For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಗಾಯಕ ಸಿದ್ ಶ್ರೀರಾಮ್ ಸಂಭಾವನೆ ಎಷ್ಟು ಗೊತ್ತಾ?

  |

  ಖ್ಯಾತ ಗಾಯಕ ಸಿದ್ ಶ್ರೀರಾಮ್ ಅವರು ಸದ್ಯ ಬಹುಭಾಷೆಗಳಲ್ಲಿ ಖ್ಯಾತಿ ಪಡೆದುಕೊಂಡಿರುವ ಗಾಯಕ. ಕನ್ನಡದಲ್ಲೂ ಕೂಡ ಸಿದ್ ಶ್ರೀರಾಮ್ ಹವಾ ಜೋರಾಗಿದೆ. ಇವರು ಹಾಡುವ ಬಹುತೇಕ ಹಾಡುಗಳು ಹಿಟ್ ಲಿಸ್ಟ್ ಸೇರಿ ಬಿಡುತ್ತವೆ. ಇನ್ನು ಇವರ ಧ್ವನಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ.

  ಹೆಚ್ಚು ಖ್ಯಾತಿ ಪಡೆದಿರುವ ಕಾರಣ ಸಿದ್ ಅವರಿಗೆ ಅಷ್ಟೇ ಹೆಚ್ಚು ಬೇಡಿಕೆ ಕೂಡ ಇದೆ‌. ಆದರೆ ಸಿದ್ ಶ್ರೀರಾಮ್ ಅವರು ಒಂದು‌ ಹಾಡಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಈ ವಿಚಾರ ಈಗ ಹೆಚ್ಚಾಗಿ ಸದ್ದು ಮಾಡುತ್ತಿದೆ. ಒಂದು ಹಾಡಿಗೆ ಈ ಗಾಯಕ ಲಕ್ಷ, ಲಕ್ಷ ಹಣ ಪಡೆಯುತ್ತಾರೆ.

  ಸಿದ್ ಶ್ರೀರಾಮ್ ಅವರು ಒಂದು ಹಾಡನ್ನು ಹಾಡಲು ಸುಮಾರು 5 ರಿಂದ‌ 7 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಒಂದು ಚಿತ್ರದಲ್ಲಿ ಎರಡು, ಮೂರು ಹಾಡು ಹಾಡಿದರೆ, ಎಲ್ಲದಕ್ಕೂ ಪ್ರತ್ಯೇಕವಾಗಿ ಹಣ ಪಡೆಯುತ್ತಾರಂತೆ. ಈ ಸುದ್ದಿ ಸದ್ಯ ಟಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

  ಅಲಾ ವೈಕುಂಠ ಪುರಮುಲೊ ಚಿತ್ರದ 'ಸಾಮಜವರಗಮನ', ಟ್ಯಾಕ್ಸಿವಾಲ ಚಿತ್ರದ 'ವಿನದುಗ', ಪುಷ್ಪ ಚಿತ್ರದ 'ಶ್ರೀವಲ್ಲಿ' ಕನ್ನಡದ 'ಹಾಯಾಗಿದೆ', ಭಜರಂಗಿ ಚಿತ್ರದ 'ನೀ ಸಿಗೊವರೆಗೂ' ಸೇರಿದಂತೆ ಹಲವು ಹಾಡುಗಳನ್ನು ಸಿದ್ ಶ್ರೀರಾಮ್ ಅವರು ಹಾಡಿದ್ದಾರೆ.

  ಇನ್ನು ಇತ್ತೀಚೆಗೆ ಇವರು ನಾಯಕ ನಟ ಆಗುತ್ತಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸಿನಿಮಾದಲ್ಲಿ ಸಿದ್ ಶ್ರೀರಾಮ್ ನಾಯಕ ನಟನಾಗಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಸಿದ್ ಶ್ರೀರಾಮ್ ಅವರಿಗೆ ಅವರ ಧ್ವನಿ ವರವಾಗಿದೆ. ಅವರು ಸಿನಿಮಾರಂಗಕ್ಕೆ ಬಂದು ಕಡಿಮೆ ಸಮಯದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ.

  Singer sid Sriram Taking Huge Remuneration For Song

  ಸಿದ್ ಶ್ರೀರಾಮ್ ಈಗಾಗಲೇ ನಟನಾಗಿ ಅಭಿನಯಿಸಲು ಒಪ್ಪಂದಕ್ಕೆ ಸಹಿ ಮಾಡದ್ದಾರಂತೆ. ಅದೂ ಮಣಿರತ್ನಂ ಸಿನಿಮಾಕ್ಕಾಗಿಯೇ. ಆದರೆ ಸಿದ್ ಶ್ರೀರಾಮ್ ನಟಿಸಲಿರುವ ಸಿನಿಮಾವನ್ನು ಮಣಿರತ್ನಂ ನಿರ್ಮಾಣ ಮಾಡಲಿದ್ದಾರೆಯೇ ಅಥವಾ ಕೇವಲ ನಿರ್ದೇಶನ ಮಾಡಲಿದ್ದಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ಮೊದಲು ಕೇವಲ ಗಾಯಕರಾಗಿದ್ದ ಸಿದ್ ಶ್ರೀರಾಮ್ ಅನ್ನು ಸಂಗೀತ ನಿರ್ದೇಶಕರನ್ನಾಗಿ ಮಾಡಿದ್ದು ಮಣಿರತ್ನಂ ಅವರು. ಮಣಿರತ್ನಂ ಚಿತ್ರಕತೆ ಬರೆದು, ನಿರ್ಮಾಣ ಮಾಡಿದ್ದ 'ವಾನಮ್ ಕೊಟ್ಟತುಮ್' ಸಿನಿಮಾದಲ್ಲಿ ಸಿದ್ ಶ್ರೀರಾಮ್ ಮೊದಲ ಬಾರಿಗೆ ಹಿನ್ನೆಲೆ ಸಂಗೀತ ನೀಡುವ ಜೊತೆಗೆ ಹಾಡುಗಳನ್ನೂ ಕಂಪೋಸ್ ಮಾಡಿದ್ದರು.

  English summary
  Do You Know How Much Singer Sid Sriram Remuneration For Song.
  Tuesday, January 25, 2022, 11:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X