For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್ ಜೊತೆ ಸಂಜಯ್ ದತ್ ಚಿತ್ರ

  |

  ಬಾಲಿವುಡ್ ನಟ ಸಂಜಯ್ ದತ್ ಕನ್ನಡಕ್ಕೆ ಬರಲಿದ್ದಾರೆ. ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಸುಳಿದಾಡುತ್ತಿದೆ. ಸಂಜಯ್ ದತ್ ಅವರನ್ನು ಕನ್ನಡಕ್ಕೆ ಕರೆಯುತ್ತಿರುವ ಚಿತ್ರದ ಹೆಸರು 'ಚಕ್ರವರ್ತಿ'. ದುನಿಯಾ ವಿಜಯ್ ನಾಯಕತ್ವದ ಈ ಚಿತ್ರವನ್ನು ಯಶಸ್ವಿ ಚಿತ್ರ ಸಾರಥಿಯ ಸಂಭಾಷಣೆಕಾರ ಚಿಂತನ್ ನಿರ್ದೇಶಿಸಲಿದ್ದಾರೆ. ಸದ್ಯದಲ್ಲೇ ಚಕ್ರವರ್ತಿ ಚಿತ್ರ ಸೆಟ್ಟೇರಲಿದೆ.

  ದುನಿಯಾ ವಿಜಯ್ ಎದುರು ಖಳನಟರಾಗಿ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಕರೆತರುವ ಪ್ರಯತ್ನ ಒಂದು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ. ಸಂಜಯ್ ದತ್ ಮ್ಯಾನೇಜರ್ ಜತೆ ಚಕ್ರವರ್ತಿ ಚಿತ್ರದ ನಿರ್ಮಾಪಕರಾದ ಪ್ರಸಾದ್ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಆ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಆದರೆ ಬರಬಹುದೆಂಬ ಆಸೆ ಹಾಗೂ ಪ್ರಯತ್ನ ಎರಡೂ ಮುಂದುವರಿದಿದೆ.

  ಇತ್ತೀಚಿಗಷ್ಟೇ ಅಣ್ಣಾ ಬಾಂಡ್ ಚಿತ್ರದಲ್ಲಿ ಬಾಲಿವುಡ್ ನಟ ಜಾಕಿಶ್ರಾಫ್ ಮಿಂಚಿದ್ದರು. ಈಗ ಸಂಜಯ್ ದತ್ ಅವರನ್ನು ಕರೆದುತರುವ ಪ್ರಯತ್ನ ನಡೆಯುತ್ತಿದೆ. ಆಶ್ಚರ್ಯವೆಂದರೆ ಅಣ್ಣಾಬಾಂಡ್ ನಲ್ಲಿ ಜಾಕಿ ಶ್ರಾಫ್ ಮಾಡಿದಂತಹ ಪಾತ್ರವೇ, ಚಕ್ರವರ್ತಿ ಚಿತ್ರದಲ್ಲಿ ಸಂಜಯ್ ದತ್ ಪಾಲಿಗಿದೆ. ಸಂಜಯ್ ಒಪ್ಪುತ್ತಾರಾ ಎಂಬುದು ಸದ್ಯದ ಪ್ರಶ್ನೆ!

  ಹಿಂದಿಯ 'ಅಗ್ನಿಪಥ್' ಚಿತ್ರದಲ್ಲಿನ ಸಂಜಯ್ ದತ್ ಅಭಿನಯ ನೋಡಿ ನಿರ್ಮಾಪಕ ಪ್ರಸಾದ್ ಚಕಿತರಾಗಿದ್ದಾರೆ. ಹೀಗಾಗಿ ತಮ್ಮ ನಿರ್ಮಾಣದ ಚಕ್ರವರ್ತಿಗೆ ಸಂಜಯ್ ದತ್ ಅವರೇ ಸೂಕ್ತ ಆಯ್ಕೆ ಎಂಬುದು ಪ್ರಸಾದ್ ಅಂಬೋಣ. ಸಂಜಯ್ ದತ್ ಭಾಗದ ಸಂಪೂರ್ಣ ಚಿತ್ರೀಕರಣವನ್ನು ದುಬೈನಲ್ಲಿ ನಡೆಸಲು (ಸಂಜೂ ಬಾಬಾ ಒಪ್ಪಿದರೆ! )ನಿರ್ದೇಶಕ ಚಿಂತನ್ ಚಿಂತನೆ ನಡೆಸಿದ್ದಾರೆ.

  ಸದ್ಯಕ್ಕೆ ಸಂಜಯ್ ದತ್ ಮಲೇಶ್ಯಾದಲ್ಲಿದ್ದಾರೆ. ಭಾರತಕ್ಕೆ ಅವರು ಬಂದ ನಂತರ ಈ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ. "ಸದ್ಯಕ್ಕೆ ನಾವು ಸಂಜಯ್ ದತ್‌ ಅವರನ್ನೇ ಆ ಪಾತ್ರಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ" ಎಂದಿದ್ದಾರೆ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕ ಎನಿಸಲಿರುವ ಚಿಂತನ್.

  ಸಂಜಯ್ ದತ್ 'ಸಾಧ್ಯವಿಲ್ಲ' ಅಂದುಬಿಟ್ಟರೆ ನಂತರದ ಆಯ್ಕೆಯಾಗಿ ಕಮಲ್ ಹಾಸನ್ ಎಂದಿದ್ದಾರೆ ಚಿಂತನ್. ಚಕ್ರವರ್ತಿ ಚಿತ್ರಕ್ಕೆ ನಾಯಕಿ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಸದ್ಯಕ್ಕೆ ಕೇಳಿಬರುತ್ತಿರುವ ಹೆಸರು ಪ್ರಿಯಾಮಣಿ. ನಾಯಕ್ ವಿಜಯ್ ಅವರಿಗಂತೂ ಸಂಜಯ್ ದತ್ ಬರಬಹುದೆಂಬ ಸುದ್ದಿಯೇ ಸಖತ್ ಖುಷಿ ನೀಡಿದೆಯಂತೆ. ಇಷ್ಟಾದ ಮೇಲೂ ಕಟ್ಟಕಡೆಗೆ ಮೂಡುವ ಪ್ರಶ್ನೆ, 'ಸಂಜಯ್ ದತ್ ಕನ್ನಡಕ್ಕೆ ಬರುತ್ತಾರಾ?' (ಒನ್ ಇಂಡಿಯಾ ಕನ್ನಡ)

  English summary
  There is a news buzz that Bollywood actor Sanjay Dutt comes to first time in a Kannada movie, Duniya Vijay starer upcoming movie titled 'Chakravarthi'. This is to produced by Samartha Ventures Prasad. Heroine not selected. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X