»   » 'ಚಂಬಲ್ ರಾಣಿ'ಯಾದ ನಟಿ ಸೋನು ಗೌಡ

'ಚಂಬಲ್ ರಾಣಿ'ಯಾದ ನಟಿ ಸೋನು ಗೌಡ

Written By:
Subscribe to Filmibeat Kannada

ತಮ್ಮ ಗಂಡನ ಜೊತೆ ಆತ್ಮೀಯವಾಗಿದ್ದ ಹಳೇ ಫೋಟೋಗಳು, ವಾಟ್ಸಾಪ್ ಮತ್ತು ಫೇಸ್ ಬುಕ್ಕಿನಲ್ಲಿ ಲೀಕ್ ಆಗಿ ಸುದ್ದಿಯಾಗಿದ್ದ ನಟಿ ಸೋನು ಗೌಡ, ಈಗ ಸದ್ದಿಲ್ಲದೇ ಹೊಸ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ಜಾಕಬ್ ವರ್ಗೀಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಚಂಬಲ್' ಚಿತ್ರಕ್ಕೆ ನಟಿ ಸೋನು ಗೌಡ ನಾಯಕಿಯಾಗಿದ್ದಾರೆ ಎಂಬ ಮಾಹಿತಿ ಇತ್ತೀಚಿಗಷ್ಟೇ ಬಹಿರಂಗವಾಗಿದೆ.

ನೀನಾಸಂ ಸತೀಶ್ ಅಭಿನಯದ 'ಚಂಬಲ್' ಚಿತ್ರ ಈಗಾಗಲೇ ಚಿತ್ರೀಕರಣ ಮಾಡುತ್ತಿದ್ದು, ಸೋನು ಗೌಡ ಕೂಡ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರಂತೆ.['ಸವಾರಿ' ನಿರ್ದೇಶಕರ ಜೊತೆ 'ಕ್ವಾಟ್ಲೆ' ಸತೀಶ್ 'ಚಂಬಲ್'ಗೆ ಪಯಣ]

ಸದ್ಯ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಬಿಡುಗಡೆಗೆ ಸಿದ್ದವಾಗಿರುವ ನೀನಾಸಂ ಸತೀಶ್ ಹಾಗೂ 'ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿ ಅಭಿನಯಿಸುತ್ತಿರುವ ಸೋನು ಗೌಡ 'ಚಂಬಲ್' ಚಿತ್ರದಲ್ಲಿ ಡ್ಯುಯೆಟ್ ಹಾಡುತ್ತಿದ್ದಾರೆ. ಮುಂದೆ ಓದಿ....

'ಚಂಬಲ್' ಚಿತ್ರಕ್ಕೆ ನಾಯಕಿ ಫಿಕ್ಸ್

ನಾಯಕಿ ಯಾರು ಅಂತ ತಿಳಿಸದೆ ಶೂಟಿಂಗ್ ಮಾಡುತ್ತಿದ್ದ 'ಚಂಬಲ್' ಚಿತ್ರದ ಅಡ್ಡಾದಿಂದ ನಾಯಕಿ ಹೆಸರು ಅಂತಿಮವಾಗಿದೆ. ನಟಿ ಸೋನು ಗೌಡ ಈ ಚಿತ್ರದ ಹೀರೋಯಿನ್ ಆಗಿದ್ದಾರಂತೆ.[ಕಿಡಿಗೇಡಿಯಿಂದ ನಟಿಯ ಖಾಸಗಿ ಫೋಟೋ ಲೀಕ್, ದೂರು ದಾಖಲಿಸಿದ ನಟಿ]

ನೀನಾಸಂ ಸತೀಶ್ ಜೊತೆ ಸೋನು

'ಚಂಬಲ್' ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಸೀನಾಸಂ ಸತೀಶ್ ಹಾಗೂ ಸೋನು ಗೌಡ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ, ಹೊಸ ಜೋಡಿಗಳ ಚಿತ್ರದ ಮೇಲೆ ಭರವಸೆ ಮೂಡಿದೆ.

'ಸವಾರಿ' ಖ್ಯಾತಿಯ ನಿರ್ದೇಶಕ

'ಸವಾರಿ', 'ಸವಾರಿ-2', 'ಫೃಥ್ವಿ' ಅಂತಹ ಸೂಪರ್ ಹಿಟ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ 'ಜಾಕಬ್ ವರ್ಗೀಸ್' 'ಚಂಬಲ್' ಚಿತ್ರಕ್ಕೆ, ಕಥೆ-ಚಿತ್ರಕಥೆಯ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.

ಬಹುತೇಕ ಶೂಟಿಂಗ್ ಕಂಪ್ಲೀಟ್

'ಯು ಟರ್ನ್' ಖ್ಯಾತಿಯ ರೋಜರ್ ನಾರಯಣ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಗಿಸಿದ್ದಾರಂತೆ. ಅಂದ್ಹಾಗೆ, 'ಚಂಬಲ್' ಚಿತ್ರಕ್ಕೂ ಹಾಗೂ ಚಂಬಲ್ ಕಣಿವೆಗೂ ಯಾವುದೇ ರೀತಿಯ ಸಂಬಂಧವಿಲ್ಲವಂತೆ. ಚಿತ್ರಕಥೆಗೆ ಆ ಹೆಸರು ಸೂಕ್ತವಾದರಿಂದ ಈ ಟೈಟಲ್ ಇಡಲಾಗಿದೆಯಂತೆ.

ಸೋನು ಗೌಡ ಚಿತ್ರಗಳು

'ಇಂತಿ ನಿನ್ನ ಪ್ರೀತಿಯ', 'ಗೋವಾ', 'ಅಸ್ತಿತ್ವ', 'ಹಾಫ್ ಮೆಂಟ್ಲು' ಚಿತ್ರಗಳಲ್ಲಿ ನಟಿಸಿದ್ದ ಸೋನು ಗೌಡ, ಈಗ ಹೊಸ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. 'ಚಂಬಲ್' ಚಿತ್ರದ ಜೊತೆಗೆ, 'ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿ ಅಭಿನಯಿಸುತ್ತಿರುವ ಸೋನು ಗೌಡ, ಈಗ 'ಶರಾವತಿ ತೀರದಲ್ಲಿ' ಚಿತ್ರದ ಚಿತ್ರೀಕರಣವನ್ನ ಮುಗಿಸಿದ್ದಾರೆ.

English summary
Filmmaker Jacob Verghese, currently busy with his project 'Chambal' starring Sathish ninasam and kannada actress Sonu Gowda will play the female lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada