For Quick Alerts
  ALLOW NOTIFICATIONS  
  For Daily Alerts

  ಓಹೋ..! ರಜನಿಕಾಂತ್ ಪುತ್ರಿಯರ ತಲೆಯಲ್ಲಿ ಹೀಗೂ ಉಂಟು.!

  By Harshitha
  |

  'ಕಬಾಲಿ'...ಇದು ರಜನಿಕಾಂತ್ ಸಿನಿಮಾ ಅಲ್ಲ, ಇದರಲ್ಲಿ 'ತಲೈವಾ' ಸ್ಟೈಲ್ ಇಲ್ಲ, ಸಿಕ್ಕಾಪಟ್ಟೆ ಸ್ಲೋ - ಹೀಗಂತ ಮುಖ ತಿರುವಿದವರ ಸಂಖ್ಯೆ ಕಡಿಮೆ ಏನಿಲ್ಲ.

  ಅದಕ್ಕೂ ಮುನ್ನ ತೆರೆಕಂಡ 'ಕೊಚ್ಚಡಯಾನ್' ಚಿತ್ರಕ್ಕೂ ಸಿಕ್ಕ ಪ್ರತಿಕ್ರಿಯೆ ಆಲ್ಮೋಸ್ಟ್ ಹೀಗೆ ಇತ್ತು. ತೆರೆಮೇಲೆ ರಜನಿ ರಿಯಲ್ ರೂಪ ಕಂಡು ಶಿಳ್ಳೆ ಹೊಡೆಯುವ ಪ್ರೇಕ್ಷಕರಿಗೆ 'ಸೂಪರ್ ಸ್ಟಾರ್' ಆನಿಮೇಶನ್ ಅವತಾರ ನಿರಾಸೆ ತಂದಿತ್ತು. [ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

  'ಪಡೆಯಪ್ಪ', 'ಅರುಣಾಚಲಂ', 'ಭಾಷಾ' ದಂತಹ ಸಿನಿಮಾಗಳನ್ನ ನೋಡಿ ಚಪ್ಪಾಳೆ ತಟ್ಟಿದ 'ತಲೈವಾ' ಭಕ್ತರು ಸದ್ಯ ಅದೇ ತರಹದ ಚಿತ್ರಗಳನ್ನ ರಜನಿಕಾಂತ್ ರಿಂದ ನಿರೀಕ್ಷೆ ಮಾಡುತ್ತಿದ್ದಾರೆ. ಹೀಗಿರುವಾಗಲೇ, ರಜನಿಕಾಂತ್ ಸುಪುತ್ರಿಯರ ತಲೆಯಲ್ಲಿ ಒಂದು ಸೂಪರ್ ಸುಪ್ರೀಂ ಐಡಿಯಾ ಹೊಳೆದಿದೆ. ಮುಂದೆ ಓದಿ.....

  ಅಪ್ಪನಿಗಾಗಿ ಪುತ್ರಿಯರು ಸಿನಿಮಾ ಮಾಡ್ತಾರಂತೆ.!

  ಅಪ್ಪನಿಗಾಗಿ ಪುತ್ರಿಯರು ಸಿನಿಮಾ ಮಾಡ್ತಾರಂತೆ.!

  ಅಪ್ಪ ಸೂಪರ್ ಸ್ಟಾರ್ ರಜನಿಕಾಂತ್ ಗಾಗಿ ಪುತ್ರಿಯರಾದ ಸೌಂದರ್ಯ ಅಶ್ವಿನ್ ಮತ್ತು ಐಶ್ವರ್ಯ ಧನುಷ್ ಒಂದು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರದ ಕಥೆ ಏನು ಅಂತ ಗೊತ್ತಾದರೆ ನಿಮಗೆ ಸರ್ ಪ್ರೈಸ್ ಗ್ಯಾರೆಂಟಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ರಜನಿಕಾಂತ್ ಜೀವನಚರಿತ್ರೆ ಬೆಳ್ಳಿಪರದೆ ಮೇಲೆ.!

  ರಜನಿಕಾಂತ್ ಜೀವನಚರಿತ್ರೆ ಬೆಳ್ಳಿಪರದೆ ಮೇಲೆ.!

  ರಜನಿ ಸುಪುತ್ರಿಯರು ಮಾಡಿರುವ ಸೂಪರ್ ಸುಪ್ರೀಂ ಐಡಿಯಾ ಇದೇ. ಅಕ್ಕ-ತಂಗಿಯರಿಬ್ಬರು ಸೇರಿ ಅಪ್ಪ ರಜನಿಯ ಜೀವನಚರಿತ್ರೆಯನ್ನ ಬೆಳ್ಳಿಪರದೆ ಮೇಲೆ ತರ್ತಾರಂತೆ.! ['ಕಬಾಲಿ' ಬಗ್ಗೆ ಹೊಸ ಸುದ್ದಿ ಓದುವ ಮುನ್ನ ಉಸಿರು ಬಿಗಿ ಹಿಡ್ಕೊಳ್ಳಿ.!]

  ಮಕ್ಕಳಿಗೆ ರಜನಿ ಇಲ್ಲ ಅನ್ನಲ್ಲ.!

  ಮಕ್ಕಳಿಗೆ ರಜನಿ ಇಲ್ಲ ಅನ್ನಲ್ಲ.!

  ಇದೇ ಕೆಲಸ ಬೇರೆಯವರು 'ಮಾಡ್ತೀವಿ' ಅಂತ ಮುಂದೆ ಬಂದಿದ್ರೆ ರಜನಿ ಒಪ್ಪಿಗೆ ಸಿಗುವುದು ಕಷ್ಟ ಆಗ್ತಿತ್ತು. ಆದ್ರೆ, ಸ್ವಂತ ಮಕ್ಕಳೇ 'ಮಾಡ್ತೀವಿ' ಅಂತಿರುವುದರಿಂದ ರಜನಿಕಾಂತ್ ಇಲ್ಲ ಅನ್ನೋಕೆ ಸಾಧ್ಯ ಇಲ್ಲ ಎನ್ನುತ್ತಿದ್ದಾರೆ ಕಾಲಿವುಡ್ ಸಿನಿ ಪಂಡಿತರು. ['ಕಬಾಲಿ'ಯ ಕಂಡಕ್ಟರ್ ದಿನಗಳು ಕನ್ನಡಿಗ ಕಂಡಂತೆ!]

  ಚಿತ್ರರಂಗದಲ್ಲಿ ಇಬ್ಬರೂ ಅನುಭವಿ

  ಚಿತ್ರರಂಗದಲ್ಲಿ ಇಬ್ಬರೂ ಅನುಭವಿ

  ತಮಿಳು ಸಿನಿ ಅಂಗಳದಲ್ಲಿ ಸೌಂದರ್ಯ ಅಶ್ವಿನ್ ಮತ್ತು ಐಶ್ವರ್ಯ ಧನುಷ್ ಅನುಭವಿಗಳು. ಹೀಗಾಗಿ ರಜನಿಕಾಂತ್ ಜೀವನಗಾಥೆಯನ್ನ ಸಮರ್ಪಕವಾಗಿ ನಿಭಾಯಿಸುವ ಪ್ರತಿಭೆ ಅವರಿಗಿದೆ.

  ಕಾಲಿವುಡ್ ನಲ್ಲಿ ಸೌಂದರ್ಯ ಅಶ್ವಿನ್

  ಕಾಲಿವುಡ್ ನಲ್ಲಿ ಸೌಂದರ್ಯ ಅಶ್ವಿನ್

  ಅಪ್ಪ ರಜನಿಕಾಂತ್ ಅಭಿನಯದ 'ಪಡೆಯಪ್ಪ', 'ಬಾಬಾ', 'ಚಂದ್ರಮುಖಿ' ಚಿತ್ರಗಳಿಗೆ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಿದ್ದ ಸೌಂದರ್ಯ ಅಶ್ವಿನ್ 'ಗೋವಾ' ಚಿತ್ರಕ್ಕೆ ಬಂಡವಾಳ ಹಾಕಿದ್ದರು.

  ಅಪ್ಪನಿಗೆ ಆಗಲೇ ಆಕ್ಷನ್ ಕಟ್ ಹೇಳಿದ್ದಾರೆ!

  ಅಪ್ಪನಿಗೆ ಆಗಲೇ ಆಕ್ಷನ್ ಕಟ್ ಹೇಳಿದ್ದಾರೆ!

