»   » 'ತಾರಕ್' ದರ್ಶನ್ ಗೆ ಮೊತ್ತೊಬ್ಬ ನಾಯಕಿ 'ಮಾಸ್ಟರ್ ಪೀಸ್' ಬೆಡಗಿ?

'ತಾರಕ್' ದರ್ಶನ್ ಗೆ ಮೊತ್ತೊಬ್ಬ ನಾಯಕಿ 'ಮಾಸ್ಟರ್ ಪೀಸ್' ಬೆಡಗಿ?

Posted By:
Subscribe to Filmibeat Kannada

'ತಾರಕ್' ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ಶ್ರುತಿ ಹರಿಹರನ್ ಇತ್ತೀಚೆಗೆ ತಾನೆ ಮುಗಿಸಿದ್ದಾರೆ. ಚಿತ್ರದಲ್ಲಿ ದರ್ಶನ್‌ ಗೆ ಇಬ್ಬರು ನಾಯಕಿಯರು ಇದ್ದರೂ, ಇನ್ನೂ ಎರಡನೇ ನಾಯಕಿ ಮಾತ್ರ ಫಿಕ್ಸ್ ಆಗಿಲ್ಲ.['ತಾರಕ್' ಚಿತ್ರೀಕರಣದಲ್ಲಿ ದರ್ಶನ್ ಜೊತೆ ಶ್ರುತಿ ಹರಿಹರನ್ ರೊಮ್ಯಾನ್ಸ್]

ಚಿತ್ರೀಕರಣ ಭರದಿಂದ ಸಾಗುತ್ತಿರುವ ನಡುವೆಯೇ ಚಿತ್ರದ ನಾಯಕಿಗಾಗಿ ಹುಡುಕಾಟ ನಡೆಸಿದ್ದ ನಿರ್ದೇಶಕ ಪ್ರಕಾಶ್ ಜಯರಾಮ್, ಈಗ 'ಮಾಸ್ಟರ್ ಪೀಸ್' ಬೆಡಗಿಯನ್ನು ಫೈನಲೈಸ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

'ತಾರಕ್' ದರ್ಶನ್ ಗೆ ಮತ್ತೊಬ್ಬ ನಾಯಕಿ ಫಿಕ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 49 ನೇ ಚಿತ್ರ 'ತಾರಕ್' ನಲ್ಲಿ ನಟಿ ಶ್ರುತಿ ಹರಿಹರನ್ ಈಗಾಗಲೇ ಭಾಗವಹಿಸಿ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿಸಿದ್ದಾರೆ. ಮತ್ತೊಬ್ಬ ನಾಯಕಿಗಾಗಿ ಸರ್ಚ್ ಮಾಡುತ್ತಿದ್ದ ನಿರ್ದೇಶಕರು ಈಗ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾಸ್ತವ ಅವರನ್ನು ಫೈನಲೈಸ್ ಮಾಡಿದ್ದಾರಂತೆ.[ದರ್ಶನ್ '50'ನೇ ಚಿತ್ರದಲ್ಲಿ ಮತ್ತೊಂದು ಮೆಗಾ ಟ್ವಿಸ್ಟ್!]

ಚಿತ್ರತಂಡದ ಕಡೆಯಿಂದ ಸ್ಪಷ್ಟನೆ ಸಿಕ್ಕಿಲ್ಲ

ಆದರೆ ನಿರ್ದೇಶಕ ಪ್ರಕಾಶ್ ಜಯರಾಮ್ ಅವರು ಶಾನ್ವಿ ಶ್ರೀವಾಸ್ತವ ಸೂಕ್ತ ನಾಯಕಿ ಎಂದಷ್ಟೇ ಹೇಳಿದ್ದು, ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಚಿತ್ರಕ್ಕೆ ಶಾನ್ವಿ ಶ್ರೀವಾಸ್ತವ ಸಹಿ ಹಾಕಿದ ನಂತರವಷ್ಟೇ ಚಿತ್ರತಂಡ ಸ್ಪಷ್ಟನೆ ನೀಡಲಿದೆಯಂತೆ.

ರಶ್ಮಿಕಾ ಬದಲು ಶಾನ್ವಿ ಶ್ರೀವಾಸ್ತವ

ಈ ಹಿಂದೆ 'ತಾರಕ್' ಚಿತ್ರದಲ್ಲಿ ದರ್ಶನ್ ಗೆ ಶ್ರುತಿ ಹರಿಹರನ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ನಾಯಕಿಯರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಚಿತ್ರೀಕರಣಕ್ಕೆ ರಶ್ಮಿಕಾ ಮಂದಣ್ಣ ಅವರ ದಿನಾಂಕ ಸರಿಹೊಂದದ ಕಾರಣ, ಈಗ ಶಾನ್ವಿ ಶ್ರೀವಾಸ್ತವ ರವರನ್ನು ಆಯ್ಕೆ ಮಾಡಲಾಗಿದೆ.

'ಮಾಸ್ಟರ್ ಪೀಸ್' ಬೆಡಗಿ

'ಚಂದ್ರಲೇಖಾ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಶಾನ್ವಿ, ಯಶ್ ಅಭಿನಯದ 'ಮಾಸ್ಟರ್ ಪೀಸ್' ಸಿನಿಮಾದಲ್ಲಿ ನಟಿಸಿದ ನಂತರ ಹೆಚ್ಚು ಜನಪ್ರಿಯರಾದರು.

ಶಾನ್ವಿ ಶ್ರೀವಾಸ್ತವ ಅಭಿನಯದ ಚಿತ್ರಗಳು

ಕಳೆದ ಡಿಸೆಂಬರ್(2016) ನಲ್ಲಿ ಬಿಡುಗಡೆ ಆದ 'ಸುಂದರಾಂಗ ಜಾಣ' ಚಿತ್ರದಲ್ಲಿ ಶಾನ್ವಿ, ಗಣೇಶ್ ಜೊತೆ ತೆರೆ ಹಂಚಿಕೊಂಡಿದ್ದರು. ಅಲ್ಲದೇ ಮನೋರಂಜನ್ ನಾಯಕ ನಟನೆಯ 'ಸಾಹೇಬ' ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ. ಸದ್ಯ ಚಿತ್ರೀಕರಣ ನಡೆಯುತ್ತಿರುವ ಶ್ರೀಮುರಳಿಯ 'ಮಫ್ತಿ' ಚಿತ್ರದಲ್ಲಿಯೂ ಭಾಗಿಯಾಗಿದ್ದು, ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮಾನ್ ನಾರಾಯಣ' ದಲ್ಲಿ ಕಾಣಿಸಿಕೊಳ್ಳುವ ಉತ್ಸುಕದಲ್ಲಿದ್ದಾರೆ.

English summary
Kannada Actress Shanvi Srivastava to act Darshan Starrer 'Tarak'?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada