For Quick Alerts
  ALLOW NOTIFICATIONS  
  For Daily Alerts

  ಶ್ರೀಲೀಲಾ ಉಳಿದುಕೊಂಡಿರೋ ಹೋಟೆಲ್ ರೂಮಿನ ಬೆಲೆ ಕೇಳಿ ಟಾಲಿವುಡ್ ಮಂದಿ ಸುಸ್ತೋ ಸುಸ್ತು!

  |

  ಸ್ಯಾಂಡಲ್‌ವುಡ್‌ನ 'ಕಿಸ್' ಸಿನಿಮಾದಿಂದ ಸಿನಿ ಜರ್ನಿ ಆರಂಭಿಸಿದ ನಟಿ ಶ್ರೀಲೀಲಾ. ಇಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರು, ಹೈದರಾಬಾದ್ ಅಂತ ಶ್ರೀಲೀಲಾ ಓಡಾಡಿಕೊಂಡಿದ್ದಾರೆ.

  ಶ್ರೀಲೀಲಾ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತ ಬೇಡದ ವಿಷಯಗಳಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶ್ರೀಲೀಲಾ ತಾಯಿ ಸ್ವರ್ಣಲತಾ ಕೂಡ ವಿವಾದದಲ್ಲಿ ಸಿಲುಕಿದ್ದರು. ಈಗ ಟಾಲಿವುಡ್‌ನಲ್ಲಿ ಉದಯೋನ್ಮುಕ ನಟಿ ಶ್ರೀಲೀಲಾ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಅವರು ಉಳಿದುಕೊಂಡಿರುವ ಹೋಟೆಲ್ ರೂಮಿನ ಬೆಲೆ.

  ಟಾಲಿವುಡ್ ಮಂದಿಗೆ ನಿದ್ದೆ ಕೆಡಿಸಿರೋದು ಶ್ರೀಲೀಲಾ ಉಳಿದುಕೊಂಡಿರೋ ಐಶಾರಾಮಿ ಹೋಟೆಲ್ ಹಾಗೂ ಅವರ ರೂಮಿನ ಬೆಲೆ. ಈ ಬಗ್ಗೆ ಟಾಲಿವುಡ್‌ನ ವೆಬ್ ಸೈಟ್‌ ಒಂದು ವರದಿ ಮಾಡಿದ್ದು, ನಿರ್ಮಾಪಕರಿಗೆ ಇದು ಹೊರೆಯಾಗುವುದಿಲ್ಲವೇ ಎಂದು ತನ್ನ ವರದಿಯಲ್ಲಿ ಪ್ರಶ್ನೆ ಮಾಡಿದೆ. ಅಷ್ಟಕ್ಕೂ ಶ್ರೀ ಲೀಲಾ ಉಳಿದುಕೊಂಡ ಆ ರೂಮಿ ಬೆಲೆ ಎಷ್ಟು? ಒಂದು ಸಿನಿಮಾಗೆ ಪಡೆಯೋ ಸಂಭಾವನೆ ಎಷ್ಟು? ಎಂದು ತಿಳಿಯಲು ಮುಂದೆ ಓದಿ.

  ಶ್ರೀಲೀಲಾ ಸಂಭಾವನೆ ಎಷ್ಟು?

  ಶ್ರೀಲೀಲಾ ಸಂಭಾವನೆ ಎಷ್ಟು?

  ದಕ್ಷಿಣ ಭಾರತದ ಕ್ಯೂಟ್ ನಟಿ ಶ್ರೀಲೀಲಾ. ಕನ್ನಡ ಹಾಗೂ ತೆಲುಗು ಭಾಷೆಯ ಹಲವು ಸಿನಿಮಾಗಳಲ್ಲಿ ಈಗಾಗಲೇ ನಟಿಸುತ್ತಿದ್ದಾರೆ. ಕನ್ನಡ ಚಿತ್ರಕ್ಕೆ ಶ್ರೀಲೀಲಾ ಪಡೆಯೋ ಸಂಭಾವನೆ ಎಷ್ಟು ಅನ್ನೋದು ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಟಾಲಿವುಡ್ ಸಿನಿಮಾವೊಂದಕ್ಕೆ ಶ್ರೀಲೀಲಾ ಒಂದು ಕೋಟಿ ರೂಪಾಯಿ ಡಿಮ್ಯಾಂಡ್ ಮಾಡುತ್ತಾರೆ ಅನ್ನೋದನ್ನು ಟಾಲಿವುಡ್ ಸುದ್ದಿಯನ್ನು ಬಿತ್ತರಿಸುವ ವೆಬ್‌ಸೈಟ್‌ಗಳು ವರದಿ ಮಾಡಿವೆ. ಸದ್ಯ ಶ್ರೀಲೀಲಾ ಕೈಯಲ್ಲಿ ಮೂರರಿಂದ ನಾಲ್ಕು ತೆಲುಗು ಸಿನಿಮಾಗಳಿವೆ ಅಂತಾನೂ ಹೇಳಿದೆ.

  ಶ್ರೀಲೀಲಾ ಐಶಾರಾಮಿ ರೂಂ

  ಶ್ರೀಲೀಲಾ ಐಶಾರಾಮಿ ರೂಂ

  ತೆಲುಗು ವೆಬ್ ಸೈಟ್ ಪ್ರಕಾರ, ಶ್ರೀಲೀಲಾ ಹೈದರಾಬಾದ್‌ನಲ್ಲಿ ತೆಲುಗು ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ 7 ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಸುಮಾರು 30 ದಿನ ಶೂಟಿಂಗ್ ಇರುವುದರಿಂದ ಇದೇ ಹೋಟೆಲ್‌ನಲ್ಲಿಯೇ ಇರುತ್ತಾರೆ. ಈಗ ಅವರ ಉಳಿದುಕೊಂಡಿರುವ ರೂಮಿನ ಬೆಲೆ ಒಂದು ದಿನಕ್ಕೆ 22 ಸಾವಿರ ಅಂತೆ. ಟ್ಯಾಕ್ಸ್ ಎಲ್ಲವೂ ಸೇರಿದರೆ, ಮೂವತ್ತು ದಿನಗಳಿಗೆ 6 ಲಕ್ಷಕ್ಕೂ ಹೆಚ್ಚು ಹಣ ಆಗುತ್ತೆ. ಇನ್ನೂ ಈಗ ತಾನೆ ಬೆಳೆಯುತ್ತಿರುವ ನಟಿಗೆ ನಿರ್ಮಾಣ ಸಂಸ್ಥೆ ಯಾಕಿಷ್ಟು ಹಣ ಖರ್ಚು ಮಾಡುತ್ತಿದೆ ಎಂದು ವರದಿ ಮಾಡಲಾಗಿದೆ.

  ಐಶಾರಾಮಿ ಟ್ರೀಟ್ಮೆಂಟ್ ಕೊಟ್ರೆ ಸಮಸ್ಯೆ ಏನು?

  ಐಶಾರಾಮಿ ಟ್ರೀಟ್ಮೆಂಟ್ ಕೊಟ್ರೆ ಸಮಸ್ಯೆ ಏನು?

  ಟಾಲಿವುಡ್ ನಿರ್ದೇಶಕ ತ್ರಿವಿಕ್ರಮ್ ಪತ್ನಿ ಸಾಯಿ ಸೌಜನ್ಯ ಹಾಗೂ ಮಹೇಶ್ ಬಾಬು ಎಂಟರ್‌ಟೈನ್ಮೆಂಟ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. 'ಉಪ್ಪೇನ'ದಂತಹ ಸೂಪರ್‌ ಹಿಟ್ ಸಿನಿಮಾ ಕೊಟ್ಟಿರೋ ವೈಷ್ಣವ್ ತೇಜ್ ಈ ಸಿನಿಮಾದ ಹೀರೊ. ಪ್ರಡ್ಯೂಸರ್ಸ್ ಗಿಲ್ಡ್ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಹೀರೊಯಿನ್‌ಗಳಿಗೆ ನೀಡುತ್ತಿರುವ ಸಂಭಾವನೆಯಲ್ಲಿಯೇ ಅವರು ಉಳಿದುಕೊಳ್ಳುವ ವೆಚ್ಚವನ್ನು ಭರಿಸಬೇಕೆಂಬ ನಿಯಮ ತರಲಾಗಿದೆ ಎನ್ನಲಾಗಿದೆ. ಆದರೂ, ನಿರ್ಮಾಪಕರು ವಿಶೇಷ ಟ್ರೀಟ್ಮೆಂಟ್ ಕೊಡುತ್ತಿದ್ದಾರೆ ಅನ್ನೋದು ಹಲವರ ವಾದ.

  ಇನ್ನೊಂದು ವಾದವೇನು?

  ಇನ್ನೊಂದು ವಾದವೇನು?

  ಶ್ರೀಲೀಲಾಗೆ ಐಶಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರಲ್ಲಿ ತಪ್ಪೇನಿದೆ? ಅಂತ ಹಲವರು ವಾದ. ಹೀರೊ ವೈಷ್ಣವ್ ತೇಜ್‌ಗೆ 'ಉಪ್ಪೇನ' ಬಿಟ್ಟರೆ ಬೇರೆ ಹಿಟ್ ಸಿನಿಮಾ ನೀಡಿಲ್ಲ. ಹೀಗಿರುವಾಗ, ವೈಷ್ಣವ್‌ಗೆ 3 ರಿಂದ 4 ಕೋಟಿ ರೂ. ಸಂಭಾವನೆ ಪಡೆಯುವಾಗ ನಾಯಕಿ ಉಳಿದುಕೊಳ್ಳಲು 10 ಲಕ್ಷ ರೂ. ಖರ್ಚು ಮಾಡಿದರೆ ತಪ್ಪೇನು? ಅಂತಿದ್ದಾರೆ.

  English summary
  Srileela Staying In 7 Star Hotel Suit Room For 30 Days Cost Around 6 Lakhs, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X