವಾನಿಸಿಲ್ಲ ಎಂಬುದು ಸುಳ್ಳು

ಆದರೆ ಚಿತ್ರದ ನಿರ್ಮಾಪಕರು ಮಾತ್ರ ಸಂಜನಾ ಆರೋಪಗಳನ್ನು ಸರಾಸಗಟಾಗಿ ನಿರಾಕರಿಸಿದ್ದಾರೆ. ಶಿವಕೇಶವ್ ಚಿತ್ರದ ನಿರ್ಮಾಪಕ ಬಿ.ನಾಗರಾಜ್ ಮಾತನಾಡುತ್ತಾ, "ಆಡಿಯೋ ಫಂಕ್ಷನ್ ಗೆ ಎಲ್ಲರನ್ನೂ ಆಹ್ವಾನಿಸಲಾಗಿಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳುವುದು ನನ್ನ ಕೆಲಸವಲ್ಲ..."

ಅನ್ ಪ್ರೊಫೆಷನಲ್ ಡಿಮ್ಯಾಂಡ್ಸ್ ಎಂದರೆ ಏನು

ಸಂಜನಾಗೆ ಆಹ್ವಾನ ಸಿಕ್ಕಿಲ್ಲ ಎಂಬುದು ನನಗೆ ಗೊತ್ತಿರಲಿಲ್ಲ. ಆಕೆ ತಾನು ಅಭಿನಯಿಸಿದ ಚಿತ್ರ ಸ್ವಂತ ಚಿತ್ರ ಎಂದು ಭಾವಿಸಿದ್ದರೆ, ಆಹ್ವಾನವಿಲ್ಲದಿದ್ದರೂ ಹಾಜರಾಗುತ್ತಿದ್ದರು. ಆಕೆ ಆರೋಪಿಸುತ್ತಿರುವಂತೆ ಅನ್ ಪ್ರೊಫೆಷನಲ್ ಡಿಮ್ಯಾಂಡ್ಸ್ ಎಂದರೆ ಏನು ಎಂಬುದು ತಮಗೆ ಅರ್ಥವಾಗುತ್ತಿಲ್ಲ. ಆಕೆಯ ಆರೋಪಗಳು ಸಂಪೂರ್ಣ ನಿರಾಧಾರ ಎಂದಿದ್ದಾರೆ.

English summary
Tollywood actor Sanjana and the production house of her forthcoming film 'Shivakeshav' were, until recently, at war. The production house was refusing to invite the actress for audio functions even as claims emerged that the snub was because she had “refused to meet ‘certain unprofessional’ demands.
Please Wait while comments are loading...