  ಭಾರತದ ಮೊದಲ ಮೋಷನ್ ಕ್ಯಾಪ್ಚರ್ ಸಿನಿಮಾ 'ಕೊಚ್ಚಡಯಾನ್' ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಅಪ್ಪ ರಜನಿಗೆ ಸೌಂದರ್ಯ ಆಕ್ಷನ್ ಕಟ್ ಹೇಳಿದ್ದಾಗಿದೆ.

  ಕಾಲಿವುಡ್ ನಲ್ಲಿ ಐಶ್ವರ್ಯ ಧನುಷ್

  ಕಾಲಿವುಡ್ ನಲ್ಲಿ ಐಶ್ವರ್ಯ ಧನುಷ್

  ಪತಿ ಧನುಷ್ ಅಭಿನಯದ ಹಿಟ್ ಸಿನಿಮಾ '3' ಹಾಗೂ 'ವೈ ರಾಜಾ ವೈ' ಚಿತ್ರಗಳಿಗೆ ಐಶ್ವರ್ಯ ಧನುಷ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಉತ್ತಮ ಗಾಯಕಿ ಕೂಡ ಆಗಿರುವ ಐಶ್ವರ್ಯ ಕೆಲ ಸಿನಿಮಾಗಳಲ್ಲಿ ಗಾನಸುಧೆ ಹರಿಸಿದ್ದಾರೆ.

  ಅಪ್ಪನ ಚಿತ್ರಕ್ಕೆ ಅಕ್ಕ-ತಂಗಿಯರು ಒಂದಾಗ್ತಿದ್ದಾರೆ.!

  ಅಪ್ಪನ ಚಿತ್ರಕ್ಕೆ ಅಕ್ಕ-ತಂಗಿಯರು ಒಂದಾಗ್ತಿದ್ದಾರೆ.!

  ಕಾಲಿವುಡ್ ನಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಸೌಂದರ್ಯ ಅಶ್ವಿನ್ ಮತ್ತು ಐಶ್ವರ್ಯ ಧನುಷ್ ಇದೀಗ ಅಪ್ಪನ ಜೀವನಚರಿತ್ರೆಯನ್ನ ತೆರೆಮೇಲೆ ತರಲು ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

  ಇಬ್ಬರಲ್ಲಿ ನಿರ್ದೇಶಕರು ಯಾರು.?

  ಇಬ್ಬರಲ್ಲಿ ನಿರ್ದೇಶಕರು ಯಾರು.?

  ಈ ಪ್ರಶ್ನೆಗೆ ಅಕ್ಕ-ತಂಗಿಯರ ಬಳಿ ಸದ್ಯಕ್ಕೆ ಉತ್ತರ ಇಲ್ಲ.

  ಸೌಂದರ್ಯ ಹೇಳಿದ್ದು ಹೀಗೆ....

  ಸೌಂದರ್ಯ ಹೇಳಿದ್ದು ಹೀಗೆ....

  ''ಅಪ್ಪನ ಜೀವನ ಕುರಿತು ಸಿನಿಮಾ ಮಾಡುವ ಪ್ಲಾನ್ ಇದೆ. ಐಶ್ವರ್ಯ ಈಗಾಗಲೇ ಪುಸ್ತಕ ಬರೆಯುತ್ತಿದ್ದಾರೆ. ಅದನ್ನ ಸಿನಿಮಾ ರೂಪದಲ್ಲಿ ಜನರಿಗೆ ತಲುಪಿಸುವ ಉದ್ದೇಶ ಕೂಡ ಇದೆ'' ಎಂದಿದ್ದಾರೆ ಸೌಂದರ್ಯ ಅಶ್ವಿನ್

  ರಹಸ್ಯಗಳು ಬಯಲಿಗೆ.?

  ರಹಸ್ಯಗಳು ಬಯಲಿಗೆ.?

  ರಜನಿಕಾಂತ್ ಲೈಫ್ ಸ್ಟೋರಿಯನ್ನ ತೆರೆಮೇಲೆ ತರುವ ಮೂಲಕ ಜನಸಾಮಾನ್ಯರಿಗೆ ತಿಳಿಯದ ಅವರ ಎಷ್ಟೋ ಸತ್ಯಗಳು ಬಯಲಿಗೆ ಬರಬಹುದು ಎಂಬ ನಿರೀಕ್ಷೆ ಇದೆ.

  English summary
  Super Star Rajinikanth's daughters Soundarya Ashwin and Aishwarya Dhanush are planning to join hands to make a biopic on their father.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X