For Quick Alerts
  ALLOW NOTIFICATIONS  
  For Daily Alerts

  ಮೇಕಪ್ ಇಲ್ಲದ ಪಾತ್ರ ನನಗಿಷ್ಟ: 'ಡ್ರಾಮಾ' ಸಿಂಧು

  |

  ಸದ್ಯಕ್ಕೆ ಯೋಗರಾಜ್ ಭಟ್ಟರ 'ಡ್ರಾಮಾ'ದಲ್ಲಿ ಮೂಕಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸಿಂಧು ಲೋಕನಾಥ್. ಈ ಮೊದಲು, ದಿಗಂತ್ ನಾಯಕತ್ವ ಹಾಗೂ ಭಟ್ಟರ ಶಿಷ್ಯ ಪವನ್ ಕುಮಾರ್ 'ಲೈಫು ಇಷ್ಟೇನೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಜಗತ್ತಿಗೆ ಪರಿಯವಾದ ಸಿಂಧು, ಬಿಚ್ಚಮ್ಮನಾಗಲು ಒಪ್ಪಲಾರೆ ಎಂದ ಬಹಿರಂಗವಾಗಿ ಹೇಳಿದ ನಟಿ. ಈಗಲೂ ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಹೇಳುತ್ತಲೇ ಇರುತ್ತಾರೆ.

  ಈಗ ಹೊಸ ಸುದ್ದಿಯೆಂದರೆ ಈ ಸಿಂಧು " ಗ್ಲಾಮರ್ ಓಕೆ, ಎಕ್ಸ್‌ಪೋಸ್ ಯಾಕೆ?" ಎಂದಿದ್ದಾರೆ. ಸಿಂಧುವಿಗೆ ಎಕ್ಸ್‌ಪೋಸ್ ಹಾಗಿರಲಿ, ಅತಿ ಸುಂದರವಾಗಿ ಕಾಣಬೇಕೆಂದು ಗಂಟೆಗಟ್ಟಲೆ ಮೇಕಪ್ ಮಾಡಿಸಿಕೊಳ್ಳಲೂ ಹಿಂಸೆಯಂತೆ. ಹೀಗಾಗಿ ಮೇಕಪ್ ಇಲ್ಲದ ಪಾತ್ರವೆಂದರೆ ತುಂಬಾ ಇಷ್ಟ. ಆದರೂ "ಗ್ಲಾಮರ್ ಎಂದರೆ ಸೌಂದರ್ಯದ ಮುಂದಿನ ಹಂತ. ಅದಕ್ಕೆ ನಾನು ರೆಡಿ. ಆದರೆ ಅದು ಅಶ್ಲೀಲ ಎನ್ನುವಂತಿರಬಾರದು" ಎಂದಿದ್ದಾರೆ.

  "ಕಡಿಮೆ ಬಟ್ಟೆ ಹಾಕಿಕೊಂಡರೆ ಡಿಮ್ಯಾಂಡ್ ಜಾಸ್ತಿ ಅನ್ನೋದನ್ನು ನಾನು ಒಪ್ಪಲಾರೆ. ಅಂತಹ ಚಿತ್ರಗಳ ಅಗತ್ಯ ನನಗಿಲ್ಲ. ಬದಲಿಗೆ, ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಮಾಡಿಕೊಡುವ ಪಾತ್ರಗಳಲ್ಲಿ ನಟಿಸುವಾಸೆ" ಎನ್ನುವುದು ಸಿಂಧು ಮಾತು. ಮಡಿಕೇರಿ ಮೂಲದ ಈ ಬೆಡಗಿ, ಸದ್ಯಕ್ಕೆ ಡ್ರಾಮಾ, ಸ್ಯಾಂಡಲ್‌ವುಡ್ ಸರಿಗಮ, ನಮ್ ಲೈಫಲ್ಲಿ ಹಾಗೂ ಜೈ ಭಜರಂಗಬಲಿ ಚಿತ್ರಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Actress Sindhu Loknath agreed to act in Glamorous Role. But she rejects her involvement in Expose. She told that her preference is for homely role and not glamorous and exposing oriented role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X