»   » 'ತಾರಕ್' ಚಿತ್ರೀಕರಣದಲ್ಲಿ ದರ್ಶನ್ ಜೊತೆ ಶ್ರುತಿ ಹರಿಹರನ್ ರೊಮ್ಯಾನ್ಸ್

'ತಾರಕ್' ಚಿತ್ರೀಕರಣದಲ್ಲಿ ದರ್ಶನ್ ಜೊತೆ ಶ್ರುತಿ ಹರಿಹರನ್ ರೊಮ್ಯಾನ್ಸ್

Posted By:
Subscribe to Filmibeat Kannada

ನಿರ್ದೇಶಕ ಚಿಂತನ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇತ್ತ ಅಭಿಮಾನಿಗಳು 'ಚಕ್ರವರ್ತಿ'ಯನ್ನು ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ರೆ, ಅತ್ತ ದರ್ಶನ್ 'ತಾರಕ್' ಚಿತ್ರೀಕರಣ ರಂಗೇರಿದೆ.[ಟ್ರೈಲರ್ ಸ್ಪೆಷಾಲಿಟಿ: ಭರ್ಜರಿ ಬೇಟೆಗೆ ಸಿದ್ಧವಾದ 'ಚಕ್ರವರ್ತಿ' ದರ್ಶನ್]

ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಚೌಡೇಶ್ವರಿ ದೇವಿಯ ಸನ್ನಿಧಿಯಲ್ಲಿ ದರ್ಶನ್ ರವರ 49ನೇ ಚಿತ್ರ 'ತಾರಕ್' ಮುಹೂರ್ತ ನೆರವೇರಿತ್ತು. ಮಾರ್ಚ್ ನಲ್ಲಿ ಚಿತ್ರೀಕರಣ ಆರಂಭಿಸಿದ್ದ ಚಿತ್ರತಂಡ ಈಗ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿದೆ.

'ತಾರಕ್' ಮೊದಲ ಶೆಡ್ಯೂಲ್ ಶೂಟಿಂಗ್ ನಲ್ಲಿ ಶ್ರುತಿ ಹರಿಹರನ್

'ತಾರಕ್' ಚಿತ್ರಕ್ಕೆ ನಾಯಕಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ನಟಿ ಶ್ರುತಿ ಹರಿಹರನ್ 'ತಾರಕ್' ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣವನ್ನು ಮುಗಿಸಿದ್ದು, ಅವರು ನಾಯಕಿ ಆಗಿ ನಟಿಸುತ್ತಿರುವುದು ಪಕ್ಕಾ ಆಗಿದೆ.

'ತಾರಕ್' ಅಫೀಶಿಯಲ್ ಪೋಸ್ಟರ್ ನೋಡಿದ್ರಾ...

'ತಾರಕ್' ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಅಫೀಶಿಯಲ್ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ.

'ತಾರಕ್' ನಿಂದ ರಶ್ಮಿಕಾ ಮಂದಣ್ಣ ಔಟ್

'ತಾರಕ್' ನಲ್ಲಿ ದರ್ಶನ್ ಗೆ ಇಬ್ಬರು ಹೀರೋಯಿನ್ ಗಳು. ಒಬ್ಬರು ಶ್ರುತಿ ಹರಿಹರನ್. ಮತ್ತೊಬ್ಬರು ಯಾರು ಎಂಬುದು ಇನ್ನೂ ಪಕ್ಕಾ ಆಗಿಲ್ಲ. ನಟಿ ರಶ್ಮಿಕಾ ಮಂದಣ್ಣ 'ತಾರಕ್' ಚಿತ್ರದಲ್ಲಿ ನಟಿಸುತ್ತಿಲ್ಲ.

'ತಾರಕ್' ಗೆ ಇನ್ನೊಬ್ಬರು ನಟಿ ಯಾರು?

ರಶ್ಮಿಕಾ ಮಂದಣ್ಣ 'ತಾರಕ್'ನಿಂದ ಔಟ್ ಆಗಿರುವುದರಿಂದ ದರ್ಶನ್ ಗೆ ಇನ್ನೊಬ್ಬ ನಾಯಕಿಯಾಗಿ ಯಾರು ಹೆಜ್ಜೆ ಹಾಕಲಿದ್ದಾರೆ ಎಂಬ ಬಗ್ಗೆ ಚಿತ್ರತಂಡದ ಕಡೆಯಿಂದಲೂ ಯಾವುದೇ ಅಪ್ ಡೇಟ್ ಸಿಕ್ಕಿಲ್ಲ.

ಏಪ್ರಿಲ್ ನಲ್ಲಿ ಚಿತ್ರದ ಎರಡನೇ ಹಂತದ ಚಿತ್ರೀಕರಣ

ನಟಿ ಶ್ರುತಿ ಹರಿಹರನ್ 'ತಾರಕ್' ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿಸಿ ದರ್ಶನ್ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋವೊಂದನ್ನು ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದಾರೆ. ಜೊತೆಗೆ ಈ ತಿಂಗಳ (ಏಪ್ರಿಲ್) ಮಧ್ಯಾಂತರದಿಂದ ಚಿತ್ರದ ಮುಂದಿನ ಶೆಡ್ಯೂಲ್ ಚಿತ್ರೀಕರಣ ಶುರುವಾಗಲಿದೆ ಎಂದು ಬರೆದಿದ್ದು, ಚಿತ್ರದಲ್ಲಿ ನಟಿಸುತ್ತಿರುವ ಅನುಭವದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಚಿತ್ರೀಕರಣ ಎಲ್ಲೆಲ್ಲಿ?

'ತಾರಕ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆದಿದ್ದು, ನಂತರದಲ್ಲಿ ವಿದೇಶಗಳಲ್ಲಿ ಶೂಟ್ ಮಾಡಲಾಗುತ್ತದೆಯಂತೆ. ಕೆ.ಎಸ್.ದುಶ್ಯಂತ್ ಅರ್ಪಿಸಿ, ಶ್ರೀ ಚೌಡೇಶ್ವರಿ ಸಿನಿ ಕ್ರಿಯೇಷನ್ಸ್ ಮತ್ತು ಶ್ರೀ ಜಯಮಾತಾ ಕಂಬೈನ್ಸ್ ಲಾಂಛನದಲ್ಲಿ ಲಕ್ಷ್ಮಣ್ ನಿರ್ಮಿಸುತ್ತಿದ್ದಾರೆ.

ತಾರಾಬಳಗ..

ಚಿತ್ರದಲ್ಲಿ ದರ್ಶನ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ದೇವರಾಜ್ ಮತ್ತು ಶ್ರುತಿ ಹರಿಹರನ್ ನಟಿಸುತ್ತಿರುವುದು ಪಕ್ಕಾ ಆಗಿದೆ. ಆದರೆ ಚಿತ್ರದಲ್ಲಿ ಇತರೆ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.

ಅರ್ಜುನ್ ಜನ್ಯಾ ಸಂಗೀತ

'ತಾರಕ್' ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ, ಕೆ. ಕೃಷ್ಣ ಕುಮಾರ್ ಛಾಯಾಗ್ರಹಣ ಇರಲಿದೆ.

English summary
Kannada Actor Darshan Starrer 'Taarak' Movie First Schedule shooting completed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada