Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮದುವೆ ಡೇಟ್ ಹೇಳಲು ನಟ ಸಿಂಬು ಸಜ್ಜು: ನಿಧಿ ಅಗರ್ವಾಲ್ ಡೇಟಿಂಗ್ ಲಿಸ್ಟ್ ಔಟ್!
ಸಿನಿಮಾ ರಂಗದಲ್ಲಿ ದಿನಕ್ಕೊಂದು ಹೊಸ ಲವ್ ಸ್ಟೋರಿ ಹುಟ್ಟಿಕೊಳ್ಳುತ್ತೆ. ನಟ, ನಟಿಯರ ಪ್ರೇಮ್ ಕಹಾನಿಗಳು ಬೆಂಕಿ ಮುಚ್ಚಿದ ಕೆಂಡದಂತೆ ಇರುತ್ತದೆ. ಗಾಸಿಪ್ ಹರಿದಾಡಿದರು, ಸ್ಪಷ್ಟನೆ ಸಿಗುವುದಿಲ್ಲ. ಈಗ ಈ ಸಾಲಿಗೆ ನಟ ಸಿಂಬು ಮತ್ತು ನಟಿ ನಿಧಿ ಅಗರ್ವಾಲ್ ಕೂಡ ಸೇರಿ ಕೊಂಡಿದ್ದಾರೆ. ಈ ಜೋಡಿ ಪ್ರೀತಿಯಲ್ಲಿ ಬಿದ್ದಿದೆ ಎನ್ನುವ ವಿಚಾರ ಹಲವು ದಿನಗಳಿಂದ ಹರಿದಾಡುತ್ತಿದೆ.
ನಟ ಸಿಂಬು ತಮಿಳು ಚಿತ್ರರಂಗದ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂದು ಕರೆಸಿಕೊಳ್ಳುತ್ತಾರೆ. ಆದರೆ ನಟಿ ನಿಧಿ ಅಗರ್ವಾಲ್‌ಗೆ ಸಿಂಬು ಬೋಲ್ಡ್ ಆಗಿದ್ದಾರೆ. ಸಿಂಗಲ್ ಆಗಿದ್ದ ಸಿಂಬು ಈಗ ಜಂಟಿ ಆಗಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ಈ ವಿಚಾರದಲ್ಲಿ ಬಂದಿರುವ ಹೊಸ ಸುದ್ದಿ ಅಂದರೆ, ಸಿಂಬು ಮದುವೆ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿದ್ದಾರಂತೆ.
ಸಿಂಬು ಮತ್ತು ನಿಧಿ ಅವಗರ್ವಾಲ್ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ, ಎನ್ನುವ ವಿಚಾರ ಸದ್ಯ ಗಾಸಿಪ್ ರೂಪದಲ್ಲಿಯೇ ಹರಿದಾಡುತ್ತಿದೆ. ಈ ವಿಚಾರಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಆದರೂ ಕೂಡ ತೆರೆ ಮರೆಯಲ್ಲಿ ಸಿಂಬು ಮಾತ್ರ ಮದುವೆಯ ತಯಾರಿ ನಡೆಸಿದ್ದಾರಂತೆ.

ಸದ್ಯದಲ್ಲಿಯೇ ಮದುವೆ ದಿನಾಂಕ ಪ್ರಕಟಿಸಲಿರುವ ಸಿಂಬು!
ನಟ ಸಿಂಬು ಮತ್ತು ನಿಧಿ ಅಗರ್ವಾಲ್ ಇಬ್ಬರೂ ಸದ್ದಿಲ್ಲದೇ, ತೆರೆ ಮರೆಯಲ್ಲಿ ಮದುವೆ ತಯಾರಿ ನಡೆಸಿದ್ದಾರಂತೆ. ಇವರ ಲವ್ ಗಾಸಿಪ್ ಜೋರಾಗಿ ಹಬ್ಬಿದ್ದರೂ ಕೂಡ ಈ ಬಗ್ಗೆ ಎಲ್ಲೂ ಮಾತನಾಡದೆ, ಅದಾಗಲೆ ಮದುವೆಗೆ ತಯಾರಿ ನಡೆಸಿದ್ದಾರೆ. ಸದ್ಯದಲ್ಲಿಯೇ ಸಿಂಬು ತಮ್ಮ ಮದುವೆ ದಿನಾಂಕವನ್ನೂ ಕೂಡ ಪ್ರಕಟ ಮಾಡಲಿದ್ದಾರಂತೆ. ಈ ಬಗ್ಗೆ ಕಾಲಿವುಡ್‌ನಲ್ಲಿ ಸುದ್ದಿ ಹಬ್ಬಿದೆ.

ಮದುವೆ ಸಮಾಚಾರದ ಬೆನ್ನಲ್ಲೇ ನಿಧಿ ಡೆಟಿಂಗ್ ಸೀಕ್ರೆಟ್ ಔಟ್!
ನಟಿ ನಿಧಿ ಅಗರ್ವಾಲ್, ಸಿಂಬು ಜೊತೆಗೆ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಬಂದ ಬೆನ್ನಲ್ಲೇ, ನಟಿ ನಿಧಿ ಅವರ ಬಗ್ಗೆ ಹೊಸ ಗಾಸಿಪ್ ಹಬ್ಬಿದೆ. ನಟಿ ನಿಧಿ ಅಗರ್ವಾಲ್ ಯಾವೆಲ್ಲಾ ನಟರ ಜೊತೆಗೆ ಡೇಟಿಂಗ್ ಮಾಡಿದ್ದರು ಎನ್ನುವ ಲಿಸ್ಟ್ ಹೊರ ಬಿದ್ದಿದೆ. ನಟಿ ನಿಧಿ ಅಗರ್ವಾಲ್ 2017ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಸಿಂಬು ಜೊತೆಗೆ ಮದುವೆಗೆ ಸಜ್ಜಾಗಿರುವ ನಿಧಿ ಹೆಸರು ಬಾಲಿವುಡ್ ನಟ ಮತ್ತು ಕ್ರಿಕೆಟಿಗನ ಜೊತೆಗೆ ಕೇಳಿ ಬಂದಿದೆ.

ಟೈಗರ್ ಶ್ರಾಫ್, ಕೆ.ಎಲ್ ರಾಹುಲ್ ಜೊತೆ ನಿಧಿ ಡೇಟಿಂಗ್?
ನಿಧಿ ಅಗರ್ವಾಲ್ 2017 ರಲ್ಲಿ ಬಿಡುಗಡೆಯಾದ ಟೈಗರ್ ಶ್ರಾಫ್ ಅಭಿನಯದ 'ಮುನ್ನಾ ಮೈಕೆಲ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಚಿತ್ರ ಶುರುವಾದ ಬೆನ್ನಲ್ಲೇ ನಿಧಿ ಮತ್ತು ಟೈಗರ್ ಶ್ರಾಫ್ ಹೆಸರು ಡೇಟಿಂಗ್ ವಿಚಾರದಲ್ಲಿ ಸದ್ದು ಮಾಡೋಕೆ ಶುರು ಮಾಡಿತು. ಇದರಿಂದ ದಿಶಾ ಪಟಾನಿ ಮತ್ತು ಟೈಗರ್ ನಡುವೆ ಸಮಸ್ಯೆ ಸೃಷ್ಟಿಯಾಗಿತ್ತಂತೆ. ನಂತರ ನಿಧಿ ಅಗರ್ವಾಲ್ ಹೆಸರು ಕೆಎಲ್ ರಾಹುಲ್ ಜೊತೆಗೆ ತಳುಕು ಹಾಕಿಕೊಂಡಿತು. ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರೊಂದಿಗೆ ಮುಂಬೈನ ಹೋಟೆಲ್ ಒಂದರಲ್ಲಿ ನಿಧಿ ಕಾಣಿಸಿಕೊಂಡಿದ್ದರು. ಬಳಿಕ ಊಟಕ್ಕೆ ಹೋಗಿದ್ದೆವು, ಡೇಟಿಂಗ್ ಅಲ್ಲ ಎಂದಿದ್ದರು ನಿಧಿ.

ಒಂದೇ ಮನೆಯಲ್ಲಿ ವಾಸ: ಲಿವ್ ಇನ್ ರಿಲೇಷನ್‌ನಲ್ಲಿ ಸಿಂಬು, ನಿಧಿ?
ಈಗ ನಿಧಿ ಅಗರ್ವಾಲ್ ಮತ್ತು ಸಿಂಬು ಜೋಡಿಯಾಗಿದ್ದಾರಂತೆ. ಈಶ್ವರನ್ ಸಿನಿಮಾದ ವೇಳೆ ಇವರ ನಡುವೆ ಪ್ರೇಮಾಂಕುರವಾಗಿದೆಯಂತೆ. ಪ್ರೀತಿ ಪ್ರೇಮ ಅಲ್ಲ, ಈ ಜೋಡಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದೆಯಂತೆ. ಹಾಗಾಗಿ ಸಿಂಬು ಮತ್ತು ನಿಧಿ ಹಲವು ದಿನಗಳಿಂದ ಒಂದೇ ಮನೆಯಲ್ಲಿ ವಾಸ ಇದ್ದಾರಂತೆ. ಮದುವೆ ಆಗಲು ನಿರ್ಧರಿಸಿದ್ದಾರಂತೆ. ಸದ್ಯದಲ್ಲಿಯೇ ಮದುವೆ ಸುದ್ದಿ ನೀಡಲಿದೆ ಈ ತಾರಾ ಜೋಡಿ.