»   » ಚಿರಂಜೀವಿ ಪುತ್ರನಿಗೆ ಸೋನಾಕ್ಷಿ ಮೇಲೆ ಮನಸ್ಸು

ಚಿರಂಜೀವಿ ಪುತ್ರನಿಗೆ ಸೋನಾಕ್ಷಿ ಮೇಲೆ ಮನಸ್ಸು

Posted By:
Subscribe to Filmibeat Kannada

ಸಲ್ಮಾನ್ ಖಾನ್ ಕೃಪೆಯಿಂದ ಬಾಲಿವುಡ್ ಗೆ ಕಾಲಿಟ್ಟ ಸೋನಾಕ್ಷಿ ಸಿನ್ಹಾಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಬಾಲಿವುಡ್ ನಿಂದ ರಜನಿಕಾಂತ್ ಗಾಗಿ ಕಾಲಿವುಡ್ ಗೆ ಇಳಿದು ಬಂದಿರುವ ಸೋನಾಕ್ಷಿಗೆ ತಮಿಳಿನಲ್ಲಿ ಬರುತ್ತಿರುವ ಆಫರ್ ಗಳು ಒಂದೆರಡಲ್ಲ.

'ಲಿಂಗಾ' ಚಿತ್ರ ಏಕಕಾಲಕ್ಕೆ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗುತ್ತಿರುವುದರಿಂದ ಟಾಲಿವುಡ್ ಅಂಗಳಕ್ಕೂ ಸೋನಾಕ್ಷಿ ಪದಾರ್ಪಣೆ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ 'ಲಿಂಗಾ' ಚಿತ್ರದ ಟ್ರೇಲರ್ ಮತ್ತು ಹಾಡುಗಳಲ್ಲಿ ತೆಳ್ಳಗಾಗಿರುವ ಸೋನಾಕ್ಷಿಯ ವನುಪು ವೈಯ್ಯಾರ ನೋಡಿ ಟಾಲಿವುಡ್ ನ ಹೆಸರಾಂತ ನಿರ್ದೇಶಕರು ಕ್ಲೀನ್ ಬೌಲ್ಡ್ ಆಗಿದ್ದಾರಂತೆ.

Sonakshi Sinha to make Tollywood Debute with Ram Charan Teja1

ಅಂತಹ ನಿರ್ದೇಶಕರಲ್ಲಿ 'ಆಗಡು' ಚಿತ್ರದ ಡೈರೆಕ್ಟರ್ ಶ್ರೀನು ವೈಟ್ಲಾ ಕೂಡ ಒಬ್ಬರು. ಭಾಷೆ ಬಾರದಿದ್ದರೂ ಸೋನಾಕ್ಷಿಯ ಹಾವಭಾವವನ್ನು ನೋಡಿ ಮೆಚ್ಚಿಕೊಂಡಿರುವ ಶ್ರೀನು, ತಾವು ನಿರ್ದೇಶಿಸುತ್ತಿರುವ ರಾಮ್ ಚರಣ್ ತೇಜಾ ಅಭಿನಯದ ಚಿತ್ರಕ್ಕೆ ಸೋನಾಕ್ಷಿಯನ್ನ ನಾಯಕಿಯನ್ನಾಗಿ ಮಾಡುವ ಮನಸ್ಸು ಮಾಡಿದ್ದಾರಂತೆ. [ನಾಟ್ಯ ಮಯೂರಿ ಸೋನಾಕ್ಷಿ ಸಿನ್ಹಾ ಖತರ್ನಾಕ್ ಡಾನ್ಸ್]

ಈ ಬಗ್ಗೆ ಆಗಲೇ ಮೆಗಾಸ್ಟಾರ್ ಚಿರಂಜೀವಿ ಪುತ್ರ ಚೆರ್ರಿ ಜೊತೆ ಶ್ರೀನು ಮಾತುಕತೆ ಮಾಡಿದ್ದಾರಂತೆ. ಸೋನಾಕ್ಷಿಯ ಎಲ್ಲಾ ಸಿನಿಮಾಗಳನ್ನೂ ಬಿಡದೆ ನೋಡಿರುವ ರಾಮ್ ಚರಣ್, ಆಕೆಯೊಂದಿಗೆ ರೋಮ್ಯಾನ್ಸ್ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ.

Sonakshi Sinha to make Tollywood Debute with Ram Charan Teja3

ಶ್ರೀನು ವೈಟ್ಲಾ ಕ್ಯಾಂಪಿನ ಮೂಲಗಳ ಪ್ರಕಾರ ರಾಮ್ ಚರಣ್ ಅಭಿನಯದ ಚಿತ್ರಕ್ಕಾಗಿ ಸೋನಾಕ್ಷಿಗೆ ಅಧಿಕೃತವಾಗಿ ಆಫರ್ ಮಾಡಿದ್ದಾಗಿದೆ. ಆದ್ರೆ ಸೋನಾಕ್ಷಿ ಕಡೆಯಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಒಂದು ವೇಳೆ ಸೋನಾಕ್ಷಿ ಒಪ್ಪಿಕೊಂಡರೆ, ಬಾಲಿವುಡ್ ಬಿಟ್ಟು ದಕ್ಷಿಣದಲ್ಲೇ ಸೆಟಲ್ ಆಗುವ ಸಾಧ್ಯತೆಗಳೇ ಹೆಚ್ಚು. (ಏಜೆನ್ಸೀಸ್)

English summary
Dabbang Actress Sonakshi Sinha is in news for her Kollywood Debute through Lingaa. Now, it is heard that Sonakshi Sinha is gearing up for her Tollywood Debute opposite Ram Charan Teja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada