»   » ಕರೀನಾ ಕೈಕೊಟ್ಟ ಶಾಹೀದ್ ಗಿಂದು ದೆಹಲಿಯಲ್ಲಿ ನಿಶ್ಚಿತಾರ್ಥ.?

ಕರೀನಾ ಕೈಕೊಟ್ಟ ಶಾಹೀದ್ ಗಿಂದು ದೆಹಲಿಯಲ್ಲಿ ನಿಶ್ಚಿತಾರ್ಥ.?

Posted By:
Subscribe to Filmibeat Kannada

ತನ್ನ ಸಿನಿಮಾಗಳಿಗಿಂತ ಹೆಚ್ಚಾಗಿ ಇಡೀ ಬಾಲಿವುಡ್ ನಲ್ಲಿ ಚಾಕಲೇಟ್ ಬಾಯ್ ಶಾಹೀದ್ ಕಪೂರ್ ಸುದ್ದಿ ಮಾಡಿರುವುದು ಲವ್ವಿ ಡವ್ವಿ ಮ್ಯಾಟ್ರಲ್ಲಿ. ಬೇಬೋ ಕರೀನಾ ಜೊತೆ ಹಸೆಮಣೆ ಏರಬೇಕಿದ್ದ ಈ ಹಾಲುಗಲ್ಲದ ಪೋರ, ಕರೀನಾ ಕೈಕೊಟ್ಟ ಮೇಲೆ ಪಿಗ್ಗಿ ಹಿಂದೆ ಬಿದ್ದು ಬಿಟ್ಟರು.

ಆದ್ರೆ, ಪ್ರಿಯಾಂಕಾ ಮತ್ತು ಶಾಹೀದ್ ಮಧ್ಯೆ ಕಿಸ್ಮತ್ ಕನೆಕ್ಟ್ ಆಗಲಿಲ್ಲ. ಲಾಂಗ್ ಬ್ರೇಕ್ ತೆಗೆದುಕೊಂಡು ಈಗೀಗ ವೃತ್ತಿ ಬದುಕ್ಕಲ್ಲಿ ಕೊಂಚ ಸೀರಿಯಸ್ ಆಗಿರುವ ಶಾಹೀದ್, 'ಹೈದರ್' ಸಿನಿಮಾ ಮೂಲಕ ಮತ್ತೆ ಫಾರ್ಮ್ ಗೆ ಮರಳಿದ್ದಾರೆ.

shahid-kapoor-getting-engaged-today

ಇದೇ ಗ್ಯಾಪಲ್ಲಿ ವೈಯುಕ್ತಿಕ ಬದುಕಿನ ಬಗ್ಗೆಯೂ ಶಾಹೀದ್ ಆಲೋಚನೆ ಮಾಡಿದ್ದಾರಂತೆ. ಇದರ ಪರಿಣಾಮ ಇಂದು (ಜನವರಿ 14) ದೆಹಲಿಯಲ್ಲಿ ನಿಶ್ಚಿತಾರ್ಥವಾಗುತ್ತಿದ್ದಾರಂತೆ. ಸಡನ್ನಾಗಿ ಈ ನಿರ್ಧಾರ ತೆಗೆದುಕೊಂಡಿರುವುದರಿಂದ ಶಾಹೀದ್, ಚಿತ್ರರಂಗದ ಯಾವುದೇ ಮಿತ್ರರನ್ನ ಆಹ್ವಾನಿಸಿಲ್ಲ. ಎರಡು ಕುಟುಂಬಗಳ ಮಟ್ಟಿಗೆ ಮಾತ್ರ ಸರಳವಾಗಿ ಸಮಾರಂಭ ನಡೆಯಲಿದೆಯಂತೆ. [ಬಾಲಿವುಡ್ 'ಮಗಧೀರ'ನಾದ ಶಹೀದ್ ಕಪೂರ್]

Shahid Kapoor getting engaged today?1

ನಟೀಮಣಿಯರ ಸಹವಾಸವೇ ಬೇಡ ಅನ್ನುತ್ತಿರುವ ಶಾಹೀದ್, ಚಿತ್ರರಂಗದ ಬಗ್ಗೆ ಎಳ್ಳಷ್ಟು ಗೊತ್ತಿರದ ಹುಡುಗಿಯನ್ನ ವರಿಸಲಿದ್ದಾರಂತೆ. ಹರೆಯದ ಹುಡುಗಿಯರಿಗೆ ಬೇವಿನಕಾಯಿ ತಿಂದಷ್ಟು ಕಹಿಯಾಗಿರುವ ಈ ಸುದ್ದಿ ಬಾಲಿವುಡ್ ನಲ್ಲೀಗ ಗಿರಕಿ ಹೊಡೆಯುತ್ತಿದೆ. [ಶಾಹಿದ್ ಕಪೂರ್, ನರ್ಗಿಸ್ ಫಕ್ರಿ ಈಗ 'ಜೋಡಿ'ಹಕ್ಕಿಗಳು]

ಗಾಳಿಯಲ್ಲಿ ಇಂತಹ ಸುದ್ದಿಯನ್ನ ಹಾರಿ ಬಿಟ್ಟ ಮಹಾನುಭಾವರ್ಯಾರೋ ಗೊತ್ತಿಲ್ಲ. ಇದು ಸತ್ಯವೋ, ಇಲ್ಲಾ ಅಂತೆ ಕಂತೆಗಳ ಗಂಟಿಗೆ ಹೊಸ ಸೇರ್ಪಡೆಯೋ ಅನ್ನುವುದೂ ಪಕ್ಕಾ ಇಲ್ಲ. ಕನ್ಫರ್ಮ್ ಆದ ತಕ್ಷಣ ನಿಮಗೆ ನಾವೇ ಮೊದಲು ಹೇಳುತ್ತೀವಿ.

English summary
Bollywood's most eligible bachelor, Shahid Kapoor is finally getting hitched. Rumors are afloat that the actor is getting engaged today, Jan 14th in Delhi.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada