For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮತ್ತು ಶಿವಣ್ಣ ಬಗ್ಗೆ ಇಂತಹದೊಂದು ಸುದ್ದಿ.! ನಿಜವಾದ್ರೆ.?

  By Bharath Kumar
  |
  ದರ್ಶನ್ ಮತ್ತು ಶಿವಣ್ಣ ಬಗ್ಗೆ ಇಂತಹದೊಂದು ಸುದ್ದಿ.! | Oneindia Kannada

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಆಗಿದೆ. ಪ್ರೇಕ್ಷಕರಿಂದ ಶಬ್ಬಾಶ್ ಎನಿಸಿಕೊಂಡಿದೆ. ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡ್ತಿದೆ. ಟಗರು ಶಿವ, ಡಾಲಿ, ಚಿಟ್ಟೆ, ಕಾಕ್ರೋಚ್, ಡಾನ್ ಅಂಲ್, ಕಾನ್ಸಟೇಬಲ್ ಸರೋಜಾ....ಹೀಗೆ ಟಗರು ಚಿತ್ರದ ಪಾತ್ರಗಳು ಟಾಕ್ ಆಫ್ ದಿ ಇಂಡಸ್ಟ್ರಿಯಾಗಿದೆ.

  ಇಷ್ಟೆಲ್ಲದರ ಮಧ್ಯೆ 'ಟಗರು-2' ಸಿನಿಮಾದ ಬಗ್ಗೆಯೂ ಹೆಚ್ಚು ನಿರೀಕ್ಷೆ ಹುಟ್ಟಿಕೊಂಡಿದೆ. 'ಟಗರು-2' ಬರುತ್ತೆ ಅಂತ ಮೊದಲಿನಿಂದಲೂ ಹೇಳಲಾಗಿದೆ. ಆದ್ರೆ, ಸದ್ಯಕ್ಕೆ ಕೇಳಿ ಬಂದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, 'ಟಗರು' ಮುಂದುವರೆದ ಭಾಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಳ್ಳಲಿದ್ದಾರಂತೆ.

  'ಟಗರು' ಸಿನಿಮಾ ಗೆದ್ದ ಖುಷಿ ಹಂಚಿಕೊಂಡ ಶಿವಣ್ಣ ಅಂಡ್ ಟೀಂ'ಟಗರು' ಸಿನಿಮಾ ಗೆದ್ದ ಖುಷಿ ಹಂಚಿಕೊಂಡ ಶಿವಣ್ಣ ಅಂಡ್ ಟೀಂ

  ಹೀಗಾಗಿ, 'ಟಗರು-2' ಚಿತ್ರದ ಬಗ್ಗೆ ಮತ್ತಷ್ಟು ಹೈಪ್ ಹೆಚ್ಚಾಗಿದೆ. ಈ ಬಗ್ಗೆ ಟಗರು ಚಿತ್ರದ ನಿಮಾರ್ಪಕ ಶ್ರಿಕಾಂತ್ ಕೂಡ ಮಾತನಾಡಿದ್ದು, ಅವರ ಪ್ರತಿಕ್ರಿಯೆ ಹೇಗಿತ್ತು ಅಂತ ಮುಂದೆ ಓದಿ....

  ದರ್ಶನ್ ಜೊತೆ ಸೂರಿ ಸಿನಿಮಾ.!

  ದರ್ಶನ್ ಜೊತೆ ಸೂರಿ ಸಿನಿಮಾ.!

  ಹಲವು ಸ್ಟಾರ್ ನಟರ ಜೊತೆ ಸಿನಿಮಾ ಮಾಡಿರುವ ದುನಿಯಾ ಸೂರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಇನ್ನು ಸಿನಿಮಾ ಮಾಡಿಲ್ಲ. ಅವರಿಗಾಗಿ ಸ್ಕ್ರಿಪ್ಟ್ ಸಿದ್ದ ಮಾಡುತ್ತಿದ್ದು, ಸದ್ಯದಲ್ಲೇ ಸಿನಿಮಾ ಮಾಡಲಿದ್ದಾರೆ ಎಂಬ ಮಾತಿದೆ. ಈ ಆಸೆ ಈಗ 'ಟಗರು-2' ಚಿತ್ರದಲ್ಲಿ ನೆರವೇರಲಿದೆ ಎಂಬ ಹೊಸ ಸುದ್ದಿ ಚರ್ಚೆಯಾಗುತ್ತಿದೆ.

  ಶಿವಣ್ಣ ಜೊತೆಯಲ್ಲಿ ದಾಸ

  ಶಿವಣ್ಣ ಜೊತೆಯಲ್ಲಿ ದಾಸ

  ಗಾಂಧಿನಗರದ ಕೆಲ ಸಿನಿಪಂಡಿತರ ಹೇಳುತ್ತಿರುವ ಪ್ರಕಾರ, ಸೆಂಚುರಿ ಸ್ಟಾರ್ ಜೊತೆ 'ಟಗರು-2' ಚಿತ್ರದಲ್ಲಿ ಅಭಿನಯಿಸಲು ದರ್ಶನ್ ಅವರನ್ನ ಕರೆತರುವ ಪ್ರಯತ್ನ ಸಾಗಿದೆ ಎನ್ನಲಾಗಿದೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತೋ ಗೊತ್ತಿಲ್ಲ.

  ಶಿವಣ್ಣ ಚಿತ್ರಕ್ಕೆ ಬಾಲಿವುಡ್ ನಾಯಕಿ: ದರ್ಶನ್ ಜೊತೆಯೂ ನಟಿಸುವ ಆಸೆಯಂತೆ.!ಶಿವಣ್ಣ ಚಿತ್ರಕ್ಕೆ ಬಾಲಿವುಡ್ ನಾಯಕಿ: ದರ್ಶನ್ ಜೊತೆಯೂ ನಟಿಸುವ ಆಸೆಯಂತೆ.!

  'ಟಗರು-2' ಬರೋದು ಖಚಿತ.!

  'ಟಗರು-2' ಬರೋದು ಖಚಿತ.!

  ಸ್ವತಃ ಚಿತ್ರತಂಡವೇ ಹೇಳಿರುವ ಪ್ರಕಾರ 'ಟಗರು-2' ಸಿನಿಮಾ ಬರೋದು ಖಚಿತ. ಶಿವಣ್ಣ ಅವರ ಒಂದು ದೃಶ್ಯವನ್ನ ಈಗಾಗಲೇ ಚಿತ್ರೀಕರಣ ಮಾಡಲಾಗಿದೆ. ಇನ್ನು ಸೂರಿ ಹೇಳುವ ಪ್ರಕಾರ, ಟಗರು ಚಿತ್ರದಲ್ಲಿ ಶಿವಣ್ಣನ ಪಾತ್ರ ನೋಡಿದ ಮೇಲೆ ಇನ್ನು ಕಥೆ ಹೇಳಬಹುದು ಎನಿಸಿದೆ. ಕಥೆ ಮುಂದುವರೆಸುವುದಕ್ಕೆ ಟ್ರೈ ಮಾಡ್ತೀನಿ ಅಂತಾರೆ. ಆದ್ರೆ, ಮಾಡೇ ಮಾಡ್ತೀನಿ ಎಂದು ಹೇಳುತ್ತಿಲ್ಲ.

  ಒಟ್ಟಿಗೆ ಲಾಂಗ್ ಹಿಡಿತಾರ ದಾಸ-ಜೋಗಿ.?

  ಒಟ್ಟಿಗೆ ಲಾಂಗ್ ಹಿಡಿತಾರ ದಾಸ-ಜೋಗಿ.?

  ಒಂದು ವೇಳೆ 'ಟಗರು-2' ಸಿನಿಮಾ ಬಂದ್ರೆ, ಆ ಚಿತ್ರದಲ್ಲಿ ಶಿವಣ್ಣ ಮತ್ತು ದರ್ಶನ್ ಅಭಿನಯಿಸಿದ್ರೆ, ಇಬ್ಬರ ಕೈಯಲ್ಲಿ ಲಾಂಗ್ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

  ಕೆ.ಪಿ ಶ್ರೀಕಾಂತ್ ಏನಂತಾರೆ.?

  ಕೆ.ಪಿ ಶ್ರೀಕಾಂತ್ ಏನಂತಾರೆ.?

  ಇನ್ನು ದರ್ಶನ್ ಮತ್ತು ಶಿವರಾಜ್ ಕುಮಾರ್ 'ಟಗರು-2' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಾರೆ ಎಂದು ಪತ್ರಕರ್ತರೊಬ್ಬರು ಕೇಳಿದ್ದಕ್ಕೆ.? ''ಇನ್ನು ಆ ಟಗರು 2 ಚಿತ್ರದ ಬಗ್ಗೆ ಏನೂ ಯೋಚನೆ ಮಾಡಿಲ್ಲ. ಸಿನಿಮಾ ಮಾಡೋದು ಖಚಿತ. ಸೂರಿ ಅವರೇ ಎಲ್ಲ ಹೇಳಬೇಕು. ಶಿವಣ್ಣ ಅವರ ಒಂದು ದೃಶ್ಯವನ್ನ ಮಾತ್ರ ಶೂಟ್ ಮಾಡಿದ್ದೀವಿ. ಅದನ್ನ ಬಿಟ್ಟರೇ ಬೇರೆ ಏನೂ ನಿರ್ಧಾರವಾಗಿಲ್ಲ.'' ಎನ್ನುತ್ತಾರೆ.

  ಮಾರ್ಚ್ 5, ದರ್ಶನ್ ಮತ್ತು ಸುದೀಪ್ ಪಾಲಿಗೆ ಕರಾಳ ದಿನಮಾರ್ಚ್ 5, ದರ್ಶನ್ ಮತ್ತು ಸುದೀಪ್ ಪಾಲಿಗೆ ಕರಾಳ ದಿನ

  'ಕುರುಕ್ಷೇತ್ರ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಬೇಕಿತ್ತು

  'ಕುರುಕ್ಷೇತ್ರ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಬೇಕಿತ್ತು

  'ದೇವರ ಮಗ' ಚಿತ್ರದ ನಂತರ ಇದುವರೆಗೂ ದರ್ಶನ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೆ ಅಭಿನಯಿಸಿಲ್ಲ. ಆ ಚಿತ್ರದಲ್ಲಿ ಶಿವಣ್ಣ ನಾಯಕರಾಗಿದ್ರೆ, ದರ್ಶನ್ ಪೋಷಕ ಕಲಾವಿದನಾಗಿ ಅಭಿನಯಿಸಿದ್ರು. ಇನ್ನು ದರ್ಶನ್ 'ಕುರುಕ್ಷೇತ್ರ' ಚಿತ್ರದಲ್ಲಿ ಶಿವಣ್ಣ ಅಭಿನಯಿಸಬೇಕಿತ್ತು. ಬ್ಯುಸಿ ಶೆಡ್ಯೂಲ್ ನಿಂದ ಅಭಿನಯಿಸಲು ಸಾಧ್ಯವಾಗಲಿಲ್ಲ.

  English summary
  According to sources, challenging star Darshan and Shiva rajkumar sharing screen in Tagaru 2. tagaru movie has released on february 23rd. the movie directed by duniya soori.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X