»   » ಶಿವರಾಜ್ ಕುಮಾರ್ ಗೆ ಅಭಿಮಾನಿಗಳು ಹೀಗೂ ಇರ್ತಾರೆ..!

ಶಿವರಾಜ್ ಕುಮಾರ್ ಗೆ ಅಭಿಮಾನಿಗಳು ಹೀಗೂ ಇರ್ತಾರೆ..!

By: ಹರಾ
Subscribe to Filmibeat Kannada

''ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ವಯಸ್ಸಾಯ್ತು. ಇನ್ನು ಅವರು ಹೀರೋ ಆಗಿ ಆಕ್ಟ್ ಮಾಡಿದ್ದು ಸಾಕು. ಮಕ್ಕಳ ವಯಸ್ಸಿನ ನಟಿಯರ ಜೊತೆ ರೋಮ್ಯಾನ್ಸ್ ಮಾಡೋದು ಬಿಟ್ಟು, ಅವರು ಬೇರೆ ಏನಾದರೂ ಮಾಡಲಿ'' ಅಂತ ಹೇಳುವ ಮಂದಿ ಗಾಂಧಿನಗರದಲ್ಲಿದ್ದಾರೆ.

ಆದರೆ, ಶಿವರಾಜ್ ಕುಮಾರ್ ಅವರಿಗಿರುವ ಅಭಿಮಾನಿಗಳ ಸಂಖ್ಯೆ ಅಷ್ಟಿಷ್ಟಲ್ಲ. ಶಿವಣ್ಣನನ್ನ ಆರಾಧಿಸುವ ಭಕ್ತರು ಅಪಾರ. ಈಗಲೂ ಶಿವಣ್ಣನ ಸಿನಿಮಾವನ್ನ ಫಸ್ಟ್ ಡೇ ಫಸ್ಟ್ ಶೋ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರ್ತಾರೆ ಅನ್ನೋದಕ್ಕೆ ಕಣ್ಣಾರೆ ಕಂಡ ಒಂದು ನಿದರ್ಶನ ಹೇಳ್ತೀವಿ ಕೇಳಿ......

shivarajkumar-s-fan-craze-for-vajrakaya-release

ಅದು ಸದಾಶಿವನಗರ ಬಳಿ ಇರುವ ಸಿಗ್ನಲ್. ಅಲ್ಲಿ ಕಾರ್ ಒಂದರಲ್ಲಿ ತದೇಕಚಿತ್ತದಿಂದ ಒಬ್ಬರು ದಿನಪತ್ರಿಕೆ ಓದುತ್ತಿದ್ದರು. ಆಗ 'ಪೆನ್ ಕೊಂಡುಕೊಳ್ಳಿ ಸಾರ್' ಅಂತ ಇನ್ನೂ ಮುಖದಲ್ಲಿ ಮೀಸೆ ಚಿಗುರದ ಹುಡುಗ ಕಾರ್ ಹತ್ತಿರ ಬಂದ.

ಪೇಪರ್ ಹಿಂದೆ 'ವಜ್ರಕಾಯ' ಜಾಹೀರಾತು ಇತ್ತು. ಅದನ್ನ ನೋಡಿದ ತಕ್ಷಣ, ''ಯಾವಾಗ ಸಾರ್ ನಮ್ಮ ಬಾಸ್ ಪಿಕ್ಚರ್ರು? 12 ಕ್ಕಲ್ವಾ..? ಇನ್ನು 3 ದಿನ ಟೈಮ್ ಇದೆ. ಅಷ್ಟರಲ್ಲಿ ದುಡ್ಡು ಬರುತ್ತೆ, ಫಸ್ಟ್ ಡೇ ಫಸ್ಟ್ ಶೋ ನೋಡ್ಲೇಬೇಕು. ಜೈ ವಜ್ರಕಾಯ!'' ಅಂದುಬಿಟ್ಟ ಆ ಹುಡುಗ. [ಶಿವ ಕ್ಷೀರಾಭಿಷೇಕದಲ್ಲಿ ಮೇಲಿಂದ ಬಿದ್ದ ಅಭಿಮಾನಿ]

ಮೂರು ದಿನಗಳಲ್ಲಿ ಆತ ದುಡ್ಡು ಹೊಂದಿಸುವುದು ಹೇಗೆ ಅಂದ್ರೆ, ದಿನಕ್ಕೆ ಒಂದು ಬಂಡಲ್ ಪೆನ್ ಮಾರಿದರೆ ಆತನಿಗೆ ಸಿಗುವುದು 40 ರೂಪಾಯಿ. ಮೆಜೆಸ್ಟಿಕ್ ನಲ್ಲಿರುವ ಚಿತ್ರಮಂದಿರಗಳಲ್ಲಿ ಸೆಕೆಂಡ್ ಕ್ಲಾಸ್ ಟಿಕೆಟ್ ಬೆಲೆ 60 ರೂಪಾಯಿ. ದಿನಕ್ಕೆ ಒಂದು ಬಂಡಲ್ ಮಾರೋಕೆ ಆಗದೇ ಇದ್ದರೂ, ಎರಡು-ಮೂರು ದಿನಗಳಲ್ಲಿ ಮ್ಯಾನೇಜ್ ಮಾಡಬಹುದು ಅನ್ನೋದು ಆತನ ಲೆಕ್ಕಾಚಾರ. [ಅಸಹಾಯಕ ಹುಬ್ಬಳ್ಳಿ ಅಭಿಮಾನಿಗೆ ಶಿವಣ್ಣ ನೆರವು]

shivarajkumar-s-fan-craze-for-vajrakaya-release

ಫಸ್ಟ್ ಡೇ ಫಸ್ಟ್ ಶೋ ನೋಡಲು ದುಡ್ಡು ಹೊಂದಿಸುವುದಕ್ಕೆ ಆತ ಊಟ ಬಿಡುವುದಕ್ಕೂ ಸೈ, ಮನೆಗೆ ಸುಳ್ಳು ಹೇಳುವುದಕ್ಕೂ ಜೈ. ''ಹೇಗಾದರೂ ಮಾಡಿ, ಬಾಸ್ ಪಿಕ್ಚರ್ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು'' ಅನ್ನುವ ಹಂಬಲ ಆತನಿಗೆ. ಇದಕ್ಕೆ ಹುಚ್ಚು ಅಭಿಮಾನ ಅನ್ನುತ್ತೀರೋ ಅಥವಾ ಶಿವನ ಮೇಲಿರುವ ಭಕ್ತಿ ಅನ್ನುತ್ತೀರೋ ನಿಮಗೆ ಬಿಟ್ಟಿದ್ದು. [ಕ್ಯಾನ್ಸರ್ ರೋಗಿಗೆ ಮರುಜೀವ ಕೊಟ್ಟ ಹ್ಯಾಟ್ರಿಕ್ ಹೀರೋ]

ಒಟ್ನಲ್ಲಿ ಯಾರೇನೇ ಅಂದರೂ ಶಿವಣ್ಣನಿಗೆ ಈಗಲೂ ಕ್ರೇಜ್ ಸಿಕ್ಕಾಪಟ್ಟೆ ಇದೆ ಅನ್ನೋದಕ್ಕೆ ಇದೊಂದು ಪುಟ್ಟ ಉದಾಹರಣೆ ಅಷ್ಟೆ.

    English summary
    Kannada Movie 'Vajrakaya' is all set to release this week (June 12th). Many of Shivarajkumar's fans are eagerly waiting to watch 'Vajrakaya'. 'Filmibeat Kannada' witnessed one such Crazy fan of Shivarajkumar, who is counting days to watch the movie.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada