»   » ತ್ರಿಷಾ ಬರ್ತ್ ಡೇಯಲ್ಲಿ ಕಂಡ ಎಂಟನೇ ಅದ್ಭುತ!

ತ್ರಿಷಾ ಬರ್ತ್ ಡೇಯಲ್ಲಿ ಕಂಡ ಎಂಟನೇ ಅದ್ಭುತ!

Posted By: ರವಿಕಿಶೋರ್
Subscribe to Filmibeat Kannada

ಮೋಹಕ ತಾರೆ ತ್ರಿಷಾ ಕೃಷ್ಣನ್ ಬಾಳಿನಲ್ಲಿ ಇನ್ನೊಂದು ವರ್ಷ ಉರುಳಿಹೋಗಿದೆ. ಆದರೆ ಅವರ ವಯಸ್ಸು ಮಾತ್ರ ನಿಂತಲ್ಲೇ ನಿಂತು ಬಿಟ್ಟಿದೆ. ಮೇ.4ರಂದು ತಮ್ಮ ಹುಟ್ಟುಹಬ್ಬವನ್ನು ತನ್ನ ಗೆಳೆತಿಯರ ಜೊತೆ ಸೈಲೆಂಟಾಗಿ ಆಚರಿಸಿಕೊಂಡಿದ್ದಾರೆ.

ಈಗ ಆ ಫೋಟೋಗಳು ಲೀಕ್ ಆಗಿದ್ದು ತ್ರಿಷಾ ಜೊತೆಗಿದ್ದವರನ್ನು ನೋಡಿದರು ಮೂಗಿನ ಮೇಲೆ ಬೆರಳಿಡುವಂತಾಗಿದೆ. ಇಷ್ಟಕ್ಕೂ ತ್ರಿಷಾ ಬರ್ತ್ ಡೇಯಲ್ಲಿ ಕಂಡ ಎಂಟನೇ ಅದ್ಭುತ ಏನು? ಯಾರೆಲ್ಲಾ ಅವರ ಜನುಮ ದಿನದ ಸಂಭ್ರಮಕ್ಕೆ ಬಂದಿದ್ದರು?

ಇದಕ್ಕೂ ಮುನ್ನ ಒಂದು ಸಣ್ಣ ಸಂಗತಿಯನ್ನು ಹೇಳಿ ಸ್ಲೈಡ್ ನಲ್ಲಿ ಮತ್ತಷ್ಟು ವಿವರಗಳನ್ನು ನೋಡೋಣ. ಇಷ್ಟಕ್ಕೂ ತ್ರಿಷಾ ಆಚರಿಸಿಕೊಂಡದ್ದು ಎಷ್ಟನೇ ಹುಟ್ಟುಹಬ್ಬ. ತ್ರಿಷಾ ಬಾಳಿನಲ್ಲಿ ಇದು ಮೂವತ್ತೊಂದನೇ ದೀಪಾವಳಿ.

ಪುನೀತ್ ಜೊತೆ ದೂಕುಡು ರೀಮೇಕ್

ಸದ್ಯಕ್ಕೆ ತ್ರಿಷಾ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸುತ್ತಿದ್ದಾರೆ. ತೆಲುಗಿನ ಯಶಸ್ವಿ ಚಿತ್ರ 'ದೂಕುಡು' ರೀಮೇಕ್ ನಲ್ಲಿ ಅವರು ಪುನೀತ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬಕ್ಕೆ ಬಂದ ಮಾಜಿ ಲವರ್ಸ್

ತ್ರಿಷಾ ತಮ್ಮ ಹುಟ್ಟುಹಬ್ಬಕ್ಕೆ ಸಿಂಬು, ನಯನತಾರಾ, ಅಮಲಾ ಪೌಲ್, ಶಬೀನಾ ಖಾನ್, ಸೋನಿಯಾ ಅಗರವಾಲ್, ರಮ್ಯಾ ಕೃಷ್ಣ ಸೇರಿದಂತೆ ಹಲವರನ್ನು ಆಹ್ವಾನಿಸಿದ್ದರು. ಆದರೆ ಹಂಸಿಕಾ ಮೋಟ್ವಾನಿ ಗೈರುಹಾಜರಾಗಿದ್ದರು.

ಹಿಂಬಾಗಿಲಿನಿಂದ ಬಂದ ಮಾಜಿ ಪ್ರೇಮಿಗಳು

ಈ ಬರ್ತ್ ಡೇಯಲ್ಲಿ ನಡೆದ ಎಂಟನೇ ಅದ್ಭುತ ಎಂದರೆ ಇಬ್ಬರು ಮಾಜಿ ಪ್ರೇಮಿಗಳು ಒಂದಾಗಿದ್ದು. ಅವರು ಬೇರಾರು ಅಲ್ಲ ಸಿಂಬು ಹಾಗೂ ನಯನತಾರಾ. ಇವರಿಬ್ಬರೂ ತ್ರಿಷಾ ಬರ್ತ್ ಡೇ ಪಾರ್ಟಿಗೆ ಹಿಂಬಾಗಿಲಿನಿಂದ ಬಂದು ಅಲ್ಲಿಂದಲೇ ಹೊರಹೋಗಿದ್ದಾರೆ.

ಪ್ರಭುದೇವ ಜೊತೆ ಸಂಬಂಧ ಮುರಿದ ಮೇಲೆ

ಆದರೆ ಫೋಟೋಗಳು ಮಾತ್ರ ಅವರದೇ ಗುಂಪಿನ ಇನ್ಯಾರೋ ಲೀಕ್ ಮಾಡಿದ್ದಾರೆ. ಸಿಂಬು ಜತೆ ಬ್ರೇಕ್ ನಂತರ ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಜತೆ ಕುಣಿಯಲು ಕಾಡಿ ಬೇಡಿ ಕಣ್ಣೀರಿಟ್ಟು ನಯನಿ ಬಂದಿದ್ದರು. ಪ್ರಭುದೇವ ಸಂಸಾರ ತಾಪತ್ರಯಗಳನ್ನು ಮೀರಿ ನಯನಿಯನ್ನು ಒಪ್ಪಿಕೊಂಡಿದ್ದ. ನಯನಿ ಕೂಡಾ ಕ್ರೈಸ್ತಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಪ್ರಭು ಜತೆ ಇನ್ನೇನು ಸಪ್ತಪದಿ ಇಡುತ್ತಾಳೆ ಎನ್ನುವಷ್ಟರಲ್ಲಿ ಮತ್ತೆ ಎಡವಿದ ಸುದ್ದಿ ಗೊತ್ತೇ ಇದೆ.

ನಯನಿಗೆ ಹಳೆ ಬಾಯ್ ಫ್ರೆಂಡೇ ಗತಿನಾ?

ಈಗ ಮತ್ತೆ ನಯನಿ ಹಾಗೂ ಸಿಂಬು ಒಂದಾದರೆ? ನಯನಿಗೆ ಹಳೆ ಬಾಯ್ ಫ್ರೆಂಡ್ ಮತ್ತೆ ಹತ್ತಿರವಾಗಿದ್ದಾನಾ? ಎಂಬ ಪ್ರಶ್ನೆಗಳು ಕೋಲಿವುಡ್ ನಲ್ಲಿ ಬಹಳ ಸದ್ದು ಮಾಡುತ್ತಿವೆ.

ಬರ್ತ್ ಡೇಯಲ್ಲಿ ಅಂಟಿಕೊಂಡೇ ಓಡಾಡಿದರು

ತ್ರಿಷಾ ಬರ್ತ್ ಡೇ ಸಂಭ್ರಮದಲ್ಲಿ ನಯನಿ ಹಾಗೂ ಸಿಂಬು ಇನ್ನಷ್ಟು ಹತ್ತಿರವಾಗಿದ್ದಾರೆ. ಇಬ್ಬರೂ ಅಂಟಿಕೊಂಡೇ ಓಡಾಡುತ್ತಿರುವ ಫೋಟೋಗಳು ಈಗ ಬಿಸಿಬಿಸಿ ದೋಸೆಯಾಗಿವೆ.

ಇಬ್ಬರ ನಡುವೆ ಇನ್ನೂ ಬೆಳಗುತ್ತಿರುವ ಪ್ರೇಮಜ್ಯೋತಿ

ಜ್ಯೂ ರಜನಿ ಎಂದೇ ಚಿಕ್ಕಂದಿನಲ್ಲಿ ಖ್ಯಾತಿ ಗಳಿಸಿದ್ದ ಸಿಂಬು ಹಾಗೂ ನಯನಿ ನಡುವೆ ಎಲ್ಲೆ ಮೀರಿದ ಪ್ರೇಮ ಇತ್ತು ಎಂಬುದು ಬೆತ್ತಲಾಗಿರುವ ಸತ್ಯ.

ಹಳೆ ಪ್ರೇಮಿಗಳನ್ನು ಒಂದು ಮಾಡಿ ಗೆಳೆಯರು

ಹಳೆ ಪ್ರೇಮಿಗಳು ಮತ್ತೆ ಕಲೆತು ಬೆರೆತು ಖುಷಿಯಾಗಿದ್ದನ್ನು ಕಂಡ ಗೆಳೆಯರು ಅವರನ್ನು ಕೆಲ ಕಾಲ ಏಕಾಂತ ಕಲ್ಪಿಸಿದ್ದಾರೆ. ಯಾರೊಬ್ಬರೂ ಇಬ್ಬರ ಹಳೆ ಕಥೆ ಕೆದಕದೆ ಸಂತೋಷ ಕೂಟದಲ್ಲಿ ಸಂತಸ ಭಂಗವಾಗದಂತೆ ನೋಡಿಕೊಂಡರು ಎನ್ನಲಾಗಿದೆ.

English summary
Trisha Krishnan celebrated her 31st birthday on May 4. The actress had invited her close friends from Tamil film industry for the birthday. The actress celebrated by cutting cake at midnight 12. Simbu, Nayantara, Amala Paul, Shabina Khan, Priya Manikandan, Sonia Aggarwal, Sydney Sladen, Ramya Krishna, Pavithra and many others were present at the Trisha's party.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada