»   » ಭಾರತ ಸುಂದರಿಯಾಗಿ ಆಯ್ಕೆಯಾದ ನಟಿ ನಮಿತಾ!

ಭಾರತ ಸುಂದರಿಯಾಗಿ ಆಯ್ಕೆಯಾದ ನಟಿ ನಮಿತಾ!

Posted By:
Subscribe to Filmibeat Kannada
ಭಾರತ ಸುಂದರಿಯಾಗಿ ಆಯ್ಕೆಯಾಗಿದ್ದಾರೆ ನಮಿತಾ. 'ಸೌತ್ ಇಂಡಿಯನ್ ಬ್ಯೂಟಿ' ನಮಿತಾ, ಜಪಾನಿನ ಪ್ರತಿಷ್ಠಿತ ವಾಹಿನಿಗೆ 'ಬ್ಯೂಟಿ ಆಫ್ ಇಂಡಿಯಾ' ಆಗಿ ಕಾಣಿಸಿದ್ದಾರೆ. ನಮಿತಾ ಸುಂದರಿ ಎಂಬುವುದರಲ್ಲಿ ಯಾವುದೇ ಪುರುಷರಿಗೆ ಅನುಮಾನವಿಲ್ಲ ಬಿಡಿ!. ಆದರೆ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವವರಂತೆ ಈ ನಮಿತಾ ಯಾರ ಕಣ್ಣಿಗೂ ಕಾಣಿಸಿಲ್ಲ. ಅದ್ಹೇಗೆ ಜಪಾನಿನಿ ವಾಹಿನಿ ಕಣ್ಣಿಗೆ ಹಾಗೆ ಕಂಡರೋ ಎಂಬುದಷ್ಟೇ ಅಚ್ಚರಿ. ಅದಕ್ಕೂ ಉತ್ತರವಿದೆ, ಓದಿಕೊಳ್ಳಿ...

ಸಾಮಾನ್ಯವಾಗಿ ಜಗತ್ತಿನ ಸೌಂದರ್ಯ ಸ್ಪರ್ಧೆಗಳಲ್ಲಿ ಗಜಗಾಮಿನಿ ತರಹದವರು ಸುಂದರಿಯಾಗಿ ಆಯ್ಕೆಯಾಗುವುದಿಲ್ಲ. ಭಾರತದಲ್ಲಿ ಈವರೆಗೆ ಸುಂದರಿಯಾಗಿ ಆಯ್ಕೆಯಾದವರಲ್ಲಿ ಯಾರೂ ಕೂಡ ನಮಿತಾರಂತಿಲ್ಲ. ಅದೊಂದೇ ಮಾನದಂಡವಲ್ಲದಿದ್ದರೂ ಬೇರೆ ರೀತಿಯಲ್ಲಿ ನೋಡಿದರೂ ಇಂದಿಗೂ ಬಹುತೇಕ ಭಾರತೀಯರ ಪ್ರಕಾರ 'ಒನ್ ಅಂಡ್ ಓನ್ಲೀ' ಸುಂದರಿ ಎಂದರೆ ಕಂಡಕಂಡವರೆಲ್ಲಾ ಅಲ್ಲ, ಅದು ಐಶ್ವರ್ಯಾ ರೈ ಮಾತ್ರ!

ಟೋಕಿಯೋ ಮೂಲದ ಪ್ರತಿಷ್ಠಿತ ವಾಹಿನಿ ಆಯ್ಕೆ ಮಾಡುವ ರೀತಿ ಬೇರೆಯೇ ಇದೆ. ಅಲ್ಲಿ ಪ್ರತಿವರ್ಷ ವಿವಿಧ ದೇಶಗಳ ಸುಂದರಿಯರ ಫೋಟೋಗಳನ್ನು ಕಲೆಹಾಕಿಕೊಂಡು ನೋಡಿ, ಆ ಫೋಟೋದಲ್ಲಿ ಕಾಣುವ ಅವರ ಸೌಂದರ್ಯವನ್ನೇ ಅಳತೇಗೋಲಾಗಿಸಿ, ಒಂದೊಂದು ದೇಶದಿಂದ ಒಬ್ಬೊಬ್ಬ ಸುಂದರಿಯನ್ನು ಆಯ್ಕೆಮಾಡುತ್ತದೆ. ಹೀಗೆ ಆಯ್ಕೆ ಮುಗಿದ ಮೇಲೆ 'ಬ್ಯೂಟಿ ಆಫ್ ವರ್ಲ್ಡ್' ಆಯ್ಕೆ ನಡೆಯುತ್ತದೆ. ಹೀಗೆ ಅಲ್ಲಿ 'ಬ್ಯೂಟಿ ಆಫ್ ಇಂಡಿಯಾ' ಆಗಿ ಆಯ್ಕೆಯಾದವರೇ ನಮ್ಮ ಈ ನಮಿತಾ.

ಆದರೆ, ಕಳೆದ 02, ನವೆಂಬರ್ 2012 ರಂದು ನಡೆದ ಸಮಾರಂಭದಲ್ಲಿ 'ಬ್ಯೂಟಿ ಆಫ್ ವರ್ಲ್ಡ್' ಪಟ್ಟಗಿಟ್ಟಿಸುವಲ್ಲಿ ಸೋತರಂತೆ ನಮಿತಾ. ಆದರೇನಂತೆ 'ಬ್ಯೂಟಿ ಆಫ್ ಇಂಡಿಯಾ' ಆಗಿ ಆಯ್ಕೆಯಾಗಿದ್ದು ಅವರಿಗೂ ಅವರ ಅಭಿಮಾನಿಗಳಿಗೂ ಭಾರೀ ಖುಷಿ ತಂದಿದೆಯಂತೆ. ಕಾರಣ, 'ಸೌತ್ ಇಂಡಿಯಾ' ಪಡ್ಡೆಗಳ ಪಾಲಿನ 'ಫೇವರೆಟ್' ಆಗಿರುವ ನಮಿತಾ ಹೀಗೆ ಇಂಡಿಯಾ ಸುಂದರಿಯಾಗಿ ಜಪಾನಿಗರ ಕಣ್ಣಿಗೆ ಕಂಡರೆ ಯಾರಿಗೆ ತಾನೇ ಖುಷಿಯಾಗೊಲ್ಲ ಹೇಳಿ!

ಅದೇ ಆಗಿದೆ. ಇಂಡಿಯಾ ಬ್ಯೂಟಿ ಆಗಿರುವ ನಮಿತಾಗೂ ಅವರ ಮಹಾ ಅಭಿಮಾನಿಗಳಿಗೂ ಭಾರಿ ಖುಷಿಯಾಗಿದೆ. ಇನ್ಮುಂದೆ ನಮಿತಾ ಯಾವುದಾದರೂ ದೇಶದ ಸುಂದರಿ ಸ್ಪರ್ದೇಯಲ್ಲಿ ವಿಶ್ವಸುಂದರಿಯಾದರೆ ಆಶ್ಚರ್ಯವೇನಿದೆ ಹೇಳಿ...! (ಏಜೆನ್ಸೀಸ್)

English summary
South Indian Fame Actress Namitha selected as 'Beauty of India' in Japan TV Channel Competition. she won the title of 'Beauty of India', but failed to select as 'Beauty of World'. Even she failed in world level. her fans are happy because of her title 'Beayty of India'.
 
Please Wait while comments are loading...