'ಭಜರಂಗಿ-2' ನಂತರ ಹರ್ಷ ಜೊತೆ ಶಿವಣ್ಣನ ಹೊಸ ಚಿತ್ರ, ಟೈಟಲ್ ಫಿಕ್ಸ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಷನ್‌ನಲ್ಲಿ ಭಜರಂಗಿ 2 ಸಿನಿಮಾ ತಯಾರಾಗುತ್ತಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ.
ಭಜರಂಗಿ 2 ನಂತರ ಮತ್ತೊಮ್ಮೆ ಶಿವಣ್ಣ ಹಾಗು ಹರ್ಷ ಹೊಸ ಚಿತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಭಜರಂಗಿ, ವಜ್ರಕಾಯ, ಭಜರಂಗಿ 2 ಸಿನಿಮಾದ ಬಳಿಕ ನಾಲ್ಕನೇ ಪ್ರಾಜೆಕ್ಟ್ ಶುರು ಮಾಡಲಿರುವ ಹರ್ಷ ಈ ಚಿತ್ರಕ್ಕೆ ಮುತ್ತುರಾಯ ಎಂದು ಹೆಸರಿಡಲು ತೀರ್ಮಾನಿಸಿದ್ದಾರೆ.

ಈ ಹಿಂದಿ ಸಿನಿಮಾಗಳಲ್ಲಿ ಆಂಜನೇಯನ ಪರ್ಯಾಯ ಹೆಸರುಗಳನ್ನಿಟ್ಟು ಪ್ರೇಕ್ಷಕರ ಗಮನ ಸೆಳೆದಿದ್ದರು. ಆದ್ರೀಗ, ಅದರಿಂದ ಹೊರಗೆ ಬಂದು ಹೊಸದಾದ ಹೆಸರಡುವ ಪ್ರಯತ್ನದಲ್ಲಿದ್ದಾರೆ.
ಅಂದ್ಹಾಗೆ, ಮುತ್ತುರಾಯ ಎನ್ನುವುದು ಅಂತಿಮವಾಗಿಲ್ಲ. ಇದರ ಜೊತೆ ಇನ್ನೊಂದು ಟೈಟಲ್ ಪರ್ಯಾಯವಾಗಿ ಇಟ್ಟುಕೊಂಡಿದ್ದಾರೆ. ಒಂದು ವೇಳೆ ಈ ಶೀರ್ಷಿಕೆ ಸೂಕ್ತವೆನಿಸದೇ ಹೋದರೆ ಬೇರೆ ಟೈಟಲ್ ಬಳಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಭಜರಂಗಿ 2 ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಭಾರಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಮೂಲಗಳ ಪ್ರಕಾರ, 5.5 ಕೋಟಿ ಮೊತ್ತಕ್ಕೆ ಡಬ್ಬಿಂಗ್ ಹಕ್ಕು ಮಾರಾಟವಾಗಿದೆ ಎನ್ನಲಾಗಿದೆ. ಸೆಂಚುರಿ ಸ್ಟಾರ್ ಚಿತ್ರಗಳ ಪೈಕಿ ಭಜರಂಗಿ 2 ಚಿತ್ರದ ಹಿಂದಿ ಡಬ್ಬಿಂಗ್ ಹೆಚ್ಚು ಬೆಲೆಗೆ ಸೇಲ್ ಆಗಿದೆಯಂತೆ.
ಸದ್ಯ, ಭಜರಂಗಿ 2 ಚಿತ್ರೀಕರಣ ಮುಗಿದಿದೆ. ಬಹುಶಃ ಜನವರಿಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಇದೆ. ಮತ್ತೊಂದೆಡೆ ನಾಲ್ಕನೇ ಚಿತ್ರವನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











