»   » ಬಯಲಾಯಿತು ಶಿವಣ್ಣ & ವಾಸು ಅವರ ಮತ್ತೊಂದು ರಹಸ್ಯ

ಬಯಲಾಯಿತು ಶಿವಣ್ಣ & ವಾಸು ಅವರ ಮತ್ತೊಂದು ರಹಸ್ಯ

Posted By:
Subscribe to Filmibeat Kannada

ನಿರ್ದೇಶಕ ಪಿ.ವಾಸು ಅವರು ಆಕ್ಷನ್-ಕಟ್ ಹೇಳಿರುವ ಹಾರರ್ ಥ್ರಿಲ್ಲರ್ ಸಿನಿಮಾ 'ಶಿವಲಿಂಗ' ಭರ್ಜರಿ ಯಶಸ್ವಿಯನಲ್ಲಿರುವಾಗಲೇ, ಇದೀಗ ನಿರ್ದೇಶಕ ಪಿ.ವಾಸು ಮತ್ತು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಜೊತೆಯಾಗಿ ಮತ್ತೊಂದು ಪ್ರಾಜೆಕ್ಟ್ ಮಾಡಲು ಸಿದ್ಧರಾಗಿದ್ದಾರೆ.

ಹೌದು 'ಶಿವಲಿಂಗ'ದಲ್ಲಿ ಒಂದಾಗಿದ್ದ ಶಿವರಾಜ್ ಕುಮಾರ್ ಮತ್ತು ಥ್ರಿಲ್ಲಿಂಗ್ ನಿರ್ದೇಶಕ ಪಿ.ವಾಸು ಅವರು ಮತ್ತೊಮ್ಮೆ 'ರಾಬಿನ್ ಹುಡ್' ಎಂಬ ಹೊಸ ಪ್ರಾಜೆಕ್ಟ್ ಒಂದನ್ನು ಕೈಗೆತ್ತಿಕೊಂಡಿದ್ದಾರೆ.[ತಮಿಳು ನಟ ರಾಘವ ಲಾರೆನ್ಸ್ 'ಶಿವಲಿಂಗ' ರೀಮೇಕ್ ಮಾಡ್ತಾರಾ?]


Shiva Rajkumar and director P Vasu to team up again

ಅಂದಹಾಗೆ ಪಿ.ವಾಸು ಅವರ ಜೊತೆ ಕೆಲಸ ಮಾಡಿದವರೆಲ್ಲಾ ಅವರ ಕೆಲಸ ಮಾಡುವ ಶೈಲಿಗೆ ಮನ ಸೋಲುತ್ತಾರೆ. ಇದಕ್ಕೆ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ಹೊರತಾಗಿಲ್ಲ ಅಂತಾನೇ ಹೇಳಬಹುದು.[ಶಿವಣ್ಣ30 ವಿಶೇಷ: ಶಿವಣ್ಣ ಅವರ 20 ಉತ್ತಮ ಚಿತ್ರಗಳ List]


Shiva Rajkumar and director P Vasu to team up again

ಇನ್ನು ಇವರಿಬ್ಬರ ಜುಗಲ್ ಬಂದಿಯಲ್ಲಿ ಮೂಡಿಬಂದಿದ್ದ 'ಶಿವಲಿಂಗ' ಸಿನಿಮಾ ಬಾಕ್ಸಾಫೀಸ್ ಚಿಂದಿ ಉಡಾಯಿಸಿದ್ದು, ಈಗಲೂ ಕಲೆಕ್ಷನ್ ಮಾಡುವುದನ್ನು ಮುಂದುವರಿಸಿದೆ. ಸಿನಿಮಾ ಬಿಡುಗಡೆ ಆಗಿ 2 ವಾರ ಆಗುತ್ತಾ ಬಂದರೂ ಎಲ್ಲೆಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಶಿವಣ್ಣ ಶಿವತಾಂಡವ ಆಡುತ್ತಿದ್ದಾರೆ.


ಈಗಲೂ 25ರ ಹರೆಯದ ಹುಡುಗರನ್ನು ನಾಚಿಸುವಂತೆ ತಮ್ಮ ನಟನೆಯನ್ನು ತೋರುವ ನಟ ಶಿವರಾಜ್ ಕುಮಾರ್ ಅವರದು 'ಶಿವಲಿಂಗ' ಚಿತ್ರದಲ್ಲಿ ನಟನೆ ಸೇರಿದಂತೆ ಡ್ಯಾನ್ಸ್ ಕೂಡ ಸಖತ್ತಾಗಿತ್ತು. ಆದ್ದರಿಂದ ಪಿ.ವಾಸು ಅವರ ಮುಂದಿನ ಹೊಸ ಯೋಜನೆಗೆ ಶಿವಣ್ಣ ಅವರೇ ಹೀರೋ.['ಶಿವಲಿಂಗ'ದಲ್ಲಿ ರಹೀಂ ಪಾತ್ರ ಮಾಡಿದವರು ಯಾರು ಗೊತ್ತಾ?]


Shiva Rajkumar and director P Vasu to team up again

ಹೊಸ ಚಿತ್ರ 'ರಾಬಿನ್ ಹುಡ್' ಗೆ ಬಹುತೇಕ 'ಶಿವಲಿಂಗ' ಚಿತ್ರತಂಡವೇ ಕೆಲಸ ಮಾಡಲಿದ್ದು, ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನು ನಿರ್ಧಾರ ಆಗಿಲ್ಲ. ಆದರೆ ಚಿತ್ರದ ಕಥೆ ಈಗಾಗಲೇ ರೆಡಿ ಇದ್ದು, ಪ್ರಿ-ಪ್ರೊಡಕ್ಷನ್ಸ್ ಸೇರಿದಂತೆ ಇನ್ನಿತರೇ ಕೆಲಸಗಳನ್ನು ವಾಸು ಅವರು ಈಗಾಗಲೇ ಶುರುಹಚ್ಚಿಕೊಂಡಿದ್ದಾರೆ.


Shiva Rajkumar and director P Vasu to team up again

ಸದ್ಯಕ್ಕೆ ಶಿವಣ್ಣ ಮತ್ತು ವಾಸು ಅವರ 'ಶಿವಲಿಂಗ' ಹಿಟ್ ಆಗಿರುವುದರಿಂದ ಮುಂದಿನ ಸಿನಿಮಾ 'ರಾಬಿನ್ ಹುಡ್' ಬಗ್ಗೆ ಕೊಂಚ ಕುತೂಹಲ ಜಾಸ್ತೀನೇ ಇದೆ. ಇನ್ನು ವಾಸು ಅಂಡ್ ಗ್ರೂಪ್ ನಿಂದ ಸದ್ಯಕ್ಕೆ ಬಂದಿರುವ ಮಾಹಿತಿ ಇಷ್ಟು. ಹೆಚ್ಚಿನ ಮಾಹಿತಿಗಾಗಿ ಫಿಲ್ಮಿಬೀಟ್ ಕನ್ನಡ ನೋಡುತ್ತಿರಿ.

English summary
Kannada Actor Shiva Rajkumar and 'Shivalinga' fame director P Vasu to team up again in the new project 'Robin Hood'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada